Headlines

ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಶವ ಪತ್ತೆ|Thirthahalli

ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಶವ ಪತ್ತೆ
ತೀರ್ಥಹಳ್ಳಿ : ಪಟ್ಟಣದ ಜಯಚಾಮರಾಜೇಂದ್ರ ಸೇತುವೆಯ  ಕೆಳಭಾಗದ  ತುಂಗಾ ನದಿಯ  ನೀರಿನಲ್ಲಿ ಗುರುವಾರ ವ್ಯಕ್ತಿಯೋರ್ವನ ಶವ ಒಂದು ಪತ್ತೆಯಾಗಿದೆ.

ದೇವರಾಜ್ 48 ವರ್ಷ ಮೃತಪಟ್ಟ ವ್ಯಕ್ತಿ. ಈತ ಪ್ರತಿದಿನ ಬೆಳಗ್ಗೆ ಮನೆ ಮನೆಗೆ ಹಾಲು ಹಾಕುತ್ತಿದ್ದ. ಕಳೆದ 2-3 ದಿನಗಳಿಂದ ಕಾಣೆಯಾಗಿದ್ದು ಕುಟುಂಬಸ್ಥರು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈತ ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ.

ಈತ ಪಟ್ಟಣದಲ್ಲಿ ದೇವು ಎಂದೇ ಚಿರಪರಿಚಿತರಾಗಿದ್ದರು. ಇತನ ಸಾವಿಗೆ ನಿಖರವಾದ  ಕಾರಣ ತಿಳಿದುಬಂದಿಲ್ಲ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಲ್ಲಿ ಪ್ರಕರಣ ಜರುಗಿದೆ.

About The Author

Leave a Reply

Your email address will not be published. Required fields are marked *