ರಿಪ್ಪನ್ ಪೇಟೆಯಲ್ಲಿ ಆದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ದತೆ
ರಿಪ್ಪನ್‌ಪೇಟೆ;- ಪಟ್ಟಣದ ಕಸ್ತೂರಿ ಕನ್ನಡ ಸಂಘ ಮತ್ತು ದಿ.ಪುನೀತ್‌ರಾಜ್ ಆಭಿಮಾನಿ ಬಳಗದ ೩ ನೇ ವರ್ಷದ ವಾರ್ಷೀಕೋತ್ಸವ ಮತ್ತು ನವಂಬರ್ ೧ ರಂದು ಕನ್ನಡ ರಾಜ್ಯೋತ್ಸವವನ್ನು ಈ ಭಾರಿ ಆದ್ದೂರಿಯಾಗಿ ಆಚರಿಸುವ ಬಗ್ಗೆ ನಿರ್ಧರಿಸಲಾಗಿದ್ದು ಅದರನ್ವಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಇದರೊಂದಿಗೆ ದಿ.ಪುನೀತ್‌ರಾಜ್ ಪುಣ್ಯ ಸ್ಮರಣೆಯ ಕಾರ್ಯಕ್ರಮವು ಸಿದ್ದಿವಿನಾಯಕ ವೃತ್ತದಲ್ಲಿ ಏರ್ಪಡಿಸಲಾಗಿದೆ ಎಂದು ಕಸ್ತೂರಿ ಕನ್ನಡ ಸಂಘದ ಆಧ್ಯಕ್ಷರಾದ ಉಲ್ಲಾಸ್ ತೆಂಕೋಲ್ ಮತ್ತು ಆರ್.ಎ.ಚಾಬುಸಾಬ್ ಹಾಗೂ ಮೆಣಸೆ ಆನಂದ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಕ್ಟೋಬರ್ ೩೧ ರಂದು ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗಾಗಿ ಆಟೋಟ ಸ್ಫರ್ಧೆಗಳನ್ನು ಮತ್ತು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ.ಆರತಿ ತಟ್ಟೆ ಅಲಂಕಾರ ಹಾಗೂ ಸಂಗೀತಾ ಕುರ್ಚಿ ನಂತರ ಮಧ್ಯಾಹ್ನ ೨ ಗಂಟೆಗೆ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾವಳಿ ಪುರುಷರಿಗಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.
ನವಂಬರ್ ೧ ರಂದು ಬುಧವಾರ ಬೆಳಗ್ಗೆ ೯ ಗಂಟೆಗೆ ವಿವಿಧ ಮಹಿಳಾ ಸಂಘದವರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಶಾಲಾ ಮಕ್ಕಳ ವಿವಿಧ ವೇಷ ಭೂಷಣದೊಂದಿಗೆ ಹೆಸರಾಂತ ಕಲಾ ತಂಡಗಳ ಕಲಾ ಮೆರಗಿನೊಂದಿಗೆ `ತಾಯಿ ಭುವನೇಶ್ವರಿಯ ಅಲಂಕೃತ ಭಾವಚಿತ್ರ ಮೆರವಣಿಗೆ’ ೧೦ ಗಂಟೆಗೆ ಕನ್ನಡ ದ್ವಜಾರೋಹಣ,೧೧ ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಲಿದೆ.
ರಾಜ್ಯೋತ್ಸವದ ಆಂಗವಾಗಿ ಶಾಲಾ ಕಾಲೇಜ್ ವಿದ್ಯಾಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ ಸಮಾರೋಪ ಸಮಾರಂಭ ಅಯೋಜಿಸಲಾಗಿದ್ದು ಶಾಸಕ ಗೋಪಾಲಕೃಷ್ಣ ಬೇಳೂರು,ಸಂಸದ ಬಿ.ವೈ.ರಾಘವೇಂದ್ರ,ಶಾಸಕ ಆರಗ ಜ್ಞಾನೇಂದ್ರ ಮಾಜಿ ಶಾಸಕ ಹರತಾಳು ಹಾಲಪ್ಪ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ನಂತರ ರಾತ್ರಿ ೮ ಗಂಟೆಗೆ ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಕು.ಸಾದ್ವಿನಿಕೊಪ್ಪ,ಪ್ರಖ್ಯಾತ ಗಾಯನ ಕಲಾವಿದರಾದ ಮೆಹಬೂಬ್‌ಸಾಬ್,ಆಶ್ವಿನ್‌ಶರ್ಮ,ಎದೆ ತುಂಬಿ ಹಾಡುವೆನು ಖ್ಯಾತಿಯ ಸಾನ್ವಿ ಜಿ.ಭಟ್,ಇವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷಿö್ಮ,ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ,ಮುಖಂಡರಾದ ಆರ್.ಎನ್.ಮಂಜುನಾಥ,ಜಿ ಎಸ್ ವರದರಾಜ್ , ಮಂಜುನಾಥ ಕಾಮತ್, ಜಿ.ಡಿ.ಮಲ್ಲಿಕಾರ್ಜುನ,ರಮೇಶ್ ಫ್ಯಾನ್ಸಿ,ನಿರಂಜನ್ , ಆರ್.ಡಿ.ಶೀಲಾ, ಸ್ವಾತಿ, ಲೇಖನ, ಸಾಜಿದ ಹನೀಫ಼್,ಪಿಯೂಸ್ ರೋಡ್ರಿಗಸ್,ನಾಗರಾಜ ಕೆದಲುಗುಡ್ಡೆ, ನಿರ್ಮಲ ಹರೀಶ್. ಸೀಮಾ ಭಾಸ್ಕರ್ ಇನ್ನಿತರರು ಹಾಜರಿದ್ದರು.