ರಿಪ್ಪನ್‌ಪೇಟೆ : ಇಂದು ಸಂಜೆ 07 ಗಂಟೆಗೆ ಪಟ್ಟಣದಲ್ಲಿ ಹಾಸ್ಯಬ್ರಹ್ಮ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಾಮನಿ ರವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬರುವೆ ಶಾಲಾ ಮೈದಾನದಲ್ಲಿ ಇಂದು ಜಿ.ಆರ್.ಕೆ. ಮೂರ್ತಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಅಭಿನಂದನಾ ಮಹೋತ್ಸವ ಹಾಗೂ ನಗೆಹಬ್ಬ ಕಾರ್ಯಕ್ರಮದಲ್ಲಿ ಅಭಿನವ ಬೀಚಿ, ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಾಮನಿಯವರಿಂದ ‘ನಗೆ ಹಬ್ಬ’ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ, ಅರಸಾಳು, ಕೆಂಚನಾಲ, ಬಾಳೂರು, ಹರತಾಳು, ಬೆಳ್ಳೂರು, ಹೆದ್ದಾರಿಪುರ, ಅಮೃತ, ಚಿಕ್ಕಜೇನಿ, ಮಾರುತಿಪುರ, ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಗಳ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಎರಡೂ ದಿನದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಅಂಗನವಾಡಿ, ಆಶಾ, ಆರೋಗ್ಯ, ಶಿಕ್ಷಣ, ಗೃಹ, ಮೆಸ್ಕಾಂ, ಪತ್ರಿಕಾ ಮಾದ್ಯಮ, ಕಂದಾಯ ಇನ್ನಿತರ ಇಲಾಖೆಗಳೊಂದಿಗೆ ಕಲೆ, ಸಾಹಿತ್ಯ, ಸಾಂಸ್ಕೃತಿ, ಸಂಗೀತ, ಕ್ರೀಡೆ, ಹೋರಾಟ ಕ್ಷೇತ್ರದಲ್ಲಿ ಸಮಾಜದ ಇನ್ನಿತರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸುಮಾರು 700 ಜನರಿಗೆ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಗೌರವ ಸನ್ಮಾನ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಹಿನ್ನಲೆಯಲ್ಲಿ ಬರುವೆ ಶಾಲಾ ಮೈದಾನದಲ್ಲಿ ಭರದ ಸಿದ್ದತೆ ನಡೆಯುತ್ತಿದೆ.
ಹಾಸ್ಯ ಕಾರ್ಯಕ್ರಮದ ನಂತರ ಕಮಲಶಿಲೆ ತಂಡದವರಿಂದ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.