Headlines

ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಬೈಕ್ – ಯುವಕ ಸ್ಥಳದಲ್ಲಿಯೇ ಸಾವು|accident


ಶಿವಮೊಗ್ಗ :  ಕುಂಚೇನಹಳ್ಳಿ ಕೆರೆಯ ಬಳಿಯ ಹಳ್ಳಕ್ಕೆ ಬಿದ್ದ ಬೈಕ್ ಸವಾರನೊಬ್ಬ ಸಾವು ಕಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ.

ಸಂತೆಕಡೂರಿನ ನಿವಾಸಿಗಳಾದ ನಾಗೇಶ್ ಮತ್ತು ದರ್ಶನ್ ಎಂಬುವರು ಕುಂಚೇನಹಳ್ಳಿ ತಾಂಡದಲ್ಲಿ ಸ್ನೇಹಿತನ ಮನೆಯಲ್ಲಿ ಊಟ ಮುಗಿಸಿಕೊಂಡು ವಾಪಾಸ್ ಶಿವಮೊಗ್ಗಕ್ಕೆ ಹಿಂದಿರುಗುವಾಗ ನಿಯಂತ್ರಣ ತಪ್ಪಿ ಬೈಕ್ ಹಳ್ಳಕ್ಕೆ ಬಿದ್ದಿದೆ.



ಈ ಅಪಘಾತದಲ್ಲಿ ನಾಗೇಶ್ ಬೆನ್ನಿಗೆ ಬಲವಾದ ಪೆಟ್ಟುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸಹ ಸವಾರ ದರ್ಶನ್ ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಾಗೇಶ್ ಗಾರೆ ಕೆಲಸಕ್ಕೆ ಹೋಗುತ್ತಿದ್ದನು. ನಿನ್ನೆ ಸ್ನೇಹಿತನ ಮನೆಗೆ ಹೋಗಿ ಬರುವ ವೇಳೆ ಅವಘಡ ಸಂಭವಿಸಿದೆ. 



ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

About The Author

Leave a Reply

Your email address will not be published. Required fields are marked *