ರಿಪ್ಪನ್‌ಪೇಟೆ : ಮನುಷ್ಯನ ಹುಟ್ಟು- ಆಕಸ್ಮಿಕ ಸಾವು ನಿಶ್ಚಿತ ಈ ಮಧ್ಯದಲ್ಲಿನ ಬದುಕು ಜನಮಾನಸದಲ್ಲಿ ಉಳಿಯವಂತಾಗಲು ಸದಾ ಶ್ರಮಿಸುವಂತಾಗಬೇಕು ಅಂತಹ ಕಾರ್ಯದಲ್ಲಿ ಜಿ.ಆರ್.ಕೆ.ಮೂರ್ತಿ ಜನಸೇವಾ ಕಾರ್ಯ ಪ್ರಶಂಸನೀಯವೆಂದು ವೈದ್ಯರತ್ನ, ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ ಹೇಳಿದರು.
ಪಟ್ಟಣದ ಜಿ.ಆರ್.ಕೆ.ಮೂರ್ತಿ ಸೇವಾ ಟ್ರಸ್ಟ್ ಗೆಳೆಯರ ಬಳಗ ಇವರ ಸಹಯೋಗದಲ್ಲಿ ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಕ್ರೀಡಾಂಗಣದಲ್ಲಿ ಅಯೋಜಿಸಲಾದ ಅಭಿನಂದನಾ ಮಹೋತ್ಸವ ಮತ್ತು ನಗೆಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಸ್ವಾರ್ಥ ಮನೋಭಾವನೆಯಿಂದಾಗಿ ನಮ್ಮ ತನವನ್ನು ಮರೆಯುವಂತಾಗಿದೆ. ಸಂಬಂಧಗಳಿಂದಲೂ ದೂರವಾಗುತ್ತಿದ್ದೇವೆಂದು ವಿಷಾದ ವ್ಯಕ್ತಪಡಿಸಿ, ನಾವು ಮಾಡುವ ಕೆಲಸ ಕಾರ್ಯಗಳು ಮಾತಾಗಬೇಕು ಮಾತೆ ಮಾತಾಗದಂತೆ ಸಮಾಜ ಮುಖಿ ಕಾರ್ಯಗಳಿಂದ ಸರ್ವರು ಅಡಿಕೊಳ್ಳುವಂತಾಗುವ ವ್ಯಕ್ತಿಯಾಗಿ ರೂಪುಗೊಳ್ಳುವಂತಾದ ಜಿ.ಆರ್.ಕೆ.ಮೂರ್ತಿಯವರ 11ನೇ ವರ್ಷದ ಸ್ಮರಣೋತ್ಸವ ಇತರರಿಗೆ ಮಾದರಿಯಾಗಲಿ ಎಂದರು.
ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಅಲ್ಪ ಅವಧಿಯಲ್ಲಿ ಅಪ್ಪು ಮಾಡಿರುವ ಮಹಾತ್ಕಾರ್ಯಗಳು ಎಲ್ಲರ ಮನದಲ್ಲಿ ಉಳಿದಿರುವುದು ಅಂತಹ ವ್ಯಕ್ತಿತ್ವದ ಮೇರು ನಟನಂತೆ ಬೆಳೆಯಲಾಗದಿದ್ದರೂ ಕೂಡಾ ನಮ್ಮೂರಿನಲ್ಲಿಯೇ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಸಹಾಯ ಮಾಡುವ ಮನೋಭಾವನೆ ಬೆಳಸಿಕೊಳ್ಳುವಂತೆ ಇಂದಿನ ಯುವಜನಾಂಗ ಮುಂದಾಗಬೇಕು. ಹಣಗಳಿಕೆಯೇ ಗುರಿಯಾಗದೇ ಅಲ್ಪಸ್ವಲ್ಪ ಹಣವನ್ನು ಪುಣ್ಯದ ಕಾರ್ಯಗಳಿಗೆ ಬಳಸುವ ಮೂಲಕ ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡಿ ಎಂದರು.
ಜನಪರ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಭೆಯಲ್ಲಿ ಮಹಾಲಕ್ಷ್ಮಿ, ಅಮ್ಮೀರ್‌ಹಂಜಾ, ಜಿ.ಎಸ್.ವರದರಾಜ್, ಆರ್.ರಾಘವೇಂದ್ರ, ಎನ್.ವರ್ತೇಶ್,ಆರ್.ಟಿ.ಗೋಪಾಲ್,ತ ಮ ನರಸಿಂಹ ಮಾತನಾಡಿದರು.
ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾ.ಪಂ.ಮಾಜಿ ಅಧ್ಯಕ್ಷ ವಾಸಪ್ಪಗೌಡ, ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಘವೇಂದ್ರ, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ, ಗ್ರಾ.ಪಂ.ಸದಸ್ಯರಾದ ಧನಲಕ್ಷ್ಮಿ, ದಾನಮ್ಮ, ಅಶ್ವಿನಿ ರವಿಶಂಕರ, ಪಿ.ರಮೇಶ್, ಟಿ.ಸುಂದರೇಶ್, ನಿರುಪಮಾ, ವೇದಾವತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾಗರತ್ನ ದೇವರಾಜ್ ಪ್ರಾರ್ಥಿಸಿದರು.ಶಿಕ್ಷಕ ಉಮೇಶ್ ಸ್ವಾಗತಿಸಿದರು. ಶಿಕ್ಷಕಿ ಅಂಬಿಕಾ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಹಾಗೂ ಆಶಾ, ಅಂಗನವಾಡಿ, ಅರೋಗ್ಯ, ರಕ್ಷಣಾ, ಮೆಸ್ಕಾಂ ಸೇರಿದಂತೆ ಇತರ ಇಲಾಖೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಅಭಿನವ ಬೀಚಿ ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ್, ನರಸಿಂಹಜೋಷಿ, ಬಸವರಾಜ್ ಮಾಮನಿ ಇವರಿಂದ ನಗೆಹಬ್ಬ ಹಾಗೂ ಕಮಲಶಿಲೆ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ಜರುಗಿತು.