w
Headlines
Home » ನವ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಸಾವು|crime news

ನವ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಸಾವು|crime news


ಶಿವಮೊಗ್ಗ : ಇಲ್ಲಿನ ಮಿಳಘಟ್ಟದ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.



ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮಳಘಟ್ಟದ ಸಂಗೀತ (21) ಮೃತ ಮಹಿಳೆ. ಇವರು ಎರಡು ವರ್ಷಗಳ ಹಿಂದಷ್ಟೇ ಮಿಳಘಟ್ಟದ ನಿವಾಸಿ ಗುರೂಮೂರ್ತಿ ವಿವಾಹವಾಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ, ಪ್ರಕರಣ ದಾಖಲು ಮಾಡಿಕೊಂಡಿದ್ದು, ಕುಟುಂಬದವರ ವಿಚಾರಣೆ ಕೈಗೊಂಡಿದ್ದಾರೆ. 

ಆಕೆಯ ಸಾವಿಗೆ ಸ್ಪಷ್ಟವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೂ ಮಾಹಿತಿಯ ಪ್ರಕಾರ ಪತಿಯ ಸಹೋದರಿಗೆ ಇತ್ತೀಚೆಗೆ ಮದುವೆಯಾಗಿದ್ದು ಆಕೆ ಗರ್ಭಿಣಿಯಾಗಿದ್ದಳು. ಮದುವೆಯಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿ ಕಳೆದಿದ್ದರು ತಾನಗೆ ಮಕ್ಕಳಾಗಿರಲಿಲ್ಲ ಎಂಬ ಕೊರಗು ಇತ್ತು. ಈ ಕೊರಗೇ ಕೊರಳಿಗೆ ಉರುಳು ಹಾಕಿಕೊಳ್ಳಲು ಕಾರಣವೆಂಬ ಮಾತು ಕೇಳಿ ಬಂದಿದೆ.

ಆತುರದ ಅಂತ್ಯಕ್ರಿಯೆಗೆ ತಾಯಿಯ ಆಕ್ಷೇಪ:


ಮಗಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ತಾಯಿಗೆ ತಾಳಲಾರದ ಸಂಕಟವಾಗಿದೆ. ಈ ಸಂಕಟದಲ್ಲಿರುವಾಗಲೇ ಮಗಳು ಸಂಗೀತಾಳ ಅಂತ್ಯಕ್ರಿಯೆ ನಡೆಸಲು ಶಿವಮೊಗ್ಗದ ಸ್ಮಶಾನದಲ್ಲಿ ಅಳಿಯ ಗುರುಮೂರ್ತಿಯವರು ಗುಂಡಿ ತೋಡಿ ಬಂದಿದ್ದರು.



ಇದು ತಾಯಿ ರಾಧಮ್ಮಳಿಗೆ ಸಿಟ್ಟು ಬರಸಿದೆ. ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಗುರಮೂರ್ತಿ ಮನೆ ಕಡೆಯವರಿಗೆ ಬೈದಿದ್ದಾಳೆ.

 ಶಿವಮೊಗ್ಗದಿಂದ 10 ಕಿಮಿ ದೂರವಷ್ಟೆ ಹೊಸಕೊಪ್ಪಕ್ಕೆ ಮಗಳ ಶವ ತೆಗೆದುಕೊಂಡು ಹೋಗಿ  ಅಂತ್ಯಸಂಸ್ಕಾರ ನಡೆಸುತ್ತೇನೆ ಎಂಬುದು ಅವರ ದೂರಾಗಿತ್ತು.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.