Headlines

ತೋಟದಲ್ಲಿ ಮೇಕೆ ಮೇಯಿಸುತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ – ಕ್ಷುಲ್ಲಕ ಕಾರಣಕ್ಕೆ ವಿಕೃತಿ ಮೆರೆದ ಪಾಪಿಗಳು

ತೋಟದಲ್ಲಿ ಮೇಕೆ ಮೇಯಿಸುತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ – ಕ್ಷುಲ್ಲಕ ಕಾರಣಕ್ಕೆ ವಿಕೃತಿ ಮೆರೆದ ಪಾಪಿಗಳು

ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ತೋಟದಲ್ಲಿ ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದಿದೆ.

ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ 50 ವರ್ಷದ ದಲಿತ ಮಹಿಳೆ ಮೇಲೆ ತೋಟದ ಮಾಲೀಕ ಹಲ್ಲೆ ನಡೆಸಿದ್ದಾನೆ.ಅವರನ್ನು ಸ್ಥಳೀಯರು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೋಟದಲ್ಲಿ ಮಹಿಳೆ ಮೇಕೆಗಳನ್ನ ಮೇಯಿಸುತ್ತಿದ್ದಾಳೆಂದು ಆಕ್ರೋಶಗೊಂಡ ತೋಟದ ಮಾಲೀಕ ರಾಮನಹಳ್ಳಿ ಶಿವಕುಮಾರ್ ಎಂಬುವವರ ಮಗ ಅರುಣ್ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಸೀರೆ ಬಿಚ್ಚಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾನೆ. ನಂತರ ಮರಕ್ಕೆ ಕಟ್ಟಿ ಹಾಕಲು ಯತ್ನಿಸಿದಾಹ ಹೇಗೋ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. 10 ಕ್ಕೂ ಮೇಕೆಗಳು ತೋಟದಲ್ಲಿ ಗಿಡಗಳ ಎಲೆ ತಿಂದಿದ್ದಾವೆ ಎಂದು ಆರೋಪಿ ಈ ಕೃತ್ಯ ಎಸಗಿದ್ದಾನೆ.

Leave a Reply

Your email address will not be published. Required fields are marked *