POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಪಿಎಂಜಿಎಸ್‌ವೈ ಯೋಜನೆಯಡಿ ಜಿಲ್ಲೆಗೆ ಕೋಟ್ಯಾಂತರ ರೂ ಅನುದಾನ ; ಸಂಸದ ಬಿ ವೈ ರಾಘವೇಂದ್ರ|byr

ಪಿಎಂಜಿಎಸ್‌ವೈ ಯೋಜನೆಯಡಿ ಜಿಲ್ಲೆಗೆ ಕೋಟ್ಯಾಂತರ ರೂ ಅನುದಾನ ; ಸಂಸದ ಬಿ ವೈ ರಾಘವೇಂದ್ರ
ರಿಪ್ಪನ್‌ಪೇಟೆ: ಅಟಲ್ ಬಿಹಾರಿ ವಾಜಪೇಯಿ ಅವರು ಜಾರಿಗೊಳಿಸಿದ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ನಂತರದಲ್ಲಿ ಬಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪಿಎಂಜಿಎಸ್‌ವೈ ಯೋಜನೆಯಿಂದಾಗಿ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 200 ಕಿ.ಮೀ ರಸ್ತೆಗೆ 200 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸುವ ಮೂಲಕ ಅಭಿವೃದ್ದಿ ಪಡಿಸುವ ಮೂಲಕ ಪ್ರಗತಿ ಹೊಂದಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆದ್ದಾರಿಪುರ ಕಗ್ಗಲಿಜಡ್ಡು ಕುಮದ್ವತಿ ಸಂಪರ್ಕದ ಸೇತುವೆ ನಿರ್ಮಾಣಕ್ಕೆ ಪಿಎಂಜಿಎಸ್‌ವೈ ಯೋಜನೆಯಡಿ 3.48 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಜಲಜೀವನ ಯೋಜನೆಯಡಿ ಪ್ರತಿ ಮನೆಗೆ ಶುದ್ದಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಜಿಲ್ಲೆಯ 5 ಲಕ್ಷ ಮನೆಗಳಲ್ಲಿ ಈಗಾಗಲೇ 2 ಲಕ್ಷ ಮನೆಗಳಿಗೆ ಈ ಯೋಜನೆಯಡಿ ಶುದ್ದ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆಯುಷ್ಮಾನ್‌ ಕಾರ್ಡ್‌ನಿಂದಾಗಿ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 2 ಲಕ್ಷ ರೂ. ಈ ಯೋಜನೆಯನ್ವಯ ಜಿಲ್ಲೆಯ 174 ಕೋಟಿ ರೂ. ವೆಚ್ಚದಲ್ಲಿ ಬಡಕುಟುಂಬದವರು ಆರೋಗ್ಯದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆಂದರು.


ಇನ್ನೂ ಉಜ್ವಲ ಯೋಜನೆಯಡಿ 700 ರೂ.ಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆಯನ್ವಯ ನಮ್ಮ ತಾಯಂದಿರು ಕಟ್ಟಿಗೆ ಬಳಸಿ ಹೊಗೆಯಲ್ಲಿ ಅಡುಗೆ ಮಾಡುವುದನ್ನು ತಪ್ಪಿಸುವುದರೊಂದಿಗೆ ಕಡಿಮೆ ಹಣದಲ್ಲಿ ಗ್ಯಾಸ್ ಸೌಲಭ್ಯವನ್ನು ನೀಡಲಾಗುತ್ತಿದ್ದು ಕೇವಲ ದಿನಕ್ಕೆ 12 ರೂ. ವೆಚ್ಚದಲ್ಲಿ ಕೇವಲ 700 ರೂ. ನಲ್ಲಿ ಉಜ್ವಲ ಗ್ಯಾಸ್ ಸಂಪರ್ಕದಿಂದ ಎರಡು ತಿಂಗಳು ಬಳಕೆಯಾಗುತ್ತಿದೆ ಎಂದು ವಿವರಿಸಿ ಹೊಸನಗರ ತಾಲ್ಲೂಕಿಗೆ ಈಗಾಗಲೇ 44 ಬಿ.ಎಸ್.ಎನ್.ಎಲ್. ಟವರ್‌ಗಳನ್ನು ಮಂಜೂರು ಮಾಡಿಸಲಾಗಿದ್ದು ಸದ್ಯದಲ್ಲಿಯೇ ಟವರ್ ನಿರ್ಮಾಣ ಕಾಮಗಾರಿ ಅರಂಭವಾಗಲಿದೆ ಎಂದು ಹೇಳಿದರು.

ಸರ್ಕಾರದ ಗ್ಯಾರಂಟಿ ಯೋಜನೆಯ ಫಲಪಡೆಯಲು ಅಭಿವೃದ್ದಿ ತ್ಯಾಗ:

ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಪಡೆಯಲು ಅಭಿವೃದ್ಧಿ ತ್ಯಾಗ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಬರಬಂದ ಕಾಲ ಮಗ ಉಂಡಂತೆ ಎಂಬ ಗ್ರಾಮೀಣ ಪ್ರದೇಶದ ಗಾದೆ ಮಾತಿನಂತೆ ಈ ಬಾರಿ ಮಳೆಯಾಗದೇ ತೀವ್ರ ಬರಗಾಲ ಎದುರಿಸುವಂತಾಗಿದೆ. ಸಕಾಲದಲ್ಲಿ ಮಳೆಬಾರದೇ ಹಾಕಿದ ಬೆಳೆಗಳು ಒಣಗುತ್ತಿದ್ದು ಮಲೆನಾಡು ಸಂಪೂರ್ಣವಾಗಿ ಬರಗಾಲ ಪ್ರದೇಶವಾಗಿದೆ ಇನ್ನೂ ನವೆಂಬರ್-ಡಿಸೆಂಬರ್ ಅಂತ್ಯದಲ್ಲಿಯೇ ಕುಡಿಯುವ ನೀರಿನ ಅಭಾವ ಎದುರಿಸುವಂತಾಗಿದ್ದು ವಿದ್ಯುತ್ ಸಮಸ್ಯೆ ಸಹ ಕಾಣವಂತಾಗಿದೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರವರೇ ನೀರಾವರಿ ಸಚಿವರಾಗಿದ್ದು ಅವರೇ ಅಭಿವೃದ್ದಿಗೆ ಹಣವಿಲ್ಲ ಎನ್ನುತ್ತಿದ್ದಾರೆ ಹಾಗಾದರೆ ಮುಂದೆ ಏನು ಎಂಬ ಚಿಂತೆ ಕಾಡುವಂತಾಗಿದೆ. ಸರ್ಕಾರದ ಉಪಮುಖ್ಯಮಂತ್ರಿಗಳೇ ಹೀಗೆ ಹೇಳಿದರೆ ಏನು ಕಥೆ ? ಎಂದು ಪ್ರಶ್ನೆ ಮಾಡಿದರು.

ಸಭೆಯಲ್ಲಿ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿನಂತಿ ರಾಘವೇಂದ್ರ, ಉಪಾಧ್ಯಕ್ಷೆ ವನಿತಾ ಗಂಗಾಧರ, ಗ್ರಾಮ ಪಂಚಾಯ್ತಿ ಸದಸ್ಯರಾದ ನಾಗರತ್ನ, ಸುಮಿತ್ರಮ್ಮ, ವಿಶುಕುಮಾರ್, ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಗಣಪತಿ ಬಿಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ನಾಗೇಂದ್ರ ಕಲ್ಲೂರು, ಲಿಂಗಪ್ಪ ಕಗ್ಗಲಿ ಇನ್ನಿತರರು ಹಾಜರಿದ್ದರು.

 ಟಿ.ವಿ.ಚಂದ್ರಶೇಖರಪ್ಪ ಮೂರು ಬಾರಿ ಸಂಸದರಾದವರು ಆವರನ್ನು ನಾನು ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಇವರು ಯಾರು ಎಂದು ಕೇಳಿದಾಗ ಅವರೇ ನಮ್ಮ ಸಂಸದರು ಎಂದು ಪರಿಚಯಿಸಿದರು. ಈಗಿನ ಸಂಸದ ರಾಘವೇಂದ್ರರವರು ಸದಾ ಕ್ರಿಯಾಶೀಲರಾಗಿ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಸಂಕಲ್ಪತೊಟ್ಟು ದೆಹಲಿಯ ಸಂಸತ್ ಭವನದಲ್ಲಿದ್ದು ನಂತರ ಕೇಂದ್ರದ ವಿವಿಧ ಇಲಾಖೆಯ ಮಂತ್ರಿಗಳವರ ಮನೆಗಳಿಗೆ ತೆರಳಿ ಅಭಿವೃದ್ದಿಗಾಗಿ ಅನುದಾನವನ್ನು ತರುವುದರೊಂದಿಗೆ ಪಾರದರ್ಶಕ ಪಾದರಸದಂತೆ ನಮ್ಮ ಯುವ ಸಂಸದರು ಎಂದು ಆರಗ ಜ್ಞಾನೇಂದ್ರ ಹೇಳಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.