ಸಾವಿರಾರು ಗರ್ಭಿಣಿಯರ ಪಾಲಿನ ಮಹಾದೇವತೆ ರಿಪ್ಪನ್‌ಪೇಟೆಯ ಸೂಲಗಿತ್ತಿ ಜಯಮ್ಮ- ಸಾವಿರಾರು ಹೆರಿಗೆ ಮಾಡಿಸಿರುವ ಗಟ್ಟಿಗಿತ್ತಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯಿಂದ ಸನ್ಮಾನ|Ripponpet
ರಿಪ್ಪನ್‌ಪೇಟೆ : ಅದೆಷ್ಟೋ ಜನರ ಪಾಲಿಗೆ ಆಕೆ ಮಹಾತಾಯಿ. ಸಾವಿರಾರು ಪುಟ್ಟ ಕಂದಮ್ಮಗಳಿಗೆ ಕೈಯೊಡ್ಡಿದ ಮಹಾಮಾತೆ. ಹೌದು ಅವರೇ ನಮ್ಮ ರಿಪ್ಪನ್‌ಪೇಟೆ ಪಟ್ಟಣದ ಹೆಮ್ಮೆಯ ಸೂಲಗಿತ್ತಿ ಜಯಲಕ್ಷ್ಮಿ. ಆಪತ್ಕಾಲದಲ್ಲಿ ಗರ್ಭಿಣಿ ಮಹಿಳೆಯರ ಸಹಾಯಕ್ಕೆ ಬರುವ ಈ ಸೂಲಗಿತ್ತಿಯ ಹೆಸರು ಜಯಲಕ್ಷ್ಮಿ,ಇವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೂಲಗಿತ್ತಿ ಜಯಮ್ಮ ಅಂತಾನೇ ಫೇಮಸ್. ಸರಿಯಾಗಿ ವಿದ್ಯುತ್, ರಸ್ತೆ, ಆಸ್ಪತ್ರೆ ಇಲ್ಲದ ಕಾಲದಲ್ಲಿ ಕಾಡು-ಮೇಡು ದಾಟಿ ಪ್ರಸವ ವೇದನೆ ನಿವಾರಿಸುತ್ತಿದ್ದ ಗಟ್ಟಿಗಿತ್ತಿ. ಜಯಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಹೊಸನಗರ…