w
Headlines
Home » RIPPONPETE | ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ

RIPPONPETE | ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ

GridArt 20250226 161602569.jpg

RIPPONPETE | ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಮುಡುಬ ಗ್ರಾಮದ ಪಾಲಾಕ್ಷಪ್ಪ ಗೌಡ ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂ ನಷ್ಟವಾಗಿರುವ ಘಟನೆ ನಡೆದಿದೆ.

ಮುಡುಬಾ ಗ್ರಾಮದ ಪಾಲಾಕ್ಷಪ್ಪ ರವರಿಗೆ ಸೇರಿದ 200ಕ್ಕೂ ಹೆಚ್ಚು ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವುಂಟಾಗಿದೆ. ಈ ಅವಘಡದಲ್ಲಿ 50ಕ್ಕೂ ಹೆಚ್ಚು ನೀರಿನ ಪೈಪುಗಳು ಸುಟ್ಟು ಭಸ್ಮವಾಗಿದೆ.

ಅವಘಡ ನಡೆದ ಸ್ಥಳದಲ್ಲಿ ಮತ್ತಷ್ಟು ಹುಲ್ಲಿನ ಬಣವೆಗಳಿದ್ದು ಅಲ್ಲಿಗೂ ಬೆಂಕಿ ಹತ್ತಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು ಈ ಸಂಧರ್ಭದಲ್ಲಿ ಸ್ಥಳೀಯರೆಲ್ಲಾ ಸೇರಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ.

ಮೆಸ್ಕಾಂ ಇಲಾಖೆಯರು ತಕ್ಷಣ ಸ್ಪಂದಿಸಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ ಕಾರಣ ದೊಡ್ಡ ಅನಾಹುತವನ್ನು ತಪ್ಪಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.