Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

395 ಕೋಟಿ ರೂ. ವೆಚ್ಚದಲ್ಲಿ ಚಕ್ರಾ ಡ್ಯಾಂ ನಿಂದ ಸೂಡೂರುವರೆಗೆ ಶಾಶ್ವತ ಕುಡಿಯುವ ನೀರು ಹರಿಸುವ ಬಗ್ಗೆ ಚಿಂತನೆ : ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ : ಚಕ್ರಾ ಡ್ಯಾಂ ನಿಂದ ಸೂಡೂರು ಗ್ರಾಮದವರೆಗೂ ಬರುವ ಅನೇಕ ಹಳ್ಳಿಗಳಿಗೆ ಕುಡಿಯುವ ನೀರು ಹರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಅವರು ಕೆರೆಹಳ್ಳಿ ಹೋಬಳಿಯಲ್ಲಿ ಮಳೆಹಾನಿ ವೀಕ್ಷಿಸಿ ನಂತರ ಮಾದ್ಯಮದವರೊಂದಿಗೆ ಮಾತನಾಡಿ ಈಗಾಗಲೇ ಸಾಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶರಾವತಿ ನದಿಯಿಂದ ಮತ್ತು ಅಂಬ್ಲಿಗೊಳ ಡ್ಯಾಂ ನಿಂದ ನೂರಾರು ಹಳ್ಳಿಗಳ ರೈತ ನಾಗರೀಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ…

Read More

ಶಿವಮೊಗ್ಗದಲ್ಲಿ ನಾಳೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ

ಶಿವಮೊಗ್ಗ ನಗರದಲ್ಲಿ ನಾಳೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ನಡೆಯಲಿದೆ. ಹೀಗಾಗಿ ನಗರದ್ಯಾಂತ ಗಣಪತಿ ಮರೆವಣಿಗೆ ನಡೆಯುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಇನ್ನು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಗಾಂಧಿ ಬಜಾರ್‌ ರಸ್ತೆ ಸಂಪೂರ್ಣ ಕೇಸರಿ ಮಯವಾಗಿದೆ. ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆಪ್ಟೆಂಬರ್ 09 ರಂದು ಮೆರವಣಿಗೆ ಮೂಲಕ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಿದ್ದು ಸಾರ್ವಜನಿಕ ಹಿತದೃಷ್ಟಿ ಹಾಗೂ ವಾಹನಗಳ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೆಳಕಂಡಂತೆ…

Read More

ದಿ|| ಕೂರಂಬಳ್ಳಿ ಯಲ್ಲನಾಯ್ಕ ರವರ ಧರ್ಮಪತ್ನಿ ಕಗಚಿ ಸಿದ್ದಮ್ಮ ನಿಧನ

ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ದಿವಂಗತ ಕೂರಂಬಳ್ಳಿ ಯಲ್ಲನಾಯ್ಕ ರವರ ಧರ್ಮಪತ್ನಿ ಕಗಚಿ ಸಿದ್ದಮ(95) ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಬುಧವಾರ ಸಂಜೆ ಕಗಚಿ ಗ್ರಾಮದ ತಮ್ಮ ಸ್ವಗೃಹದಲ್ಲೇ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರಾದ ಬೋರಪ್ಪನಾಯ್ಕ ಮತ್ತು ಯೋಗೇಂದ್ರ ಕೆ ವೈ ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು(ಗುರುವಾರ) ಕಗಚಿ ಗ್ರಾಮದಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

Read More

ಬಿಜೆಪಿ ಪಕ್ಷದ ದೃಷ್ಟಿಯಲ್ಲಿ ದಲಿತರು ಹಿಂದೂಗಳಲ್ಲವೇ : ಕಿಮ್ಮನೆ ರತ್ನಾಕರ್ ಪ್ರಶ್ನೆ

ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯದವರ ಜೊತೆ ಒಟ್ಟಾಗಿ ಹೋಗುತ್ತೇವೆ ಎಂದು ಹೇಳುವ ಕಾರಣಕ್ಕೆ ಜನ ನಂಬದೆ ಇರಬಹುದು ಆದರೆ ಬಿಜೆಪಿ ಪಕ್ಷ ನಮಗೆ ಆ ಸಮುದಾಯದ ಮತವೇ ಬೇಡ ಎಂದು ಹೇಳುತ್ತಾರೆ ಇದರಿಂದಾಗಿ ಕೋಮು ಗಲಭೆ ಹೆಚ್ಚುವುದಿಲ್ಲವೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಹೋರಾಟ ಮಾಡುತ್ತಾರೆ ಈದ್ಗಾ ಮೈದಾನದಲ್ಲಿ ಗಣಪತಿ ವಿಚಾರಕ್ಕೆ ಹೋರಾಟ ಮಾಡ್ತಾರೆ ಅದರ ಅವಶ್ಯಕತೆ…

Read More

ಸೆ.11,12ಕ್ಕೆ ಕೋಣಂದೂರಿನ ಬೃಹನ್ಮಠದ ಸಮುದಾಯ ಭವನ ಲೋಕಾರ್ಪಣೆ ಮತ್ತು ಗುರುವಂದನಾ ಕಾರ್ಯಕ್ರಮ

ರಿಪ್ಪನ್‌ಪೇಟೆ;-ಕೋಣಂದೂರು ಬೃಹನ್ಮಠದಲ್ಲಿ ಸುಮಾರು 3 ಕೋಟಿ ರೂ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಶ್ರೀಶಿವಲಿಂಗೇಶ್ವರ ಸಮುದಾಯ ಭವನ ಲೋಕಾರ್ಪಣಿ ಮತ್ತು ಶ್ರೀಶೈಲ ಜಗದ್ಗುರುಗಳ ಪಟ್ಟಾಧಿಕಾರದ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಸನ್ನಿಧಿಯವರ ಐವತ್ತನೇ ವರ್ಷದ ಅಂಗವಾಗಿ ತುಲಾಭಾರ ಮಹೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೆಪ್ಟೆಂಬರ್ ೧೧ ಮತ್ತು ೧೨ ರಂದು ಅಯೋಜಿಸಲಾಗಿದೆ ಎಂದು ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ  ಹೇಳಿದರು. ರಿಪ್ಪನ್‌ಪೇಟೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೆ.11 ರಂದು ಸಂಜೆ ಶ್ರೀಶಿವಲಿಂಗೇಶ್ವರ…

Read More

ಹೆಂಡತಿಯ ಕುತ್ತಿಗೆ ಕೊಯ್ದು ಬರ್ಬರವಾಗಿ ಸಾಯಿಸಿದ ಪತಿರಾಯ :

ಗಂಡ ಹೆಂಡತಿಯ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗದ ಪ್ರಿಯಾಂಕ ಲೇಔಟ್ ನಲ್ಲಿ ನಡೆದಿದೆ.  ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಿಯಾಂಕಾ ಲೇಜೌಟ್ ನಲ್ಲಿ ದಿನೇಶ ಮತ್ತು ಮಂಜುಳಾ ನಡುವೆ ಗಲಾಟೆಯಾಗಿದ್ದು, ಈ ಗಲಾಟೆಯೇ ಕೊಲೆಗೆ ಕಾರಣ ಎಂದು ದಿನೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಮೆಸ್ಕಾಂ ಉದ್ಯೋಗಿಯಾಗಿರುವ ದಿನೇಶ್ ತನ್ನ ಪತ್ನಿ ಮಂಜುಳಾ (30) ರವರನ್ನು ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾನೆ ನಂತರ…

Read More

ಹೃದಯಾಘಾತದಿಂದ ಆಹಾರ ಸಚಿವ ಉಮೇಶ್ ಕತ್ತಿ ನಿಧನ :

ಆಹಾರ ಸಚಿವ ಉಮೇಶ್ ಕತ್ತಿ (61) ಅವರು ಹೃದಯಾಘಾತದಿಂದ ಇಂದು ( ಮಂಗಳವಾರ) ರಾತ್ರಿ ನಿಧನರಾದರು. ಈ ಬಗ್ಗೆ ಎಲ್ಲ ಟಿವಿ ಮಾಧ್ಯಮಗಳು ವರದಿ ಮಾಡಿದ್ದು, ಈ ವರೆಗೆ ಆಸ್ಪತ್ರೆಯಿದ ಅಧಿಕೃತ ಘೋಷಣೆಯಾಗಿಲ್ಲ.   ನಗರದ  ಡಾಲರ್ಸ್‌ ಕಾಲೋನಿ ನಿವಾಸದಲ್ಲಿದ್ದಾಗ ಅವರಿಗೆ ರಾತ್ರಿ 10 ಗಂಟೆ ಸುಮಾರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕುಟುಂಬದ ಸದಸ್ಯರು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದರು.  ಸದ್ಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ ಕ್ಷೇತ್ರದ ಶಾಸಕರಾಗಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ…

Read More

ಹಡ್ಲುಬೈಲು ಮನೆ ತೆರವು ಪ್ರಕರಣ : ಅಧಿಕಾರಿಗಳ ದುಂಡಾವರ್ತನೆ ನಡೆಗೆ – ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ಪಾದಯಾತ್ರೆ

ರಿಪ್ಪನ್ ಪೇಟೆ ; ಹೊಸನಗರ ತಾಲೂಕಿನ ಹುಂಚ ಹೋಬಳಿಯ ಹಡ್ಲುಬೈಲಿನ ಜೀವನ್ ಎಂಬವರ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ದುಂಡಾವರ್ತನೆಯನ್ನು ಖಂಡಿಸಿ ಮಂಗಳವಾರ ಕೆಪಿಸಿಸಿ ವಕ್ತಾರ ಹಾಗೂ  ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ತಮ್ಮ ನೂರಾರು  ಬೆಂಬಲಿಗರೊಂದಿಗೆ ಮನೆ  ನೆಲಸಮಗೊಂಡ ಜಾಗದಿಂದ  ಹೊಂಬುಜ ನಾಡ ಕಚೇರಿಯವರೆಗೆ ಸುಮಾರು 7ಕಿಲೋ ಮೀಟರ್ (ನಡಿಗೆ ) ಪಾದಯಾತ್ರೆ ನಡೆಸಿದರು.    ತದ ನಂತರ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು  ರಾಜ್ಯ ಸರ್ಕಾರ ನಿವೇಶನ…

Read More

ಭಾರೀ ಮಳೆ : ಮನೆ ಗೋಡೆ ಕುಸಿದು ವೃದ್ಧೆ ಸಾವು

ಮನೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಹೊರವಲಯದ ಮಲವಗೊಪ್ಪ ಬಳಿಯ ಇಂದಿರಾ ಕಾಲೋನಿಯಲ್ಲಿ ನಡೆದಿದೆ.  ಇಂದಿರಾ ಕಾಲೋನಿ ನಿವಾಸಿ ಗೌರಮ್ಮ ಮೃತ ದುರ್ದೈವಿಯಾಗಿದ್ದಾರೆ. ನಿರಂತರ ಮಳೆಯಿಂದಾಗಿ ಗೌರಮ್ಮ ಅವರ ಮನೆ ಗೋಡೆಗಳು ತೇವಗೊಂಡಿದ್ದು, ನಿನ್ನೆ ತಡರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಗೌರಮ್ಮ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಗೌರಮ್ಮ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಹಾಗೂ ಪಾಲಿಕೆ ಸದಸ್ಯ ಆರ್.ಸಿ ನಾಯ್ಕ್ ಭೇಟಿ…

Read More

ಹಾದಿಗಲ್ಲು ಬಳಿ ರಸ್ತೆ ಅಪಘಾತ – ಮಾನವೀಯತೆ ಮೆರೆದ ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ತಾಲೂಕಿನ ಹಾದಿಗಲ್ಲು ಬಳಿ ಅಪಘಾತವೊಂದು ಸಂಭವಿಸಿದ್ದು ಇದೆ ಮಾರ್ಗದಲ್ಲಿ ಬರುತ್ತಿದ್ದ ಗೃಹಸಚಿವ ಆರಗ ಜ್ಞಾನೇಂದ್ರರವರು ಮಾನವೀಯತೆ ಮೆರೆದ ಘಟನೆ ಭಾನುವಾರ ರಾತ್ರಿ ನೆಡೆದಿದೆ. ಹಾದಿಗಲ್ಲಿನ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕರೆಂಟ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿತ್ತು. ಅದೇ ಮಾರ್ಗದಲ್ಲಿ ಬಂದ ಗೃಹಸಚಿವರು ಈ ಸನ್ನಿವೇಶ ನೋಡಿದ ಕೂಡಲೇ ಗಾಡಿಯಿಂದ ಇಳಿದು ಅಪಘಾತಕ್ಕೀಡಾದ ಕಾರಿನ ಮೇಲೆ ಕರೆಂಟ್ ವೈರ್ ಬಿದ್ದಿರುವುದನ್ನ ಗಮನಿಸಿ ಮೊದಲು ಕಾರಿನಲ್ಲಿದ್ದವರನ್ನು ಹೊರಗಡೆ ಕರೆ ತರುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದರು.  ನಂತರ…

Read More