ಶಿವಮೊಗ್ಗ : ಕಸ ವಿಲೇವಾರಿ ವಿಚಾರದಲ್ಲಿ ಸ್ಥಳೀಯರಿಂದಲೇ ಗ್ರಾಪಂ ಅಧ್ಯಕ್ಷರ ಮೇಲೆ ಹಲ್ಲೆ ನಡೆದಿದೆ. ಹಲ್ಕೆಯ ಸಂಬಂಧ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಗ್ರಾಮ ಪಂಚಾಯ್ತಿ, ಅಧ್ಯಕ್ಷರಾದ ಜಗದೀಶ್ , ತಮ್ಮ ಊರಿನಲ್ಲಿ ಸ್ವಚ್ಛತಾ ಕಾರ್ಯ ಮಾಡಿಸಿದ್ದು, ಸ್ವಚ್ಛತಾ ಕೆಲಸ ಮಾಡಿದ ಕಸವನ್ನು 2 ದಿನಗಳ ನಂತರ ವಿಲೇವಾರಿ ಮಾಡಲು ಯೋಚಿಸಿದ್ದರು. ದಸರಾ ಹಬ್ಬದ ಪ್ರಯುಕ್ತ ಊರಿನಲ್ಲಿ ಟ್ರಾಕ್ಟರ್ ಸಿಗದೇ ಇದ್ದುದರಿಂದ ಕಸವನ್ನು ರಸ್ತೆ ಬದಿಯಲ್ಲಿ ಹಾಕಲಾಗಿತ್ತು.
ಈ ವಿಚಾರದಲ್ಲಿ, ಅ.23 ರಂದು ಸಂಜೆ 6.00 ಗಂಟೆ ಸಮಯದಲ್ಲಿ, ಊರಿನ ದೇವಸ್ಥಾನದ ಬಳಿ ನಿಂತಿದ್ದಾಗ ಅಲ್ಲಿಗೆ ಬಂದ ಹೊಳೆಬೆನವಳ್ಳಿ ವಾಸಿ ಪ್ರಭಾಕರ ಬಿನ್ ಮಾಣಿಕ್ಯ, ಯುವರಾಜ್ ಬಿನ್ ಭೂಮಿನಾಥ ಮತ್ತು ಆತನ ಸಂಭಂಧಿಕ ಪುರಲೆ ವಾಸಿ ಚಿನ್ನು ಎಂಬುವವರು ಏಕಾಏಕಿಯಾಗಿ ಬಂದು ಹಲ್ಲೆ ನಡೆಸಿದ್ದಾರೆ.
ಊರಿನಲ್ಲಿ ಹಾಕಿರುವ ಕಸವನ್ನು ತೆಗೆದು ಹಾಕಿಲ್ಲ ಎಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿ, ನಂತರ ಪ್ರಭಾಕರನು ಹಿಂಬದಿಯಿಂದ ಬಂದು ಮಚ್ಚಿನಿಂದ ಪಿರ್ಯಾದಿಯ ಎಡಕಿವಿಗೆ ಹಲ್ಲೆ ಮಾಡಿದ್ದು, ಆತನ ಜೊತೆಗಿದ್ದ ಯುವರಾಜ್ ಮತ್ತು ಚಿನ್ನುರವರು ಸಹ ಕೈಯಿಂದ ಹಲ್ಲೆ ಮಾಡಿರುವುದಾಗಿ ಅಧ್ಯಕ್ಷ ಜಗದೀಶ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ