ಜಿಲ್ಲಾ ಸುದ್ದಿ:
ಅಗಸ್ಟ್ 21 ರಂದು ಮಳಲಿಮಠದಲ್ಲಿ ನಾಗರಪಂಚಮಿ ವಿಶೇಷ ಪೂಜಾ ಕಾರ್ಯಕ್ರಮ
ಅಗಸ್ಟ್ 21 ರಂದು ಮಳಲಿಮಠದಲ್ಲಿ ನಾಗರಪಂಚಮಿ ವಿಶೇಷ ಪೂಜಾ ಕಾರ್ಯಕ್ರಮ ರಿಪ್ಪನ್‌ಪೇಟೆ : ಇದೇ ಅಗಸ್ಟ್ 21 ರಂದು ನಾಗರ ಪಂಚಮಿ ಹಬ್ಬದ ಆಂಗವಾಗಿ ಇತಿಹಾಸ ಪ್ರಸಿದ್ದ ಮಳಲಿಮಠದಲ್ಲಿ ಗುರುನಾರ್ಗಾನ ಸ್ವಾಮಿಗೆ ಮಳಲಿಮಠದ ಪಟ್ಯಾಧ್ಯಕ್ಷರಾದ ಶ್ರೀ ಷ.ಬ್ರ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿಯವರ ದಿವ್ಯಸಾನಿಧ್ಯವದಲ್ಲಿ ಮಹಾರುದ್ರಾಭಿಷೇಕ ಆಭಿಷೇಕ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿದೆ. ಈ ವಿಶೇಷ ನಾಗರಪಂಚಮಿಯ ಅಂಗವಾಗಿ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದ್ದು ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನಾಶೀರ್ವಾದ ಪಡೆದುಕೊಳ್ಳುವಂತೆ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ತೆಕ್ಕೆಗೆ ಜಾರಿದ ತ್ಯಾಗರ್ತಿ ಗ್ರಾಪಂ ಆಡಳಿತ ಚುಕ್ಕಾಣಿ – ಗೆಲುವಿನ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ತೀವ್ರ ಮುಖಭಂಗ|sagara
ಕಾಂಗ್ರೆಸ್ ತೆಕ್ಕೆಗೆ ಜಾರಿದ ತ್ಯಾಗರ್ತಿ ಗ್ರಾಪಂ ಆಡಳಿತ ಚುಕ್ಕಾಣಿ – ಗೆಲುವಿನ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ತೀವ್ರ ಮುಖಭಂಗ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯ್ತಿಯಲ್ಲಿ ಗರಿಷ್ಠ ಸಂಖ್ಯೆಯ ಬಿಜೆಪಿ ಬೆಂಬಲಿತ ಸದಸ್ಯರಿದ್ದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ ಘಟನೆ ಬುಧವಾರ ನಡೆದಿದ್ದು, ತಮ್ಮೊಳಗೆ ಅಡ್ಡ ಮತದಾನ ಮಾಡಿದವರನ್ನು ಪತ್ತೆ ಮಾಡಲು ಹೋದರೆ ಎಲ್ಲಾ ಎಂಟು ಜನ ಬಿಜೆಪಿ ಅನುಯಾಯಿಗಳೂ ಬಿಜೆಪಿಗೇ ಮತ ಹಾಕಿರುವುದಾಗಿ ಪ್ರಮಾಣ ಮಾಡುವ ಮೂಲಕ ಪಕ್ಷದ ನಾಯಕರನ್ನು ಹಾಗೂ ದೇವರನ್ನು ಗೊಂದಲದಲ್ಲಿ ಬೀಳಿಸಿದ…
ಎದೆಯ ಮೇಲೆ ಹೆತ್ತವರು ಮತ್ತು ನಟ ಸುದೀಪ್ ಹಚ್ಚೆ ಹಾಕಿಸಿಕೊಂಡು ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!!!!|sudeep fan
ಎದೆಯ ಮೇಲೆ ಹೆತ್ತವರು ಮತ್ತು ನಟ ಸುದೀಪ್ ಹಚ್ಚೆ ಹಾಕಿಸಿಕೊಂಡು ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!!!! ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬವನ್ನು ನಟ ಕಿಚ್ಚ ಸುದೀಪ್ ಅಭಿಮಾನಿಯೊಬ್ಬ ಆಚರಿಸಿಕೊಂಡಿದ್ದಾನೆ. ತನ್ನ ಹುಟ್ಟುಹಬ್ಬದಂದು ನೆಚ್ಚಿನ ನಟ ಹಾಗೂ ಹೆತ್ತ ತಂದೆ ತಾಯಿಗೆ ವಿಶಿಷ್ಟ ಉಡುಗೊರೆ ನೀಡಿದ್ದಾನೆ. ಶಿವಮೊಗ್ಗ ತಾಲೂಕಿನ ಕುಸುಗೂರು ಗ್ರಾಮದ ಸಾಮಾನ್ಯ ರೈತ ಕುಟುಂಬದ ಯುವಕ ಸಮರ್ಥ್ ಗೌಡ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೌದು! ವಿಭಿನ್ನವಾದ ವಿಶಿಷ್ಟವಾದ ನಿರ್ಮಲ ಪ್ರೀತಿ ಅಭಿಮಾನವನ್ನು ಕಂಡು ಯಾರಾದರೂ ಜೈ…
ರಿಪ್ಪನ್‌ಪೇಟೆ : ಮನೆಯೊಂದರ ಕಾರ್ ಶೆಡ್ ನಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ
ರಿಪ್ಪನ್‌ಪೇಟೆ : ಮನೆಯೊಂದರ ಕಾರ್ ಶೆಡ್ ನಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಪುರಮಠ ಗ್ರಾಮದ ಗೌರಮ್ಮ ಎಂಬುವವರ ಮನೆಯ ಕಾರ್ ಶೆಡ್ ನಲ್ಲಿ ಇಂದು ರಾತ್ರಿ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಪ್ರತ್ಯಕ್ಷವಾಗಿದೆ. ಮನೆಯ ಕಾರ್ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ನೋಡಿದ ಮನೆಯವರು ಭಯಭೀತರಾಗಿ ತತ್ತಕ್ಷಣ ಉರಗ ತಜ್ಞ ಬೆಳ್ಳೂರು ನಾಗರಾಜ್ ಗೆ ಕರೆ ಮಾಡಿದ್ದಾರೆ. ವಿಷಯ…
ರಿಪ್ಪನ್ ಪೇಟೆ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ – ಸಾವಿರಾರು ವಿದ್ಯಾರ್ಥಿಗಳಿಂದ ಭಾರತ ಮಾತೆಗೆ ಜೈಕಾರ
ರಿಪ್ಪನ್ ಪೇಟೆ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ-ಸಾವಿರಾರು ವಿದ್ಯಾರ್ಥಿಗಳಿಂದ ಭಾರತ ಮಾತೆಗೆ ಜೈಕಾರ ರಿಪ್ಪನ್‌ಪೇಟೆ: ಪಟ್ಟಣದ ವಿವಿಧೆಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಗ್ರಾಮ ಪಂಚಾಯತಿ, ನಾಡಕಛೇರಿ, ಪೊಲೀಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ರೈತಸಂಪರ್ಕ ಕೇಂದ್ರ, ಸರ್ಕಾರಿ ಬಿಸಿಎಂ ವಸತಿ ನಿಲಯ, ಪ್ರಥಮದರ್ಜೆ, ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಹಿರಿಯ, ಕಿರಿಯ ಶಾಲೆ, ಮೆಸ್ಕಾಂ, ಪಶುವೈದ್ಯಕೀಯ ಆಸ್ಪತ್ರೆ, ಬ್ಯಾಂಕ್‌ಗಳು, ಅರಣ್ಯ…
ಅಂಕದ ಜೊತೆ ಬಾಂಧವ್ಯಕ್ಕೂ ಮಹತ್ವ ಕೊಡಿ – ಜಿ ಎಸ್ ನಟೇಶ್|gfgc
ಅಂಕದ ಜೊತೆ ಬಾಂಧವ್ಯಕ್ಕೂ ಮಹತ್ವ ಕೊಡಿ – ಜಿ ಎಸ್ ನಟೇಶ್ ರಿಪ್ಪನ್‌ಪೇಟೆ : ವಿದ್ಯಾರ್ಥಿಗಳು ಉತ್ತಮ ಅಂಕ ಮತ್ತು ಉದ್ಯೊಗ ಗಳಿಕೆಯಷ್ಟೇ ಜೀವನ ಎಂದು ಭಾವಿಸಬಾರದು.ಸಂಬಂಧ, ಬಾಂಧವ್ಯಗಳಿಗೆ ಮಹತ್ವ ನೀಡಬೇಕು ಎಂದು ಶಿವಮೊಗ್ಗದ ನಿವೃತ್ತ ಉಪನ್ಯಾಸಕ ಜಿ.ಎಸ್. ನಟೇಶ್ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ಸಮಾರೋಪ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಆತ್ಮೀಯರಂತೆ ಇರಬೇಕಾದ ಅನಿವಾರ್ಯತೆ ಇದೆ….
ತೀರ್ಥಹಳ್ಳಿ : ಮಾಜಿ ಸೈನಿಕ ಮನ್ಸೂರ್ ಅಹಮದ್ ನಿಧನ|tth
ತೀರ್ಥಹಳ್ಳಿ : ಮಾಜಿ ಸೈನಿಕ ಮನ್ಸೂರ್ ಅಹಮದ್ (57) ಹೈ ಬಿಪಿಯಿಂದ ಪಟ್ಟಣದ ಸೊಪ್ಪುಗುಡ್ಡೆಯಲ್ಲಿನ ತಮ್ಮ ಮನೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.ಶಂಕಿತ ಉಗ್ರ ಅಬ್ದುಲ್ ಮತೀನ್ ತಂದೆಯಾದ ಮನ್ಸೂರ್ ಅಹಮದ್ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ಸೊಪ್ಪುಗುಡ್ಡೆ ಬಳಿಯ ಪ್ರಾರ್ಥನಾ ಮಂದಿರದಲ್ಲಿ ಇಟ್ಟು ಪ್ರಾರ್ಥನೆ ನೆಡೆಸಲಾಗುತ್ತಿದೆ. ಮಾಜಿ ಸೈನಿಕನಾಗಿದ್ದ ಮನ್ಸೂರ್ ಅಹಮದ್ ಗೆ ಮೂವರು ಮಕ್ಕಳಿದ್ದು ಅದರಲ್ಲಿ ಮತೀನ್ ಮೊದಲ ಪುತ್ರನಾಗಿದ್ದಾನೆ. ಅಬ್ದುಲ್ ಮತೀನ್ ಅಹಮದ್ ತಾಹಾ. ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಆತನ ಪತ್ತೆಗಾಗಿ ಹೈದರಾಬಾದ್‌ನ ಎನ್‌ಐಎ ಮೂರು…
ಪ್ರವಾಸಿಗರ ಸ್ವರ್ಗ ಕೊಡಚಾದ್ರಿ ತಾಣಕ್ಕೆ ವಿಧಿಸಿದ್ದ ಪ್ರವೇಶ ನಿರ್ಬಂಧ ತೆರವು|kodachadri
ಪ್ರವಾಸಿಗರ ಸ್ವರ್ಗ ಕೊಡಚಾದ್ರಿ ತಾಣಕ್ಕೆ ವಿಧಿಸಿದ್ದ ಪ್ರವೇಶ ನಿರ್ಬಂಧ ತೆರವು ಹೊಸನಗರ: ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರ ಸುರಕ್ಷತೆ ದೃಷ್ಟಿಯಿಂದ ಕಳೆದ 15 ದಿನಗಳಿಂದ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಕ್ಕೆ ವಿಧಿಸಿದ ನಿರ್ಬಂಧ ವನ್ನು ಇಂದಿನಿಂದ (ಭಾನುವಾರ) ತೆರವುಗೊಳಿಸಲಾಗಿದೆ. ಕೇವಲ ವಾಹನಗಳಲ್ಲಿ ತೆರಳಲು ಮಾತ್ರ ಅವಕಾಶ ನೀಡಲಾಗಿದ್ದು, ಚಾರಣ ಮಾಡಲು ಇನ್ನೂ ಅನುಮತಿ ನೀಡಿಲ್ಲ ಎಂದು ವನ್ಯಜೀವಿ ಇಲಾಖೆ ತಿಳಿಸಿದೆ. ಕೊಡಚಾದ್ರಿಗೆ ತೆರಳುವ ರಸ್ತೆ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ವಳಪಟ್ಟಿದ್ದು, ರಸ್ತೆ ಸಂಚಾರ ಮಾಡಲು ಸಾಧ್ಯವಾಗದಷ್ಟು…
ರಿಪ್ಪನ್‌ಪೇಟೆ – ನಾವೆಲ್ಲಾ ಭಾರತೀಯರು ಎಂಬ ಘೋಷಣೆಯೊಂದಿಗೆ ಮದರಸ ವಿದ್ಯಾರ್ಥಿಗಳಿಂದ ಸೈಕಲ್ ರ‍್ಯಾಲಿ|SSF
ರಿಪ್ಪನ್‌ಪೇಟೆ – ನಾವೆಲ್ಲಾ ಭಾರತೀಯರು ಎಂಬ ಘೋಷಣೆಯೊಂದಿಗೆ ಮದರಸ ವಿದ್ಯಾರ್ಥಿಗಳಿಂದ ಸೈಕಲ್ ರ‍್ಯಾಲಿ ರಿಪ್ಪನ್‌ಪೇಟೆ : ಪಟ್ಟಣದ ಎಸ್ ಎಸ್ ಎಫ಼್ ಸಂಘಟನೆ ವತಿಯಿಂದ ತಅಝೀಜುಲ್ ಅರಬ್ಬಿಕ್ ಮದರಸ ವಿದ್ಯಾರ್ಥಿಗಳಿಂದ ನಾವೆಲ್ಲಾ ಭಾರತೀಯರು ಎಂಬ ಘೋಷಣೆಯೊಂದಿಗೆ ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ವಿನಾಯಕ ವೃತ್ತದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮುನೀರ್ ಸಖಾಫಿ SSF ಸಂಘಟನೆಯಿಂದ 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯಾದ್ಯಾಂತ ರ‍್ಯಾಲಿಯನ್ನು ಆಯೋಜಿಸಲಾಗಿದೆ. SSF ಸಂಘಟನೆಯು…
ರಿಪ್ಪನ್‌ಪೇಟೆ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಾಗರಪಂಚಮಿ ವಿಶೇಷ ಪೂಜಾ ಕಾರ್ಯಕ್ರಮ
ರಿಪ್ಪನ್‌ಪೇಟೆ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಾಗರಪಂಚಮಿ ವಿಶೇಷ ಪೂಜಾ ಕಾರ್ಯಕ್ರಮ ರಿಪ್ಪನ್‌ಪೇಟೆ;-ಇದೇ ಅಗಸ್ಟ್ 21 ರಂದು ನಾಗರ ಪಂಚಮಿ ಹಬ್ಬದ ಆಂಗವಾಗಿ ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿನ ತಿಲಕ ನಗರದ ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಗಸ್ಟ್ 21 ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ 1 ಗಂಟೆಯ ವರೆಗೆ ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರಿಗೆ ಪವಮಾನ ಆಭಿಷೇಕ,ಲ್ಷೀರಾಭೀಷೇಕ,ಎಳನೀರು…