Headlines

ಕಾಮಗಾರಿ ವೇಳೆಯಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿ ಯುವಕ ಮೃತ್ಯು ಪ್ರಕರಣ – ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಶಾಸಕ ಬೇಳೂರು ಸೂಚನೆ

ವಿದ್ಯುತ್ ಅವಘಡದಲ್ಲಿ ಯುವಕ ಮೃತ್ಯು ಪ್ರಕರಣ – ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಶಾಸಕ ಬೇಳೂರು ಸೂಚನೆ ರಿಪ್ಪನ್‌ಪೇಟೆ : ವಿದ್ಯುತ್ ದುರಸ್ತಿ ಕಾಮಗಾರಿ ವೇಳೆಯಲ್ಲಿ ನಡೆದ ಅಚಾತುರ್ಯದಿಂದ ಮಂಗಳವಾರ ಸಂಜೆ ಬಿಳಿಕಿ ಗ್ರಾಮದಲ್ಲಿ ಮೃತಪಟ್ಟ ಗಾಜಿನಗೋಡು ಗ್ರಾಮದ ಯುವಕ ಕೇಶವ್ ಸಾವಿಗೆ ಸಂಬಂಧಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ಸೂಚನೆ ನೀಡಿದರು. ಮಂಗಳವಾರ ರಾತ್ರಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೃತ ಯುವಕನ ಕುಟುಂಬಸ್ಥರಿಗೆ…

Read More

ವಿದ್ಯುತ್ ಪ್ರವಹಿಸಿ ಕಟ್ಟಡ ಕಾರ್ಮಿಕ ಸಾವು

ವಿದ್ಯುತ್ ಪ್ರವಹಿಸಿ ಕಟ್ಟಡ ಕಾರ್ಮಿಕ ಸಾವು ಆನಂದಪುರ ಸಮೀಪದ ಮಲಂದೂರಿನಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಶಿವಮೊಗ್ಗ ಪಟ್ಟಣದ ನಿವಾಸಿ ಕೃಷ್ಣಮೂರ್ತಿ (46) ಸಾವಿಗೀಡಾದವರು. ಮಲ್ಲಂದೂರಿನ ಸಂತೋಷ್ ಅಗ್ರೋ ಕಂಪನಿಯ ಕಟ್ಟಡ ನಿರ್ಮಾಣ ಕಾರ್ಯ ನಡೆಸುತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ ತಕ್ಷಣ ಕಾರ್ಮಿಕರು ಅವರನ್ನು ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More