Headlines

ರಿಪ್ಪನ್‌ಪೇಟೆ : ಗಣೇಶನ ಸಮ್ಮುಖದಲ್ಲಿ ಭಕ್ತಾಕರ್ಷಣೆಗೊಂಡ ಕೋಲಾಟ ನೃತ್ಯ ಪ್ರದರ್ಶನ|Rpet news

ಗಣೇಶನ ಸಮ್ಮುಖದಲ್ಲಿ ಭಕ್ತಾಕರ್ಷಣೆಗೊಂಡ ಕೋಲಾಟ ನೃತ್ಯ ಪ್ರದರ್ಶನ ರಿಪ್ಪನ್‌ಪೇಟೆ;-ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾಗಿರುವ ಜಾನಪದ ಕಲೆಗಳಲ್ಲಿ ಒಂದಾದ ವಿವಿಧ ಭಂಗಿಯ ಕೋಲಾಟ ಪ್ರದರ್ಶನವು ಭಕ್ತಾಕರ್ಷಣೆಗೊಂಡಿತು. ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾದ 56 ನೇ ವರ್ಷದ ಗಣೇಶೋತ್ಸವ ಸಮಿತಿಯವರು ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ಬಳೆಕೋಲಾಟ ಪ್ರದರ್ಶನದಲ್ಲಿ ಕೆದಲುಗುಡ್ಡೆ ಮತ್ತು ಚಿಪ್ಪಿಳ್ಳಿ ಕೋಲಾಟ ತಂಡದವರ ಜಡೆ ಕೋಲಾಟ ಪ್ರದರ್ಶನ ಜನಾಕರ್ಷಣೆಗೊಂಡಿತು. ಹಿಂದೂ ಮಹಾಸಭಾ ಕಟ್ಟಡ ಸಮಿತಿಯ ಅಧ್ಯಕ್ಷ ಎಂ.ಬಿ.ಮಂಜುನಾಥ ಮಾತನಾಡಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ…

Read More

ಹೊಸ ಕಲ್ಲುಕ್ವಾರೆಗೆ ಅವಕಾಶ ಬೇಡ : ಎಸಿಗೆ ಮನವಿ|iruvakki

ಹೊಸ ಕಲ್ಲುಕ್ವಾರೆಗೆ ಅವಕಾಶ ಬೇಡ; ಎಸಿಗೆ ಮನವಿ ಸಾಗರ : ತಾಲ್ಲೂಕಿನ ಇರುವಕ್ಕಿ ಆಸುಪಾಸು ಹೊಸ ಕಲ್ಲುಕ್ವಾರೆಗೆ ಅವಕಾಶ ನೀಡದಂತೆ ಗ್ರಾಮಸ್ಥರು ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಇರುವಕ್ಕಿ ಗ್ರಾಮದ ಸ.ನಂ. 30 ಮತ್ತು 31ರಲ್ಲಿ ಹೊಸ ಕಲ್ಲುಕ್ವಾರೆ ಪ್ರಾರಂಭಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕಲ್ಲುಕ್ವಾರೆಗೆ ಪ್ರಸ್ತಾಪಿಸಿರುವ ಜಾಗದ ವ್ಯಾಪ್ತಿಯಲ್ಲಿಯೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಬರುತ್ತದೆ. ಶರಾವತಿ ನದಿಯ ಉಪನದಿಯ ದಂಡೆ ಇದಾಗಿದ್ದು, ಕೃಷಿಗೆ ನೀರು…

Read More

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು|fire

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು ತೀರ್ಥಹಳ್ಳಿ:  ಕಾರೊಂದು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲ್ಲೂಕಿನ ಮಂಡಗದ್ದೆಯ 15 ನೇಮೈಲಿಕಲ್ಲಿನ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟುಹೋಗಿದೆ. ರಾತ್ರಿ 11.30 ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ಅದೇ ಮಾರ್ಗವಾಗಿ ಹೋಗುತ್ತಿದ್ದ ವಾಹನ ಸವಾರು ಕಾರಿಗೆ ಬೆಂಕಿ ಬಿದ್ದು ಉರಿಯುತ್ತಿರುವುದನ್ನ ಗಮನಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಶಿವಮೊಗ್ಗದಿಂದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಯಾರದ್ದು…

Read More

ರಿಪ್ಪನ್‌ಪೇಟೆ : ಅನಾಥ ನಾಯಿ ಮರಿಗಳ ಆರೈಕೆ – ಮಾನವೀಯತೆ ಮೆರೆದ ಪಶು ಪರಿವೀಕ್ಷಕ|rpet

ಮಾನವೀಯತೆ ಮೆರೆದ  ಪಶು ಪರಿವೀಕ್ಷಕ ವಿ ರಂಗಪ್ಪ ರಿಪ್ಪನ್ ಪೇಟೆ : ಪೊದೆಯೊಂದರಲ್ಲಿ ಐದು ಮರಿಗಳಿಗೆ ಜನ್ಮವಿತ್ತ ಬೀದಿ ನಾಯಿ  ಮೂರು ದಿನಗಳ ಒಳಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿತ್ತು.ಇನ್ನೂ ಕಣ್ಣು ಬಿಡದ ಆ ಮರಿಗಳಿಗೆ ಹಾಲುಣಿಸುವ ತಾಯಿ ಬಾರದಿದ್ದಾಗ ಹಸಿವಿನಿಂದ ಕಂಗೆಟ್ಟು ತೀರಾ ಹಠ ಮಾಡುವುದನ್ನು ಕಂಡು ದಾರಿ ಹೋಕರು ಗಮನಿಸಿ ಪಟ್ಟಣದ ಪಶು ವೈದ್ಯಕೀಯ ಪರಿವೀಕ್ಷಕ ವಿ ರಂಗಪ್ಪ ಅವರ ಗಮನಕ್ಕೆ ತಂದರು. ದಿಕ್ಕಿಲ್ಲದ ಆ ಐದು ಮರಿಗಳನ್ನು ಆಸ್ಪತ್ರೆಗೆ ತಂದು ರಟ್ಟಿನ ಬಾಕ್ಸ್ ನಲ್ಲಿ …

Read More

ವಾಲಿಬಾಲ್ ಪಂದ್ಯಾವಳಿಯಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ|volleyball

ವಾಲಿಬಾಲ್ ಪಂದ್ಯಾವಳಿಯಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ರಿಪ್ಪನ್ ಪೇಟೆ :- ಶಿವಮೊಗ್ಗ ಜಿಲ್ಲಾ ಮಟ್ಟದ  ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೊಸನಗರ ತಾಲೂಕು ಮಟ್ಟದಿಂದ ಶಿವಮೊಗ್ಗ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದು  ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ಮೂವರು ಆಟಗಾರರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ….

Read More

ಯುವ ಸಮೂಹಕ್ಕೆ ಮೌಲ್ಯ ದಾರಿತ ಶಿಕ್ಷಣ ನೀಡಬೇಕು : ಬಿ ಸಿ ಗೀತಾ|Rotary

ರಿಪ್ಪನ್ ಪೇಟೆ ರೋಟರಿ ಸಂಸ್ಥೆಯಿಂದ ರಾಷ್ಟ್ರ ನಿರ್ಮಾಣ ಪುರಸ್ಕಾರ ಪ್ರಧಾನ. ಯುವ ಸಮೂಹಕ್ಕೆ ಮೌಲ್ಯ ದಾರಿತ ಶಿಕ್ಷಣ  ನೀಡಬೇಕು : ಬಿಸಿ ಗೀತಾ  ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಒತ್ತಡದ ಜೀವನದಲ್ಲಿ ಬದುಕುತ್ತಿರುವ ಯುವ ಸಮೂಹಕ್ಕೆ ಮೌಲ್ಯ ದಾರಿತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಆಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ರೋಟರಿ 31 82ರ ಜಿಲ್ಲಾ ಗೌರ್ನರ್ ಬಿ.ಸಿ ಗೀತಾ ಹೇಳಿದರು.  ಪಟ್ಟಣದ ರೋಟರಿ ಕ್ಲಬ್ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ನಿರ್ಮಾಣ…

Read More

ರೈತರು ಆತ್ಮಹತ್ಯೆಗೆ ಮುಂದಾಗದೇ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ ನಿಮ್ಮ ಬೆಂಗಾವಲಾಗಿ ನಮ್ಮ ಸರ್ಕಾರವಿದೆ – ಬೇಳೂರು ಅಭಯ|gkb

ರೈತರು ಆತ್ಮಹತ್ಯೆಗೆ ಮುಂದಾಗದೇ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ ನಿಮ್ಮ ಬೆಂಗಾವಲಾಗಿ ನಮ್ಮ ಸರ್ಕಾರವಿದೆ – ಬೇಳೂರು ಅಭಯ ರಿಪ್ಪನ್‌ಪೇಟೆ : ಕಷ್ಟ ಬಂದಿದೆಯೆಂದು ಆತಂಕಕ್ಕೊಳಗಾಗುವ ರೈತರು ಆತ್ಮಹತ್ಯೆಗೆ ಮನಸ್ಸುಮಾಡಬೇಡಿ. ಸಮಸ್ಯೆಗಳ ಬಗ್ಗೆ ನನಗೆ ಹಾಗೂ ಸರಕಾರದ ಗಮನಕ್ಕೆ ತನ್ನಿ ನಿಮ್ಮ ಬೆಂಗಾವಲಾಗಿ ನಾವೀರುತ್ತೇವೆ ಭಯಪಡಬೇಡಿ ಎಂದು ರೈತರಿಗೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು. ಕೋಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 20 ಲಕ್ಷ ರೂ…

Read More

ಅಪರೂಪದ ಪ್ರಾಣಿ ಕಾಡುಪಾಪ ಪ್ರತ್ಯಕ್ಷ – ಅರಣ್ಯ ಇಲಾಖೆಯಿಂದ ರಕ್ಷಣೆ|slender loris

ಅಪರೂಪದ ಪ್ರಾಣಿ ಕಾಡುಪಾಪ ಪ್ರತ್ಯಕ್ಷ – ಅರಣ್ಯ ಇಲಾಖೆಯಿಂದ ರಕ್ಷಣೆ ಸಾಗರ(Sagara) : ಇಲ್ಲಿನ ಶಿವಪ್ಪನಾಯಕ ನಗರದ ಲೇಔಟ್‌ನಲ್ಲಿ ಅಪರೂಪದ ಕಾಡುಪಾಪ(slender loris) ಕಂಡು ಬಂದಿದ್ದು, ಪರಿಸರ ತಜ್ಞ ಅಖಿಲೇಶ್‌ ಚಿಪ್ಳಿ ಸಾರಥ್ಯದಲ್ಲಿ ಅದನ್ನು ಅರಣ್ಯ(forest) ಇಲಾಖೆ ಸಹಯೋಗದೊಂದಿಗೆ ಕಾಡಿಗೆ ಬಿಡಲಾಯಿತು. ದಟ್ಟ ಕಾಡಿನಲ್ಲಿ ವಾಸಿಸುವ ಹಗೂರವಾದ ಪ್ರಾಣಿಯಾದ ಕಾಡುಪಾಪ(slender loris) ಖಾಲಿ ಲೇಔಟ್‌ನಲ್ಲಿ ಗಿಡಗಂಟಿಗಳನ್ನು ಸ್ವಚ್ಚ ಮಾಡುತ್ತಿದ್ದಾಗ ಡುಬಂದಿದೆ. ಇದು ತುಂಬಾ ಅಪರೂಪದ ಪ್ರಾಣಿಯಾಗಿದ್ದು, ಶುದ್ಧ ಸಸ್ಯಹಾರಿಯಾಗಿದೆ. ಗಿಡ, ಗಂಟೆ ಹಾಗೂ ಹೂವಿನ ದಳಗಳನ್ನು ಆಹಾರವಾಗಿ…

Read More

ಮಳೆಗಾಗಿ ಪ್ರಾರ್ಥಿಸಿ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು|gkb

ಮಳೆಗಾಗಿ ಪ್ರಾರ್ಥಿಸಿ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 56 ನೇ ವರ್ಷದ ಗಣಪತಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ವಿಶೇಷ ಪೂಜೆಯೊಂದಿಗೆ ಮಳೆಗಾಗಿ ಪ್ರಾರ್ಥಿಸಿದರು. ವಿಘ್ನನಿವಾರಕನಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಾರ್ಥಿಸಿದ ಕೆಲವೇ ಗಂಟೆಯಲ್ಲಿ ರಿಪ್ಪನ್‌ಪೇಟೆಯಲ್ಲಿ ಮಳೆಯು ಅರ್ಧಗಂಟೆಗಳ ಕಾಲ ಮಳೆ ಸುರಿದು ಭಕ್ತ ಸಮೂಹವನ್ನು ಮತ್ತು ರೈತನಾಗರೀಕರಲ್ಲಿ ಮಂದಹಾಸ ಮೂಡುವಂತಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಕರ್, ಗ್ರಾಮ…

Read More

ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ : ಬೇಳೂರು ಗೋಪಾಲಕೃಷ್ಣ|rpet news

ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ: ಬೇಳೂರು ರಿಪ್ಪನ್‌ಪೇಟೆ : ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಪ್ರಬಲ ಇಚ್ಚಾಶಕ್ತಿಯೊಂದಿಗೆ ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಬೇಕಾದ ಆರ್ಥಿಕ ಅನುದಾನ ಮತ್ತು ನೆರವನ್ನು ಸರ್ಕಾರ ನೀಡುತ್ತದೆ. ತನ್ಮೂಲಕ ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ, ಪ್ರಗತಿ ಮತ್ತು ಸಬಲೀಕರಣ ಸಾಧ್ಯವಾಗುತ್ತದೆ ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದಲ್ಲಿ ಶ್ರೀ ದುರ್ಗಾಪರಮೇಶ್ವರಿ ಟ್ರೇಡರ್ಸ್ ಮತ್ತು ಅರ್ಥ್…

Read More