ವಿದ್ಯುತ್ ಅವಘಡದಲ್ಲಿ ಯುವಕ ಮೃತ್ಯು ಪ್ರಕರಣ – ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಶಾಸಕ ಬೇಳೂರು ಸೂಚನೆ
ರಿಪ್ಪನ್‌ಪೇಟೆ : ವಿದ್ಯುತ್ ದುರಸ್ತಿ ಕಾಮಗಾರಿ ವೇಳೆಯಲ್ಲಿ ನಡೆದ ಅಚಾತುರ್ಯದಿಂದ ಮಂಗಳವಾರ ಸಂಜೆ ಬಿಳಿಕಿ ಗ್ರಾಮದಲ್ಲಿ ಮೃತಪಟ್ಟ ಗಾಜಿನಗೋಡು ಗ್ರಾಮದ ಯುವಕ ಕೇಶವ್ ಸಾವಿಗೆ ಸಂಬಂಧಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ಸೂಚನೆ ನೀಡಿದರು.
ಮಂಗಳವಾರ ರಾತ್ರಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೃತ ಯುವಕನ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಅವರು ಘಟನೆಗೆ ಸಂಬಂಧಿಸಿದ ಮಾಹಿತಿ ಪಡೆದು ಈ ಅವಘಡ ಸಂಭವಿಸಲು ಕಾರಣರಾದವರ ವಿರುದ್ದ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಪಿಎಸ್‌ಐ ಪ್ರವೀಣ್ ಎಸ್ ಪಿ , ಮೆಸ್ಕಾಂ ಇಲಾಖೆಯ ಅಧಿಕಾರಿಗಳು , ಪಕ್ಷದ ಮುಖಂಡರು ಹಾಗೂ ಇನ್ನಿತರರಿದ್ದರು.