w
Headlines

ತೀರ್ಥಹಳ್ಳಿ : ಕ್ಷುಲ್ಲಕ ಕಾರಣಕ್ಕೆ ಎದೆಗೆ ಚೂರಿ ಇರಿತ – ಗಾಯಾಳು ಮಣಿಪಾಲ್ ಗೆ ದಾಖಲು|Stabbing

ಕ್ಷುಲ್ಲಕ ಕಾರಣಕ್ಕೆ ಮಸೀದಿಯ ಸಮೀಪ  ಇಬ್ಬರ ನಡುವೆ ನಡೆದ ಗಲಾಟೆ..ಚಾಕು ಇರಿತದಲ್ಲಿ ದುರಂತ ಅಂತ್ಯ ಕಂಡ ಘಟನೆ ಮಾಳೂರು ಪೊಲೀಸ್ ಠಾಣೆಯ ಎದುರು ನಡೆದಿದೆ. ಮಾಳೂರು ಮಟನ್ ಅಂಗಡಿಯ ಮಾಲೀಕ ಶಮಿಯುಲ್ಲಾ ಎಂಬುವರ  ಎದೆಗೆ ರಿಜ್ವಾನ್ ಎಂಬಾತ ಚಾಕು ಇರಿದಿದ್ದಾನೆ ಪರಿಣಾಮ ಶಮಿಯುಲ್ಲಾ ಎದೆಗೆ ಗಂಭೀರವಾಗಿ ಗಾಯವಾಗಿದೆ.  ಗಾಯಾಳು ಶಮಿಯನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ ಸದ್ಯ ಮಣಿಪಾಲ್ ಆಸ್ಪಯಲ್ಲಿ ದಾಖಲಾಗಿರುವ ಶಮಿಯುಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ….

Read Full News

ಹೊಸನಗರ : ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ – ಬೇಸತ್ತ ರೈತ ಆತ್ಮಹತ್ಯೆ |sucide

ಮಲೆನಾಡಿನಲ್ಲಿ ಎಲೆ ಚುಕ್ಕೆ ತೀವ್ರತೆ ಹೆಚ್ಚಾಗಿದ್ದು, ರೈತನೋರ್ವನ ಬಲಿ ಪಡೆದುಕೊಂಡಿದೆ. ಎಲೆಚುಕ್ಕೆ ರೋಗಕ್ಕೆ ಅಡಕೆ ತೋಟ ಬಲಿಯಾದ ಹಿನ್ನೆಲೆ ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ ರೈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಮದೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕರಿಮನೆ ಗ್ರಾಪಂ ಕಿಳಂದೂರು ಗ್ರಾಮದ ಕೃಷ್ಣಪ್ಪಗೌಡ (60) ಮೃತ ವ್ಯಕ್ತಿ ಮನೆಯ ಪಕ್ಕದಲ್ಲಿರುವ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಕೃಷ್ಣಪ್ಪಗೌಡ ಅವರ ಸಹೋದರ…

Read Full News

ರಿಪ್ಪನ್‌ಪೇಟೆ : ಪಾದಚಾರಿಗೆ ಬೈಕ್ ಡಿಕ್ಕಿ – ಗಂಭೀರ ಗಾಯಗೊಂಡ ಪಾದಚಾರಿ ಮೆಗ್ಗಾನ್ ಗೆ ದಾಖಲು |Accident

ರಿಪ್ಪನ್‌ಪೇಟೆ : ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ಪಟ್ಟಣದ ವಿನಾಯಕನಗರದ ಬಾಲಕಿಯರ ಹಾಸ್ಟೆಲ್ ಮುಂಭಾಗದಲ್ಲಿ ನಡೆದಿದೆ. ಶಿವಮೊಗ್ಗ ರಾಮನಗರ ನಿವಾಸಿ ಸೈಯದ್ ಮುಜಾಹಿದ್ (34) ಗಂಭೀರ ಗಾಯಗೊಂಡಿದ್ದಾರೆ. ವಿನಾಯಕನಗರದಿಂದ ರಿಪ್ಪನ್‌ಪೇಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಿಪ್ಪನ್‌ಪೇಟೆ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಡಗಾಲು ಮುರಿದಿದ್ದು ,ತಲೆ ಹಾಗೂ ಎಡಪಕ್ಕೆಗೆ ತೀವ್ರತರವಾದ ಪೆಟ್ಟಾಗಿದ್ದು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ರಾಮನಗರ ನಿವಾಸಿ ಸೈಯದ್ ಮುಜಾಹಿದ್…

Read Full News

ಮಾರಕಾಸ್ತ್ರಗಳೊಂದಿಗೆ ವೀಡಿಯೋ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಯುವಕನ ಬಂಧನ |Cybercrime

ಮಾರಕಾಸ್ತ್ರಗಳನ್ನು ಹಿಡಿದುಕೊಂಡು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಯುವಕನನ್ನು ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಶಿವಮೊಗ್ಗ ತಾಲೂಕಿನ ಅಗಸವಳ್ಳಿಯ ಗೌಳಿ ಕ್ಯಾಂಪ್‌ನ ಇಸ್ಮಾಯಿಲ್ (20) ಬಂಧಿತ ಆರೋಪಿಯಾಗಿದ್ದು, ಈತ ಸಾಮಾಜಿಕ ಜಾಲತಾಣದಲ್ಲಿ ಲಾಂಗು-ಮಚ್ಚುಗಳೊಂದಿಗೆ ಇರುವ ವಿಡಿಯೋ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದ್ದನು. ಈತನು ಫೇಸ್‌ಬುಕ್‌ನಲ್ಲಿ ಇಸ್ಮಾಯಿಲ್ ಇಸ್ಮಾಯಿಲ್ ಎಂಬ ಖಾತೆ ಹೊಂದಿದ್ದ. ಜೊತೆಗೆ ಐದಾರು ಮಚ್ಚು ಮತ್ತು ತಲ್ವಾರ್‌ಗಳ ನಡುವೆ ಕಾಣಿಸಿಕೊಳ್ಳುವ ತನ್ನದೇ ವಿಡಿಯೋ ಮಾಡಿ ಪೇಸ್ಬುಕ್ ನಲ್ಲಿ ಹರಿಯಬಿಟ್ಟಿದ್ದ.  ಈ ಬಗ್ಗೆ…

Read Full News

ಹೊಸನಗರ : ಮಹಿಳೆಯ ಮೇಲೆ ಕಾಡುಕೋಣ ದಾಳಿ – ಗಂಭೀರ ಗಾಯಗೊಂಡ ಮಹಿಳೆ ಮಂಗಳೂರಿನ ಆಸ್ಪತ್ರೆಗೆ ದಾಖಲು |Wild attack

ಹೊಸನಗರ : ಕೆಲಸಕ್ಕೆ ಹೋಗುತ್ತಿದ್ದ ವೇಳೆ ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ (03-10-2022) ಸೋಮವಾರ ನಡೆದಿದೆ. ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಮಾಕೋಡು ನಿವಾಸಿ ಜಯಮ್ಮ(45) ಕಾಡುಕೋಣ ದಾಳಿಗೆ ತುತ್ತಾದ ಮಹಿಳೆಯಾಗಿದ್ದಾರೆ. ಬೆಳಿಗ್ಗೆ ಎದ್ದು ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗುವ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಮಹಿಳೆಯನ್ನು ಕೋಡಿನಿಂದ ತಿವಿದು ನಂತರ ಎತ್ತಿ ಬಿಸಾಡಿದೆ.ಮಹಿಳೆಯ ಕೈಮುರಿತವಾಗಿದ್ದು, ಹೊಟ್ಟೆ, ಹಣೆ, ಮೇಲೆ ತಿವಿದ ಗಾಯಗಳಾಗಿವೆ. ಮಹಿಳೆಯ ಚೀರಾಟ ಕೇಳಿ ತುಸುದೂರದಲ್ಲಿದ್ದ ಪತಿ…

Read Full News

ಮೃಗವಧೆ ರಾಜು ಕೊಲೆ ಪ್ರಕರಣ – ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ | Arrested

ತೀರ್ಥಹಳ್ಳಿ : ತಾಲೂಕಿನ ಮಾಳೂರಿನಲ್ಲಿ ವ್ಯಕ್ತಿಯೋರ್ವನನ್ನು ಬಲವಾಗಿ ಹೊಡೆದು ಆತನನ್ನ ಬೈಕ್ ನಲ್ಲಿ ಕರೆದುಕೊಂಡು ಬಂದು ಮನೆಯ ಬಾಗಿಲಿನಲ್ಲಿ ಬಿಟ್ಟು ಹೋಗಿದ್ದ ಪ್ರಕರಣದಲ್ಲಿ ನಾಲ್ವರನ್ನ ಬಂಧಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯಲ್ಲಿ ಸೆ.25  ರಂದು ಬೆಳ್ಳಿಕೋಡಿಗೆ ಗ್ರಾಮದಲ್ಲಿ ರಾಜು ಎಂಬ ವ್ಯಕ್ತಿ ಕುಡಿಯಲು  ಅಲ್ಲಿದ್ದ ಕೋಳಿ ಅಂಗಡಿಯ ಬಳಿ ಕೋಳಿ ಕದಿಯಲು ಬಂದಿದ್ದೀಯ ಎಂದು ಆರೋಪಿಸಿ ಶಿಶಿರ, ವಿಜಯೇಂದ್ರ ಮತ್ತು ಶಿವು ಎಂಬುವರು ರಾಜುನನ್ನ ಕೈಕಾಲು ಕಟ್ಟಿಹಾಕಿ ದೊಣ್ಣೆಗಳಿಂದ ಹೊಡೆದಿರುತ್ತಾರೆ. ನಂತರ ಬೈಕ್ ನಲ್ಲಿ ಕರೆದುಕೊಂಡು…

Read Full News

ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ : ಕೊಲೆ ಎಂಬ ಶಂಕೆ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು | MISSING

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.  ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಅನ್ವರ್ ಕಾಲೋನಿ‌ ನಿವಾಸಿ ಜಮೀರ್(19) ಎರಡು ದಿನಗಳ ಹಿಂದ ಎಲೆಕ್ಟ್ರಿಕಲ್ ಕೆಲಸಕ್ಕೆ ತೆರಳಿದ್ದ ಆದರೆ ಇಂದು ಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.  ಅನ್ವರ್ ಕಾಲೋನಿಯ ಜಮೀರ್ ಮೊನ್ನೆ ಟಿವಿ ರಿಪೇರಿಗಾಗಿ ದೇವನರಸೀಪುರ ಗ್ರಾಮಕ್ಕೆ ಹೋಗಿದ್ದ ನಂತರ ಆತನ ಮೊಬೈಲ್ ಸ್ವಿಚ್ ಆಫ಼್ ಆಗಿತ್ತು. ಆತನ ಮೊಬೈಲ್ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಗಾಬರಿಗೊಂಡು ಹೊಸಮನೆ ಪೊಲೀಸ್ ಠಾಣೆಯಲ್ಲಿ…

Read Full News

ಅಕ್ರಮ ಜಾನುವಾರು ಸಾಗಾಟ – ಬಜರಂಗದಳ ಕಾರ್ಯಕರ್ತರಿಂದ ರಕ್ಷಣೆ |bajarangdal

ಮಾರಾಟದ ಉದ್ದೇಶಕ್ಕಾಗಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಬಜರಂಗದಳದ ಕಾರ್ಯಕರ್ತರು ರಕ್ಷಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಇಂದು ನಡೆದಿದೆ.  ಹೊಸನಗರ ಕಡೆಯಿಂದ ಶಿರಾಳಕೊಪ್ಪದ ಕಡೆಗೆ ಅಶೋಕ್ ಲೈಲೆಂಡ್ ದೋಸ್ತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರು ಎತ್ತಿನ ಹೋರಿ ಹಾಗೂ ಒಂದು ಎಮ್ಮೆ ಕರುವನ್ನು ಭಜರಂಗದಳದ ಕಾರ್ಯಕರ್ತರು ರಸ್ತೆಗೆ ಅಡ್ಡಗಟ್ಟಿ ವಶಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಂದು ಬೆಳಿಗ್ಗೆ ಕೆಎ 17 ಎಎ 0196 ವಾಹನದಲ್ಲಿ ಸುಮಾರು ಆರು ಎತ್ತಿನಹೋರಿ ಹಾಗೂ ಒಂದು ಎಮ್ಮೆ…

Read Full News

ಅಕ್ಕನ ಬಾಣಂತನಕ್ಕೆ ಹೋದ ಯುವತಿ ಭಾವನಿಂದ ಗರ್ಭಿಣಿ – ಮದುವೆಗೆ ಒಲ್ಲೆ ಎಂದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ |suicide

 ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 21 ವರ್ಷದ ಯುವತಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಕನ ಬಾಣಂತನಕ್ಕೆ ಹೋಗಿದ್ದ ವೇಳೆ ಅಕ್ಕನ ಗಂಡ ಪುಸಲಾಯಿಸಿ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದ.ನಂತರ ಎಲ್ಲಾರಿಗೂ ಗೊತ್ತಾದ ನಂತರ ಉಡಾಫೆ ಮಾತನಾಡಿದ ಕಾರಣ ಯುವತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.           [     ಆರೋಪಿ ಪ್ರಶಾಂತ್  ] ಚೋರಡಿಯ ಮರಾಠೀ ಕ್ಯಾಂಪ್ ನಿವಾಸಿಯಾದ ಯುವತಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.ಅದೇ ಮರಾಠಿ…

Read Full News

ರಿಪ್ಪನ್‌ಪೇಟೆ : ಮಹಿಳೆಯೊಬ್ಬರ ಅಸ್ಥಿಪಂಜರ ಪತ್ತೆ – ಕಳೆದ ವರ್ಷ ನಾಪತ್ತೆಯಾಗಿದ್ದ ಮಹಿಳೆ ಎಂಬ ಶಂಕೆ | Human skeleton

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಹಿಳೆಯೊಬ್ಬರ  ಅಸ್ಥಿಪಂಜರ ಆಕೆ ಧರಿಸಿದ್ದ ವಸ್ತ್ರದ ಜೊತೆಗೆ ಪತ್ತೆಯಾಗಿರುವ ಘಟನೆ ನಡೆದಿದೆ. ವರ್ಷದ ಹಿಂದೆ ನಾಪತ್ತೆಯಾಗಿದ್ದ ವೃದ್ದೆ ಎಂಬ ಶಂಕೆ : ಹಾರಂಬಳ್ಳಿ ಗ್ರಾಮದ ಮಹಿಳೆ ಗಿಡ್ಡಮ್ಮ (80) ಕಳೆದ 12-07-2021ರಂದು ನಾಪತ್ತೆಯಾಗಿದ್ದರು.ಕೂಡಲೇ ಗಿಡ್ಡಮ್ಮ ಅವರ ಮಕ್ಕಳು ರಿಪ್ಪನ್‌ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ  ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ಆದರೆ ವೃದ್ದೆ ಎಲ್ಲೂ ಪತ್ತೆಯಾಗಿರಲಿಲ್ಲ. ನಾಪತ್ತೆಯಾಗಿ ಒಂದು ವರ್ಷ ಎರಡು ತಿಂಗಳ ನಂತರ…

Read Full News

ಎರಡು ಕಾರುಗಳು,ಬಸ್ ಮತ್ತು ಬೈಕ್ ನಡುವೆ ಸರಣಿ ಅಪಘಾತ : ನಾಲ್ವರಿಗೆ ತೀವ್ರ ಗಾಯ-ಮೆಗ್ಗನ್ ಗೆ ದಾಖಲು |Accident

ಎರಡು ಕಾರುಗಳು, ಬಸ್ಸು ಮತ್ತು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ, ನಾಲ್ವರು ಗಾಯಗೊಂಡಿರುವ ಘಟನೆ ಸಾಗರ ತಾಲೂಕಿನ ಕುಗ್ವೆ ಕ್ರಾಸ್ ಬಳಿ ಸಂಜೆ ಸಂಭವಿಸಿದೆ.  ಕುಗ್ವೆ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾಗನಾರ್ ಕಾರು, ಬೈಕ್, ಕಾರು ಮತ್ತು ಬಸ್ಸಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಜೋಗ ನಿವಾಸಿಗಳಾದ ಕೃಷ್ಣಮೂರ್ತಿ, ಬಾಲಕೃಷ್ಣ, ಮಧು ಮತ್ತು ಶ್ರೀಧರ್ ಎಂಬುವವರಿಗೆ ತೀವ್ರ ಗಾಯವಾಗಿದೆ. ಅವರನ್ನು ಕೂಡಲೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ…

Read Full News

ಕೆ ಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸಾವು

ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆಯಲ್ಲಿ ಕೆಎಸ್ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಆಂಜನೇಯ ಅಗ್ರಹಾರದ ಮೂರನೇ ತಿರುವಿನ ನಿವಾಸಿ ಲೋಕೇಶ್ ಎಂಬಾತನು ಬೈಕ್ ನಲ್ಲಿ ಹೋಗುತ್ತಿದ್ದಾಗ ನ್ಯೂಟೌನ್ ಪೊಲೀಸ್ ಠಾಣೆಯ ಸಮೀಪ ಕೆಎಸ್ ಆರ್ ಟಿ ಸಿ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ಸವಾರ…

Read Full News

ಖಾಸಗಿ ಈಜುಕೊಳದಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು :

ಖಾಸಗಿ ಈಜುಕೊಳದಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ತನ್ನ ಸ್ನೇಹಿತರೊಂದಿಗೆ ಶಿವಮೊಗ್ಗದ ಶಕ್ತಿಧಾಮದ ಖಾಸಗಿ‌ ಈಜುಕೊಳಕ್ಕೆ ತೆರಳಿದ್ದ ಜೋಸೆಫ್ ನಗರದ ಯುವಕ ರಾಕೇಶ್ ಎಂಬ 18 ವರ್ಷದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಡಿವಿಎಸ್ ಕಾಮರ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ರಾಕೇಶ್ ಎರಡು ಮೂರು ದಿನಗಳಿಂದ ಸ್ನೇಹಿತರೊಂದಿಗೆ ಈಜುಕೊಳದಲ್ಲಿ ತೆರಳಿ ಈಜು ಹೊಡೆಯಲು ಯೋಜನೆ ಹಾಕಿಕೊಂಡಿದ್ದ. ಇಂದು ಮಧ್ಯಾಹ್ನ ಈಜುಕೊಳಕ್ಕೆ ತೆರಳಿದ್ದ ಯುವಕ ಮನೆಗೆ ಹೊರಡುವ ವೇಳೆ ನೀರಿನಿಂದ…

Read Full News

ಕೋಳಿ ಕದಿಯುತ್ತಿದ್ದ ಎನ್ನುವ ಕಾರಣಕ್ಕೆ ಮೃಗವಧೆ ರಾಜು ಎಂಬಾತನನ್ನು ಬಡಿದು ಕೊಂದು ಬಿಟ್ರಾ ದುಷ್ಕರ್ಮಿಗಳು..!!!!!!!????

ಅಂಗಡಿಗಳಲ್ಲಿ ಕೋಳಿ ಕದಿಯುತ್ತಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬಡಿದು ಕೊಂದಿರುವಂತಹ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.  ಮೃಗವಧೆಯ ರಾಜು ಹೇಗೆ ಸಾವನ್ನಪ್ಪಿರುವ ವಿಚಾರ ಇದೀಗ ಹೊರಕ್ಕೆ ಬಂದಿದೆ. ಆ ಊರು ಹಾಗೂ ಅಲ್ಲಿನ ಸ್ಥಳಿಯರು ಹೇಳುವ ಪ್ರಕಾರ ಆತ ಅಡಿಕೆ ಗೊನೆ ತೆಗೆಯುವವನಾಗಿದ್ದು ಹಾಗೂ ಮದ್ಯ ವ್ಯಸನಿಯಾಗಿದ್ದ. ಕಳೆದ ಮೂರು ದಿನಗಳಿಂದ ರಾಜು ಮನೆಯಲ್ಲಿರಲಿಲ್ಲ.  ಕೋಳಿಯಂಗಡಿಗಳಲ್ಲಿ ಕೋಳಿ ಕದಿಯುತ್ತಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಶಿಶಿರ, ಶಿವು ಮತ್ತು ವಿಜಯೇಂದ್ರ ಎಂಬ ಆರೋಪಿಗಳು ಹಲ್ಲೆ…

Read Full News

ಗೃಹ ಸಚಿವರ ಸ್ವಕ್ಷೇತ್ರದಲ್ಲಿಯೇ ವ್ಯಕ್ತಿಯೊಬ್ಬನ ಭೀಕರ ಹತ್ಯೆ!!!!!!!!

ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೃಗಾವಧೆಯ ಬೆಳ್ಳಿಕೊಡಿಗೆ ವಾಸಿ ರಾಜು (45) ಬೆಳ್ಳಂಬೆಳಗ್ಗೆ ಮನೆ ಮುಂಭಾಗದಲ್ಲಿ ಹೆಣವಾಗಿದ್ದಾರೆ. ಸಾಯುವ ಮುನ್ನ ರಾಜು ಮಾರಾಮಾರಿ ವಿಚಾರ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡಿದ್ದು, ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಬಹಿರಂಗವಾಗಬೇಕಾಗಿದೆ. ರಾಜು ಮೂರು ದಿನಗಳಿಂದ ಮನೆಗೆ ಬಂದಿರಲ್ಲಿಲ್ಲ. ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಮೂವರು ದುಷ್ಕರ್ಮಿಗಳು ಯದ್ವತದ್ವ ಹಲ್ಲೆ ಮಾಡಿ ಬೈಕಿನಲ್ಲಿ ಮನೆ ಮುಂಭಾಗ ತಂದು ಎಸೆದಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಜು ಜೋರಾಗಿ…

Read Full News

ಹಸುವಿಗೆ ನೀರು ಕುಡಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

 ಹಸುವಿಗೆ ನೀರು ಕುಡಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ‌ ನಡೆದಿದೆ. ಬೀರನಕೆರೆ ಗ್ರಾಮದ ರವಿ ನಾಯ್ಕ(18) ಮೃತ ಯುವಕ. ರವಿನಾಯ್ಕ ಭಾನುವಾರ ಮಧ್ಯಾಹ್ನ ಹಸುವಿಗೆ ನೀರು ಕುಡಿಸಲು ಗ್ರಾಮದ ಎಂಪಿಎಂ ಕಟ್ಟೆಯ ಬಳಿ‌ ಹೋದಾಗ, ಹಸು ನೀರಿಗೆ ಇಳಿದಿದೆ. ಈ ವೇಳೆ ಹಸು‌ ನೀರಿನ ಆಳಕ್ಕೆ ಹೋದಾಗ ಹಸುವನ್ನು ಕರೆದುಕೊಂಡು ಬರಲು ಹೋಗಿ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹಸು ಮನೆಗೆ ಬಂದಿದೆ. ಆದರೆ ರವಿ ಮನೆಗೆ ಬಾರದೆ…

Read Full News

ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು : ಹೃದಯ ಹಿಂಡುತ್ತಿರುವ ಕುಟುಂಬಸ್ಥರ ಆಕ್ರಂದನ

ಮನೆಯ ಮುಂದಿನ ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗುವೊಂದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ೧೧ ತಿಂಗಳ ಮಗು ಅಕ್ಷಯ್ ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದೆ. ಮುಂದಿನ ವಾರ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದು ಮಗುವಿನ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲು ಯೋಚಿಸಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. ಮಹಾಲಯ ಅಮವಾಸ್ಯೆ ದಿನವಾದ ಭಾನುವಾರ ಮನೆಯವರು ವಾಹನ ತೊಳೆಯುವುದು, ಪೂಜೆ ಪುನಸ್ಕಾರದ ಕಡೆ ಗಮನ…

Read Full News

ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು ,ಇನ್ನೊಬ್ಬ ಗಂಭೀರ

ಪೋಸ್ಟ್ ಮ್ಯಾನ್ ನ್ಯೂಸ್ ಡೆಸ್ಕ್ …………………ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ ಸಮೀಪದಲ್ಲಿ ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಚಿಕ್ಕಮಗಳೂರು ನಿಂದ ಕಾರವಾರಕ್ಕೆ ಹೊರಟ ಸರ್ಕಾರಿ ಬಸ್ ಹಾಗೂ ವಡನ್ ಬೈಲ್ ಪದ್ಮಾವತಿ ದೇವಾಲಯದ ಧರ್ಮಧರ್ಶಿ ಹಾಗೂ ಸಹೋದರ ಚಲಿಸುತ್ತಿದ್ದ ಮಾರುತಿ ಓಮ್ನಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ದೇವಯ್ಯಾ ಜೈನ್ ಮೃತರಾಗಿದ್ದಾರೆ.ಇವರು ನಿವೃತ್ತ ಕೆಪಿಸಿ ಉದ್ಯೋಗಿಯಾಗಿದ್ದರು. ಸಹ ಪ್ರಯಾಣಿಕ ರಾಜೇಂದ್ರ ಜಯಂತ್ ಸ್ವಾಮೀಜಿ ರವರ ತಲೆಗೆ…

Read Full News

ದೂರು ನೀಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹೆಡ್ ಕಾನ್ ಸ್ಟೇಬಲ್ ಬಂಧನ :

…………………………ಪೋಸ್ಟ್ ಮ್ಯಾನ್ ನ್ಯೂಸ್ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ (head constable) ವಿರುದ್ಧ ಮಹಿಳೆಯೊಬ್ಬರು ಭದ್ರಾವತಿಯ ಟೌನ್‌ ಸರ್ಕಲ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್‌ ಕಾನ್‌ಸ್ಟೇಬಲ್‌ ರಾಘವೇಂದ್ರ ವಿರುದ್ಧ ಕೆ.ರೇಖಾ ಎಂಬುವವರು ಆರೋಪ ಮಾಡಿದ್ದಾರೆ. ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದ ಕೆ.ರೇಖಾ 2019ರ ಫೆಬ್ರವರಿಯಲ್ಲಿ ತನ್ನ ಪತಿ ಆಂಜನೇಯ ಮತ್ತು ಅವರ ತಮ್ಮ ರಮೇಶನ ನಡುವೆ ಆಸ್ತಿಯ ವಿಚಾರವಾಗಿ (matter of…

Read Full News

ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿರಾಯ : ಆರೋಪಿ ಬಂಧನ

ಪತ್ನಿಯನ್ನು ಚಾಕುವಿನಿಂದ ಇರಿದು ಪತಿಯೇ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಇಂದು ನಡೆದಿದೆ. ಕೊಲೆಗೆ ಕೌಟುಂಬಿಕ ಕಲಹ ಕಾರಣವೆಂದು ಶಂಕಿಸಲಾಗಿದೆ. ಕರುಣಾಕರ ಎಂಬ 33 ವರ್ಷದ ಎಂಬಿಎ ಪದವೀಧರ ಎರಡು ವರೆ ವರ್ಷದ ಹಿಂದೆ ಬುಳ್ಳಾಪುರದ ಯುವತಿ ಅಮಿತಾ(26) ಎಂಬಾಕೆಯೊಂದಿಗೆ ಮದುವೆಯಾಗಿದ್ದ. ಮದುವೆಯಾಗಿ ಎರಡೂವರೆ ವರ್ಷ ಕಳೆದಿದ್ದರು ಮಕ್ಕಳಾಗಿರಲಿಲ್ಲ. ಆದರೆ ಮಕ್ಕಳ ವಿಚಾರದಲ್ಲಿ ಗಲಾಟೆಯಾಗಿಲ್ಲವೆಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಪದೇ ಪದೇ ಜಗಳವಾಡುತ್ತಿದ್ದ ಪತಿಪತ್ನಿ ಕಳೆದ ವರ್ಷ ಗಂಡನ ಮನೆ ತೊರೆದು ಪತ್ನಿ ಅಮಿತಾ ತವರು ಮನೆ…

Read Full News

ಮಲೆನಾಡಿನಲ್ಲಿ ಉಗ್ರರ ಕರಿನೆರಳು!!!! : ಶಿವಮೊಗ್ಗದಲ್ಲಿ ಎಂಜಿನಿಯರ್ ಯಾಸಿನ್ ಸಹಿತ ಇಬ್ಬರು ಶಂಕಿತ ಉಗ್ರರ ಬಂಧನ – ಇನ್ನಿಬ್ಬರಿಗೆ ಶೋಧ

ಮಲೆನಾಡಿಗೂ ಉಗ್ರರ ನಂಟು ತಗುಲಿವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ಜಿಲ್ಲೆಯ ಇಬ್ಬರು ಮತ್ತು ಮಂಗಳೂರು ಮೂಲದ ಓರ್ವನ ವಿರುದ್ಧ ಶಿವಮೊಗ್ಗ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣ ಇವರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ. ಮೂವರು ಶಂಕಿತರಾದ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿ ಸಯ್ಯದ್ ಯಾಸೀನ್(21) ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ (22) ಮತ್ತು ತೀರ್ಥಹಳ್ಳಿ ಸೂಪ್ಪುಗುಡ್ಡೆಯ ನಿವಾಸಿ ಶಾರೀಕ್ ಮೇಲೆ ಯುಎಪಿಎ (UNLAWFUL ACTIVITIES (PREVEVNTION…

Read Full News

ರಿಪ್ಪನ್‌ಪೇಟೆ : ಸಾಲಭಾದೆಗೆ ಬೇಸತ್ತು ಜಮೀನಿನಲ್ಲಿಯೇ ವಿಷ ಸೇವಿಸಿ ರೈತ ಆತ್ಮಹತ್ಯೆ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗೌಡಕೊಪ್ಪ ಗ್ರಾಮದ ರೈತನೊಬ್ಬ ಸಾಲಭಾದೆಗೆ ತತ್ತರಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೊಸನಗರ ತಾಲೂಕಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗೌಡಕೊಪ್ಪ ಗ್ರಾಮದ ರೈತ ಮಂಜಪ್ಪ(55) ಎಂಬುವವರು ಸಾಲಭಾದೆಗೆ ಹೆದರಿ ತಮ್ಮ ಸ್ವಂತ ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗೌಡಕೊಪ್ಪ ಗ್ರಾಮದ ರೈತ ಮಂಜಪ್ಪ ರವರಿಗೆ ಮನೆ ಹಿಂಬದಿಯಲ್ಲಿಯೇ ಒಂದೂವರೆ ಎಕರೆ ಜಮೀನು ಇದ್ದು ಅದರಲ್ಲಿಯೇ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಸದರಿ ಜಮೀನಿನ ಆಧಾರದ ಮೇಲೆ…

Read Full News

ಹೊಸ ತಿರುವು ಪಡೆದುಕೊಂಡ ಮಹಿಳೆ ನಾಪತ್ತೆ ಪ್ರಕರಣ : ಪತ್ನಿಯನ್ನು ಕೊಲೆ ಮಾಡಿ ನದಿಗೆ ಎಸೆದಿದ್ದ ಪತಿರಾಯ

ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಪತಿಯೆ ಈ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕೊಪ್ಪ ಗ್ರಾಮದಲ್ಲಿ ದಿನಾಂಕ 04-08-2022ರಂದು ಮಹಿಳೆ ಕಾಣೆಯಾಗಿದ್ದಾಳೆಂದು ಮಹಿಳೆಯ ಅಣ್ಣ ಅಣ್ಣಪ್ಪ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾಣೆಯಾದ ಪುಷ್ಪಾವತಿ ಯನ್ನು ಆಕೆಯ ಗಂಡ ದಯಾನಂದ ಕೊಲೆ ಮಾಡಿ ವರದಾ ನದಿಯಲ್ಲಿ ಎಸೆದಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.   ರಾಜಶೇಖರ್ ವೃತ್ತ ನಿರೀಕ್ಷಕರು ಸೊರಬ ಹಾಗೂ ದೇವರಾಯ ಉಪನಿರೀಕ್ಷಕರು ಸೊರಬ ಠಾಣೆ…

Read Full News

ರಿಪ್ಪನ್‌ಪೇಟೆ : ಮದುವೆಗೆ ನಿರಾಕರಿಸಿದ ಪ್ರಿಯಕರ – ವಿಷ ಸೇವಿಸಿ ಯುವತಿ ಆತ್ಮಹತ್ಯೆ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾಲುಗುಡ್ಡೆ ಗ್ರಾಮದ ಕ್ಯಾಂಪ್ ನಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಲುಗುಡ್ಡೆ ಕ್ಯಾಂಪ್ ನಲ್ಲಿ ಅನುಷಾ (19) ಎಂಬ ಯುವತಿ ನಿನ್ನೆ ಮನೆಯಲ್ಲಿದ್ದಾಗ ಕೀಟನಾಶಕ ಕುಡಿದು ತನ್ನ ಪ್ರಿಯಕರನಿಗೆ ಕರೆ ಮಾಡಿ ವಿಷ ಸೇವಿಸಿರುವುದಾಗಿ ತಿಳಿಸಿದ್ದಾಳೆ.ಕೂಡಲೇ ಪ್ರಿಯಕರ ಮಂಜುನಾಥ್ ಓಡಿ ಬಂದು ಯುವತಿಯನ್ನ ಆನಂದಪುರ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಆನಂದಪುರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು ನಂತರ ಹೆಚ್ಚಿನ ಚಿಕಿತ್ಸೆಗೆ ಯುವತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಗೆ…

Read Full News

ರಿಪ್ಪನ್‌ಪೇಟೆ : ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಉಡುಪಿಯಲ್ಲಿ ಪತ್ತೆ : ಸುಖಾಂತ್ಯಗೊಂಡ ನಾಪತ್ತೆ ಪ್ರಕರಣ

ರಿಪ್ಪನ್‌ಪೇಟೆ : ಇತ್ತೀಚೆಗೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ  ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರದ ನಿವಾಸಿ ಸೌಂದರ್ಯ ತನ್ನ ಇಬ್ಬರು ಮಕ್ಕಳೊಂದಿಗೆ ಉಡುಪಿಯ ಸಾಂತ್ವಾನ ಕೇಂದ್ರದಲ್ಲಿ ಪತ್ತೆಯಾಗಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಹೆದ್ದಾರಿಪುರ ಗ್ರಾಮದ ಶಶಿಕುಮಾರ್ ಎಂಬಾತನೊಂದಿಗೆ ಸೌಂದರ್ಯ ವಿವಾಹವಾಗಿದ್ದರು . ಶಶಿ ಕುಮಾರ್ ಪತ್ನಿಗೆ ಮಾನಸಿಕ ಕಿರುಕುಳ ದೈಹಿಕ ಹಲ್ಲೆ ನಡೆಸುತ್ತಿದ್ದ ಕಾರಣ ಪತಿಯ ನಡೆಗೆ ಬೇಸತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾರೆ. ನಿನ್ನೆ ಮೂವರು ಪತ್ತೆಯಾಗಿ ಉಡುಪಿ ಸಾಂತ್ವಾನ ಕೇಂದ್ರದಲ್ಲಿದ್ದಾರೆ….

Read Full News

ತುಮಕೂರು ಮೂಲದ ಯುವಕ ಶಿವಮೊಗ್ಗ ನಗರದ ಲಾಡ್ಜ್ ನಲ್ಲಿ ಆತ್ಮಹತ್ಯೆ :

ಶಿವಮೊಗ್ಗ  ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ಒಂದರಲ್ಲಿ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆತ್ಮ ಹತ್ಯೆ ಮಾಡಿಕೊಂಡ ಯುವಕ ತುಮಕೂರು ಜಿಲ್ಲೆ ಕೆರೆಸೂರಗೊಂಡನ ಹಳ್ಳಿಯ ಮಂಜು ನಾಥ್ (26) ಎಂದು ತಿಳಿದು ಬಂದಿದೆ. ಡೆತ್‌ನೋಟ್‌ ಪತ್ತೆ:  ಈತ ಅಕ್ಕ ಸುಧಾಳನ್ನು ಕೊಲೆಗೈದಿದ್ದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಸುಧಾ ತನ್ನ ಗಂಡನನ್ನು ಅವಳ ಸ್ನೇಹಿತರ ಜತೆ ಸೇರಿ ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಳು. ಈ ಕೋಪದಲ್ಲಿ ಸುಧಾಳನ್ನು ಕೊಲೆ…

Read Full News

ಪೋಕ್ಸೋ ಪ್ರಕರಣದಲ್ಲಿ ತನ್ನ ಪರ ತೀರ್ಪು ಬರುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ಯುವಕ :

 ಪೋಕ್ಸೋ‌ ಪ್ರಕರಣದಲ್ಲಿ ತನ್ನ ಪರ ತೀರ್ಪು ಬರುವ ಮುನ್ನವೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಮದನ ಕುಮಾರ್ (25) ಎಂಬಾತ ನಿನ್ನೆ ತನ್ನ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ. ಮದನ್ ಕುಮಾರ್ ವಿರುದ್ದ ಅದೇ ಗ್ರಾಮದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಆರೋಪದ ಮೇಲೆ ಪೋಕ್ಸೋ ಪ್ರಕರಣ ಕಳೆದ ಐದಾರು ವರ್ಷದ ಹಿಂದೆ ದಾಖಲಾಗಿತ್ತು. ನಂತರ ಮದನ ಕುಮಾರ್​ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ. ಪ್ರಕರಣದಲ್ಲಿ…

Read Full News

ಇಬ್ಬರು ಮಕ್ಕಳೊಂದಿಗೆ ವಿವಾಹಿತ ಮಹಿಳೆ ನಾಪತ್ತೆ : ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ರಿಪ್ಪನ್ ಪೇಟೆ : ತಾಯಿಯೊಂದಿಗೆ ಇಬ್ಬರು ಮಕ್ಕಳು  ಸೆಪ್ಟೆಂಬರ್12  ರಿಂದ ನಾಪತ್ತೆಯಾಗಿದ್ದಾರೆಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ  ವಿದ್ಯಾನಗರದ ನಿವಾಸಿ ಸೌಂದರ್ಯ(26) ಅನ್ವಿತಾ(8)  ಶ್ರೀಜಿತ್( 6) ಎನ್ನಲಾಗಿದೆ. ಕಳೆದ ಹತ್ತು ವರ್ಷದ ಹಿಂದೆ ಶಶಿ ಕುಮಾರ್ ಎಂಬಾತನೊಂದಿಗೆ  ಸೌಂದರ್ಯಳ  ವಿವಾಹವಾಗಿತ್ತು.  ಶಶಿಕುಮಾರ್ ಪತ್ನಿಗೆ ಮಾನಸಿಕ ಕಿರುಕುಳ ದೈಹಿಕ ಹಲ್ಲೆ ನಡೆಸುತ್ತಿದ್ದ ಕಾರಣ ಪತಿಯ ನಡೆಗೆ ಬೇಸತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ  ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ…

Read Full News

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದು ತಂದೆ-ಮಗ ಸಾವು :

ಶಿವಮೊಗ್ಗ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ಲಾಟ್ ಫಾರಂನಿಂದ ಕೆಳಗೆ ಬಿದ್ದು ತಂದೆ, ಮಗ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ಘಟನೆ ಸಂಭವಿಸಿದೆ. ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿದ ಇವರಿಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಘಟನೆ ನಡೆದಿದೆ. ಮೋಹನ್ ಪ್ರಸಾದ್ (70) ಮತ್ತು ಅಮರನಾಥ್ (30) ಮೃತರು. ತಂದೆ ಮತ್ತು ಮಗ ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ…

Read Full News

ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ವಾಹನ : ಯುವಕ ಸ್ಥಳದಲ್ಲೇ ಸಾವು

ಸಾಗರ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪ್ರಗತಿ ಶಾಲೆಯ ಬಳಿ ವಾಹನವೊಂದು ಢಿಕ್ಕಿಯಾಗಿ ಪರಾರಿಯಾದ ಕಾರಣ ಬೈಕ್‌ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.  ವಾಹನ ಮುಂಭಾಗದಿಂದ ಢಿಕ್ಕಿ ಹೊಡೆದು,ಸುಮಾರು ದೂರ ಯುವಕನ ದೇಹವನ್ನು ಎಳೆದುಕೊಂಡು ಹೋಗಿದೆ. ಬೈಕ್‌ ಚಲಾಯಿಸುತ್ತಿದ್ದ ಕುಗ್ವೆ ಗ್ರಾಮದ ನಿವಾಸಿ ರಂಜಿತ್ ಕುಮಾರ್ (26) ಎನ್ನುವ ಯುವಕ ರಸ್ತೆಗೆ ಅಪ್ಪಳಿಸಿ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಸ್ತೆಗೆ ಬಿದ್ದ ಪರಿಣಾಮ ತಲೆ ಒಡೆದು ತೀವ್ರವಾಗಿ ರಕ್ತ ಸ್ರಾವವಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.  ಪೊಲೀಸರು…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.