ಜಿಲ್ಲಾ ಸುದ್ದಿ:
ಅಕ್ರಮವಾಗಿ ಸಾಗುವಾನಿ ಮರ ಸಾಗಣೆ: ಇಬ್ಬರು ಆರೋಪಿಗಳ ಬಂಧನ, ಮೂವರು ಪರಾರಿ|arrested
ಅಕ್ರಮವಾಗಿ ಸಾಗುವಾನಿ ಮರ ಸಾಗಣೆ: ಇಬ್ಬರು ಆರೋಪಿಗಳ ಬಂಧನ, ಮೂವರು ಪರಾರಿ ಶಿವಮೊಗ್ಗ : ಸಾಗುವಾನಿ ತುಂಡುಗಳನ್ನು ಕಡಿದು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂದಿಸಿದ್ದು,ಮೂವರು ತಲೆ ಮರೆಸಿಕೊಂಡಿದ್ದಾರೆ. ಭಾರತಿ ನಗರದ ವಾಸಿಗಳಾದ ಶರತ್ ಹಾಗೂ ಮಂಜುನಾಥ್ ಬಂಧಿತ ಆರೋಪಿತಗಳು ಎಂದು ತಿಳಿದು ಬಂದಿದೆ. ಶಿವಮೊಗ್ಗ ವನ್ಯಜೀವಿ ವಿಭಾಗದ ಹಾಯ್ ಹೊಳೆ ಅರಣ್ಯ ಪ್ರದೇಶದಲ್ಲಿ ಸಾಗುವಾನಿ ಮರವನ್ನು ಕೊಯ್ದು ಸಾಗಾಣಿಕೆ ಮಾಡಲು ಯತ್ನಿಸುವಾಗ ವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಲಭಾವಿ…
ರಿಪ್ಪನ್‌ಪೇಟೆ : ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ|rpet
ರಿಪ್ಪನ್‌ಪೇಟೆ : ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ – ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟçಸೇನಾ ಸಮಿತಿಯ 56 ನೇ ವರ್ಷದ 11 ದಿನಗಳ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಸಿದ್ದಿವಿನಾಯಕ ದೇವಸ್ಥಾನದ ಹಿಂಭಾಗದ ತಿಲಕ್ ಮಹಾಮಂಟಪದ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ್ ಪವಾರ್ ಮತ್ತು ಪ್ರಧಾನ ಕಾರ್ಯದರ್ಶಿ ಲಕ್ಷಣ…
ಸಮಟಗಾರು ಶಾಲೆಯಲ್ಲಿ ಪ್ರತಿಭಾ ಕಾರಂಜಿ |ಮಕ್ಕಳ ಸುಪ್ತ ಪ್ರತಿಭೆಗೆ ರಂಗಮಂಚಿಕೆಯಾದ ಪರಿಸರ ಸ್ನೇಹಿ ಆ್ಯಂಪಿ ಥಿಯೇಟರ್ ಉದ್ಘಾಟನೆ|pratibha karanji
ಮಕ್ಕಳ ಸುಪ್ತ ಪ್ರತಿಭೆಗೆ ರಂಗಮಂಚಿಕೆಯಾದ ಪರಿಸರ ಸ್ನೇಹಿ ಆ್ಯಂಪಿ ಥಿಯೇಟರ್ Ripponpet | ಗ್ರಾಮೀಣ ಭಾಗದಲ್ಲಿ ಪ್ರತಿಭಾ ಕಾರಂಜಿಯ ಮಕ್ಕಳ ಕಲೋತ್ಸವವನ್ನು ತಮ್ಮೂರಿನ ಜಾತ್ರೆ ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ ಎಂದು ಹುಂಚಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಂಗಲ ದೇವರಾಜ್ ಹೇಳಿದರು. ಹುಂಚ ಗ್ರಾಪಂ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿ ನಡೆಸಲು ಎಲ್ಲರ ಸಹಕಾರ ಮುಖ್ಯ. ಮಕ್ಕಳು…
ಶಾಂತಿ ಸುವ್ಯವಸ್ಥೆಯಿಂದ ಹಬ್ಬಗಳನ್ನು ಆಚರಿಸಿ – ಡಿವೈಎಸ್ಪಿ|ಗಣೇಶೋತ್ಸವದ ಹಿನ್ನಲೆ ಈದ್ ಮಿಲಾದ್ ಆಚರಣೆ ಮುಂದೂಡಿಕೆಗೆ ಮಸೀದಿ ಸಮಿತಿ ನಿರ್ಧಾರ|dysp
ರಿಪ್ಪನ್‌ಪೇಟೆ :ಗೌರಿ ಗಣೇಶ ಹಬ್ಬ ಸೇರಿದಂತೆ ಈದ್‌ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು.ಹಬ್ಬದ ಮೆರವಣಿಗೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಡಿಜೆ ಬಳಸುವಂತಿಲ್ಲ ಎಂದು ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್‌ಪಿ.ಗಜಾನನ ವಾಮನ ಸುತಾರ್ ಹೇಳಿದರು. ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಈದ್‌ಮಿಲಾದ್ ಮತ್ತು ಗಣೇಶೋತ್ಸವ ಹಬ್ಬಗಳ ಆಚರಣೆಯ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆ ಹಾಗೂ ಮುಸ್ಲಿಂ ಸಮುದಾಯದ ಮುಖಂಡರಿಗೆ ಆಯೋಜಿಸಲಾದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಎಲ್ಲಾ ಸಮುದಾಯದವರು ಎಲ್ಲಾ ಹಬ್ಬಗಳನ್ನು ಶಾಂತಿಯಿಂದ ಆಚರಣೆ ಮಾಡುತ್ತಾ…
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯ – ಶಾಸಕ ಬೇಳೂರು ಗೋಪಾಲಕೃಷ್ಣ|beluru
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯ ಶಾಸಕ ಬೇಳೂರು ರು ಗೋಪಾಲಕೃಷ್ಣ ಅಭಿಮತ ಹೊಸನಗರ : ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯ, ಮಲೆನಾಡಿನಲ್ಲಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಉತ್ತಮ ಸಾಧನೆಯನ್ನು ಪ್ರಕಟಿಸುತ್ತಿರುವುದು ಸ್ವಾಗತವಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಅಭಿಮತ ವ್ಯಕ್ತಪಡಿಸಿದರು. ಅವರು ಇಂದು ಹೊಸನಗರ ನೆಹರು ಮೈದಾನದಲ್ಲಿ 23 – 24ನೇ ಸಾಲಿನ 17 ವರ್ಷ ವಯೋಮಿತಿ ಒಳಗಿನ ಪ್ರೌಢಶಾಲಾ ಬಾಲಕ ಬಾಲಕಿಯರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ…
ಮೇಲಿನಸಂಪಳ್ಳಿ ಬಡ ಮಹಿಳೆಯ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ|beluru
ನೊಂದವರ ಪರ ಧ್ವನಿ ಎತ್ತಿ ಅವರಿಗೆ ಸಹಕಾರ ನೀಡಿದ ಕಾರ್ಯಗಳೇ ನನ್ನ ಜೀವನದಲ್ಲಿ ಅತಿ ಹೆಚ್ಚು ತೃಪ್ತಿ ನೀಡುವ ಕ್ಷಣಗಳಾಗಿದ್ದು ಆ ನಿಟ್ಟಿನಲ್ಲಿ ಬಡ,ನಿರ್ಗತಿಕರ ಧ್ವನಿಯಾಗಿ ಕಾರ್ಯ ನಿರ್ವಹಿಸುತಿದ್ದೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಹೊಸನಗರ ತಾಲೂಕಿನ ಮೇಲಿನಸಂಪಳ್ಳಿ ಗ್ರಾಮದ ಬಡ ಮಹಿಳೆಗೆ ಮಾರುತಿಪುರ ಗ್ರಾಪಂ ಆಶ್ರಯದಲ್ಲಿ ಆಸರೆ ಸಮಿತಿ ನಿರ್ಮಿಸಿಕೊಡುತ್ತಿರುವ ಮನೆಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ ಕಳೆದ ಆರು ವರ್ಷಗಳಿಂದ ಮಹಿಳೆ ತನ್ನ ವಿಕಲಚೇತನ ಮಗಳೊಂದಿಗೆ ನರಕಯಾತನೆ ಅನುಭವಿಸುವಿರುವುದನ್ನು ಸಂಬಂಧಪಟ್ಟವರು ಗಮನಿಸದೇ…
ರಿಪ್ಪನ್‌ಪೇಟೆ : ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ನಾಳೆ(15-09-2023) ಎಸ್ ಪಿ ನೇತ್ರತ್ವದಲ್ಲಿ ಶಾಂತಿಸಭೆ
ರಿಪ್ಪನ್‌ಪೇಟೆ : ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ನಾಳೆ(15-09-2023) ಎಸ್ ಪಿ ನೇತ್ರತ್ವದಲ್ಲಿ ಶಾಂತಿಸಭೆ ರಿಪ್ಪನ್‌ಪೇಟೆ : ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಪ್ರಯುಕ್ತ ನಾಳೆ ರಿಪ್ಪನ್‌ಪೇಟೆಯಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 03:00 ಗಂಟೆಗೆ ರಿಪ್ಪನಪೇಟೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಮುಂಬರುವ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಹಾಗೂ ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ಶಾಂತಿ ಸಭೆಯನ್ನು…
ಮಹಿಳಾ ಪೊಲೀಸರಿಗೆ ಬಾಗಿನ ಅರ್ಪಿಸಿ,ಪುರುಷರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ಜೈನ್|rpet
ಮಹಿಳಾ ಪೊಲೀಸರಿಗೆ ಬಾಗಿನ ಅರ್ಪಿಸಿ,ಪುರುಷರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ಜೈನ್ ರಿಪ್ಪನ್‌ಪೇಟೆ : ಹಬ್ಬ ಹರಿದಿನಗಳಲ್ಲಿ ತವರು ಮನೆಗೆ ಹೋಗಿ ಬರುವಷ್ಟು ಸಮಯವಿರದಂತಹ ಸ್ಥಿತಿಯಲ್ಲಿರುವ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಹೊಂಬುಜ ಗ್ರಾಮ ಪಂಚಾಯ್ತಿ ಸದಸ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ವೃಷಭರಾಜ್ ಜೈನ್ ಕುಟುಂಬ ವರ್ಗದವರು ಬಾಗಿನ ನೀಡಿ ಸತ್ಕರಿಸಿದರು. ರಾಖಿ ಕಟ್ಟುವುದರಿಂದ ಅಣ್ಣ-ತಂಗಿಯರ ಸಂಬಂಧ ಸಹೋದರತ್ವ ಗಟ್ಟಿಯಾಗಿರುತ್ತದೆಂಬ ನಂಬಿಕೆ ನಮ್ಮ ಹಿಂದುಗಳದ್ದಾಗಿದ್ದು ಪೊಲೀಸರು ಗಣೇಶ ಹಬ್ಬದ ಸಂದರ್ಭದಲ್ಲಿ ರಕ್ಷಣೆಯ…
ರಿಪ್ಪನ್ ಪೇಟೆ ಸರ್ಕಾರಿ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತು ವಿಶೇಷ ತರಬೇತಿ ಕಾರ್ಯಾಗಾರ|IISC
ರಿಪ್ಪನ್ ಪೇಟೆ ಸರ್ಕಾರಿ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತು ವಿಶೇಷ ತರಬೇತಿ ಕಾರ್ಯಾಗಾರ ರಿಪ್ಪನ್‌ಪೇಟೆ;- ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನವು ಭಾನೆತ್ತರಕ್ಕೆ ಬೆಳದಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸುವಲ್ಲಿ ಐ.ಐ.ಎಸ್.ಸಿ.ಖುದಾಪುರ ತಂಡ ಬಹಳ ಮಹತ್ವದ ಪಾತ್ರ ವಹಿಸಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಸೈನ್ಸ್ ಮುಖ್ಯಸ್ಥ ಪ್ರೋ.ಡಿ.ಎನ್.ರಾವ್.ಹೇಳಿದರು. ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚಳ್ಳಕೆರೆ ಖುದಾಪುರ ಐ.ಐ.ಎಸ್.ಸಿ. ಶಾಖೆಯವರು ಕಳೆದ ಮೂರು ವರ್ಷದ ಹಿಂದೆ 1.50 ಲಕ್ಷ ರೂ ವೆಚ್ಚದ ವಿಜ್ಞಾನ…
ಸರ್ಕಾರಿ ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ 16 ಕಿ.ಮೀ ಪಾದಯಾತ್ರೆ – ಬಿಇಒ ಕಚೇರಿ ಮುಂದೆ ಧರಣಿ
ಸರ್ಕಾರಿ ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ 16 ಕಿ.ಮೀ ಪಾದಯಾತ್ರೆ ಹೊಸನಗರ : ತಾಲ್ಲೂಕಿನ ಮೂಡುಗೊಪ್ಪ – ನಗರ ವ್ಯಾಪ್ತಿಯ ದುಬಾರ್‌ತಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ ಈ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಸಾಕಷ್ಟು ಬಾರಿ ಲಿಖಿತ ಹಾಗೂ ಮೌಖಿಕವಾಗಿ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಆ ಶಾಲೆಯ ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ ಶೆಟ್ಟಿಯವರ ನೇತೃತ್ವದಲ್ಲಿ ಸುಮಾರು 16 ಕಿ.ಮೀ. ಕಾಲ್ನಡಿಗೆಯಲ್ಲಿ ಹೊಸನಗರ…