Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ಕಳಪೆ ಕಾಮಗಾರಿಗೆ ಆರಗ ಜ್ಞಾನೇಂದ್ರ ಉಗ್ರಾವತಾರ – ಬೆಚ್ಚಿ ಬಿದ್ದ ಅಧಿಕಾರಿಗಳು|ಪರ್ಸೆಂಟೇಜ್ ತಿಂದು ನಮಗೆ ಕೆಟ್ಟ ಹೆಸರು ತರ್ತೀರಾ!!|araga

ತೀರ್ಥಹಳ್ಳಿ : ಶಾಸಕರು, ಸಚಿವರು ಸರ್ಕಾರದ ಮಟ್ಟದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲು ಹಣ ಮಂಜುರಾತಿ ಮಾಡಿಸಿಕೊಂಡು ಬರುತ್ತಾರೆ. ಆದರೆ, ಆ ಅನುದಾನದಲ್ಲಿ ಸಮರ್ಪಕವಾಗಿ ಕೆಲಸ ಮಾಡದಿದ್ದರೇ ಯಾರಿಗಾದರೂ ಸಿಟ್ಟು ಬಂದೆ ಬರುತ್ತದೆ.ತೀರ್ಥಹಳ್ಳಿ ಆರಗ ಜ್ಞಾನೇಂದ್ರರವರು ಸಹ ಇದೇ ಕಾರಣಕ್ಕೆ ಸಿಟ್ಟುಮಾಡಿಕೊಂಡ ಘಟನೆ ನಡೆದಿದೆ. ತೀರ್ಥಹಳ್ಳಿಯ ಬಾಳೆ ಕೂಡ್ಲು, ಗುಡ್ಡೆಪಾಲ್ ರಸ್ತೆ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು,ಅಲ್ಲದೆ ಇದೇ ವಿಚಾರವನ್ನು ಸಚಿವ ಆರಗ ಜ್ಞಾನೇಂದ್ರರವರ ಗಮನಕ್ಕೆ ತಂದಿದ್ದರು. ಹೀಗಾಗಿ ಗುಣಮಟ್ಟವನ್ನ ಖುದ್ದು ವೀಕ್ಷಿಸುವ ಸಲುವಾಗಿ ಸಚಿವರು ಸ್ಥಳಕ್ಕೆ ದೌಡಾಯಿಸಿದ್ಧಾರೆ. …

Read Full News

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಅಮಾನತ್ತಿನಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಹತ್ಯೆ – ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆ|murder

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದ ಸಮೀಪವಿರುವ ಮಾರ್ಕೆಟ್ ಬಳಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸಿದ್ದ ಪೂರ್ಣೇಶ್​ ಎಂದು ಗುರುತಿಸಲಾಗಿದೆ.   ಮದ್ಯವ್ಯಸನಿಯಾಗಿದ್ದ ಪೂರ್ಣೇಶ್​, ಇದೇ ಕಾರಣಕ್ಕೆ ಪೊಲೀಸ್ ಕೆಲಸದಿಂದ ವಜಾಗೊಂಡಿದ್ದ ಎನ್ನಲಾಗಿದೆ.  ತೀರ್ಥಹಳ್ಳಿಯ ಮೀನು ಮಾರುಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಮೃತನನ್ನು ಪೂರ್ಣೇಶ್ ಎಂದು ಗುರುತಿಸಲಾಗಿದೆ….

Read Full News

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ – ಜಿಲ್ಲೆಯ 3 ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟ | ಬೇಳೂರು ಸ್ಪರ್ಧೆಗೆ ಗ್ರೀನ್ ಸಿಗ್ನಲ್

 ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 124  ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ನಿರೀಕ್ಷೆಯಂತೆ ಸೊರಬ ವಿಧಾನಸಭೆ ಕ್ಷೇತ್ರದಿಂದ ಮಧು ಬಂಗಾರಪ್ಪ, ಭದ್ರಾವತಿಯಿಂದ ಬಿ.ಕೆ.ಸಂಗಮೇಶ್ವರ, ಸಾಗರದಿಂದ ಬೇಳೂರು ಗೋಪಾಲಕೃಷ್ಣ ಅವರ ಹೆಸರನ್ನು ಪ್ರಕಟಿಸಲಾಗಿದೆ. ಮೂರು ಕ್ಷೇತ್ರದ ಅಭ್ಯರ್ಥಿಗಳನ್ನು ಪ್ರಕಟಿಸಿರುವುದು ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ. ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ರವರಿಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು…

Read Full News

ರಿಪ್ಪನ್‌ಪೇಟೆ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕೊಟ್ಟಿಗೆ ಸುಟ್ಟು ಭಸ್ಮ – ಅಪಾರ ಹಾನಿ|fire

ಹೊಸನಗರ ತಾಲೂಕಿನ ಬಾಳೂರು ಗ್ರಾಪಂ ವ್ಯಾಪ್ತಿಯ ಮಾದಾರದಿಂಬದಲ್ಲಿ ಗುರುವಾರ ಮಧ್ಯರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿ ಕೊಟ್ಟಿಗೆ ಮನೆಯೊಂದು ಸಂಪೂರ್ಣ ಭಸ್ಮಗೊಂಡು ಅದರಲ್ಲಿದ್ದ ಮರ-ಮುಟ್ಟು ಕೃಷಿ ಉಪಕರಣ ಸೇರಿದಂತೆ ಸಾವಿರಾರು ರೂ ನಷ್ಟ ಉಂಟಾಗಿದೆ. ಮಾದಾರದಿಂಬ ಗ್ರಾಮದ ಕೃಷಿಕ ಷಣ್ಮುಖಪ್ಪ ಗೌಡರ ಕೊಟ್ಟಿಗೆ ಮನೆಯಲ್ಲಿ ಮದ್ಯರಾತ್ರಿ ಬೆಂಕಿ ಕಾಣಿಸಿ ಕೊಂಡಿದೆ. ಬಳಿಕ ಕೆಲವೇ ಕ್ಷಣಗಳಲ್ಲಿ ಬೆಂಕಿ ಕೆನ್ನಾಲಿಗೆ ಕೊಟ್ಟಿಗೆ ತುಂಬಾ ಆವರಿಸಿದೆ.ತಕ್ಷಣ ಕೊಟ್ಟಿಗೆಯಲ್ಲಿದ್ದ ದನಗಳನ್ನು ಹೊರತರಲಾಯಿತು ಆದರೂ ಕೆಲವು ದನಗಳಿಗೆ ಸುಟ್ಟ ಗಾಯಗಳಾಗಿವೆ….

Read Full News

ರಿಪ್ಪನ್‌ಪೇಟೆ : ಮದ್ಯದೊಂದಿಗೆ ಸೈನೆಡ್ ಸೇವಿಸಿ ಅಕ್ಕಸಾಲಿಗ ಸಾವು|Crime news

ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಚಿನ್ನದ ಕೆಲಸ ಮಾಡುವ ವ್ಯಕ್ತಿಯೊಬ್ಬ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗರ್ತಿಕೆರೆ ಗ್ರಾಮದ ಗುರುಮೂರ್ತಿ ಬಿ ಟಿ (43) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಗರ್ತಿಕೆರೆ ಮೂಲದ ಗುರುಮೂರ್ತಿ ತನ್ನ ಕುಟುಂಬದೊಂದಿಗೆ ಬೆಳಗಾವಿಯಲ್ಲಿ ಚಿನ್ನದ ಕೆಲಸ ಮಾಡಿಕೊಂಡು ವಾಸವಿದ್ದು,ಕಳೆದ 04 ದಿನದ ಹಿಂದೆ ಗುರುಮೂರ್ತಿ ಮನೆ ಬಿಟ್ಟು ಗರ್ತಿಕೆರೆಗೆ ಬಂದಿದ್ದನು ಈ ಬಗ್ಗೆ ಬೆಳಗಾವಿ ಶಹಾಪೂರ ಪೊಲೀಸ್ ಠಾಣೆಯಲ್ಲಿ ಅವರ ಪತ್ನಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದರು. ಗುರುಮೂರ್ತಿ…

Read Full News

ವಸ್ತುನಿಷ್ಠ ವರದಿಗೆ ಅಡ್ಡಿ, ಪತ್ರಕರ್ತರ ಸ್ವಾತಂತ್ರ್ಯ ಹರಣಕ್ಕೆ ಯತ್ನ – ಶಾಸಕ ಹರತಾಳು ಹಾಲಪ್ಪ ವಿರುದ್ದ ದೂರು|halappa

ಸಾಗರದಲ್ಲಿ  ವರದಿಯೊಂದಕ್ಕೆ ಸಂಬಂಧಿಸಿದಂತೆ ಶಾಸಕರು ಪತ್ರಕರ್ತರೊಬ್ಬರ ಜೊತೆ ನಡೆಸಿದ ಸಂಭಾಷಣೆ, ಅವಮಾನ, ಧಮ್ಕಿ ಹಾಕಿದಂತೆ ಇದ್ದು, ನಿರ್ಭಯವಾಗಿ ವರದಿ ಮಾಡಲು  ಪತ್ರಕರ್ತರಿಗೆ ಸೂಕ್ತ ರಕ್ಷಣೆ ಮತ್ತು ವಾತಾವರಣ ನಿರ್ಮಿಸಬೇಕೆ ಆಗ್ರಹಿಸಿ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘ ಇಂದು ಸಾಗರ ಶಾಖೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಕಾರ್ಯ ನಿರತ ಪತ್ರಕರ್ತರ ಸಂಘ ಇಂದು ಸಾಗರದ ಉಪ ವಿಭಾಗಧಿಕಾರಿಗಳ ಕಛೇರಿ ಎದುರು ಮೌನ ಪ್ರತಿಭಟನೆ ನೆಡೆಸಿ ಮನವಿ ಸಲ್ಲಿಸಲಾಯಿತು. ನಂತರ ಶಾಸಕ ಹರತಾಳು…

Read Full News

ಪೊಲೀಸ್ ಇಲಾಖೆಯ ಭರ್ಜರಿ ಬೇಟೆ – 50 ಲಕ್ಷ ಮೌಲ್ಯದ ಬಟ್ಟೆ,ಕುಕ್ಕರ್,ಸೀರೆ ,ಅಕ್ಕಿ ಸೀಜ್

ಕರ್ನಾಟಕ ರಾಜ್ಯ ವಿಧಾನಸಭಾ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಕೂಡ ಅಲರ್ಟ್ ಆಗಿದ್ದು, ಅಕ್ರಮ ವಸ್ತು ಸಾಗಾಟ ಹಾಗೂ ಹಣ ಸರಭರಾಜಿನ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಹಲವೆಡೆ ನಾಖಾಬಂಧಿ ಹಾಕಲಾಗಿದೆ. ಅಲ್ಲದೆ, 50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯ ವಸ್ತುಗಳನ್ನು ವಶಕ್ಕೆ ಪಡೆದಿದೆ.  ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿರುವ ಪೊಲೀಸ್​ ಇಲಾಖೆ  ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು, ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಈ ಕೆಳಕಂಡ…

Read Full News

ತೀರ್ಥಹಳ್ಳಿ : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಮತ್ತೊಂದು ಕಾರು ಡಿಕ್ಕಿ|accident

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಸಮೀಪದಲ್ಲಿ ಅಪಘಾತವೊಂದು ಸಂಭವಿಸಿ ಎರಡು ಕಾರು ನಜ್ಜುಗುಜ್ಜಾದ ಘಟನೆ ನಡೆದಿದೆ. ಮಾಳೂರು ಕ್ರಾಸ್ ಬಳಿ ಬರುವ ಮಟನ್ ಶಾಪ್​ನ ಎದುರು ಈ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಕಾರೊಂದು , ನಿಲ್ಲಿಸಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಇನ್ನೂ ಅದೃಷ್ಟವಶಾತ್ ನಿಂತಿದ್ದ ಕಾರುಗಳಲ್ಲಿ ಯಾರು ಕುಳಿತಿರಲಿಲ್ಲ . ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ.  ಇನ್ನೂ ಸ್ಥಳಕ್ಕೆ ಮಾಳೂರು ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆದುತಿದ್ದಾರೆ.

Read Full News

ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು|thirthahalli news

ತೀರ್ಥಹಳ್ಳಿ : ಇಲ್ಲಿನ ಚಕ್ರತೀರ್ಥದಲ್ಲಿ ಕಿಡಿಗೇಡಿಗಳು ಹಸುವಿನ ಕತ್ತನ್ನು ಕಡಿದು ಬಳಿಕ ರುಂಡವನ್ನು ತುಂಗಾ ನದಿಗೆ ಎಸೆದು ಪರಾರಿ ಆಗಿರುವ ಘಟನೆ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲಿ ವಿಕೃತಿ ಮೆರೆದಿದ್ದು, ಸ್ಥಳೀಯರು ದುಷ್ಕೃತ್ಯಕ್ಕೆ ಕಿಡಿಕಾರಿದ್ದಾರೆ. ಸ್ಥಳೀಯರು ಸ್ನಾನ ಮಾಡಲು ಹೊಳೆಗೆ ಇಳಿದಾಗ ವಿಷಯ ಬೆಳಕಿಗೆ ಬಂದಿದ್ದು ತುಂಗಾನದಿಯಲ್ಲಿ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಚಕ್ರತೀರ್ಥದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ದನದ ರುಂಡವನ್ನು ಬಿಟ್ಟು ಮಾಂಸ ತೆಗೆದುಕೊಂಡು ಹೋಗಲಾಗಿದೆ.  ಇದು ತೀರ್ಥಹಳ್ಳಿ ಪೊಲೀಸರ ವೈಫಲ್ಯ…

Read Full News

“ಮೋದಿ ರಾಂಗ್ ನಂಬರ್”-“ಬಿಜೆಪಿ ರಾಂಗ್ ನಂಬರ್ ” : ವಿನೂತನ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿ ಸಂಘಟನೆ|modi-wrong-number

ಶಿವಮೊಗ್ಗ : ಬೆಲೆ ಏರಿಕೆ, ಭ್ರಷ್ಠಾಚಾರ, ಕಳಪೆ ಕಾಮಗಾರಿ, ಜಾತಿ ಧರ್ಮದ ನಡುವಿನ ವೈಷಮ್ಯ ಕುರಿತು ವಿದ್ಯಾರ್ಥಿ ಸಂಘಟನೆ ವಿನೂತನ ಪ್ರತಿಭಟನೆಗೆ ಮುಂದಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಈ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ. ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿ ಸಂಘಟನೆಯ ಸಂಸ್ಥಾಪಕರ ಅಧ್ಯಕ್ಷ ವಿನಯ್ ಕೆ ಸಿ ರಾಜವತ್ “ಮೋದಿ ರಾಂಗ್ ನಂಬರ್” “ಬಿಜೆಪಿ ರಾಂಗ್ ನಂಬರ್ ” ಎಂಬ ಘೋಷಣೆ ಅಡಿ ಮಾ.30 ರಂದು  ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಕೇಂದ್ರ…

Read Full News

ಶಿವಮೊಗ್ಗದಿಂದ ವಿಮಾನ ಹಾರಾಟ ಪ್ರಾರಂಭ|ಯಾವೆಲ್ಲಾ ಮಾರ್ಗ???ಎಷ್ಟಿದೆ ಟಿಕೆಟ್ ರೇಟ್..??? ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಈ ಸುದ್ದಿ ನೋಡಿ|airport

ಈ ತಿಂಗಳ ಅಂತ್ಯದಲ್ಲಿ ವಿಮಾನಯಾನ ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಮೊದಲಿಗೆ ಶಿವಮೊಗ್ಗ – ಬೆಂಗಳೂರು ನಡುವೆ ನಿತ್ಯ ವಿಮಾನ ಹಾರಾಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಆರು ಕೋಟಿ ರೂ. ವೆಚ್ಚದ ಮೂರು ಅಗ್ನಿಶಾಮಕ ವಾಹನಗಳು ಬರುವವರೆಗೆ ಕ್ಲಿಯರೆನ್ಸ್ ನೀಡುವುದಿಲ್ಲ ಎಂದು ವಿಮಾನಯಾನ ಸಚಿವಾಲಯ ಸೂಚನೆ ನೀಡಿತ್ತು. ಈಗ ಅದು ಕೂಡ ವಾರದೊಳಗೆ ಬರುತ್ತಿದ್ದು, ಈ ತಿಂಗಳ ಕೊನೆಯೊಳಗೆ ಅಧಿಕೃತವಾಗಿ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದರು. ಇಂಡಿಗೋ ವಿಮಾನಯಾನ ಕಂಪನಿಯೊಂದಿಗೆ…

Read Full News

ಬಸ್ ಹಾಗೂ ಬೊಲೆರೊ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿ – ಎರಡು ತುಂಡಾದ ಬೊಲೆರೊ ಪಿಕಪ್,ಮೂವರಿಗೆ ಗಾಯ|accident

ಖಾಸಗಿ ಬಸ್ ಹಾಗೂ ಬೊಲೆರೊ ಪಿಕಪ್ ನಡುವೆ ಮುಖಮುಖಿ ಡಿಕ್ಕಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಪ್ಪರಗುಂಡಿ ಸೇತುವೆ ಬಳಿ ನಡೆದಿದೆ. ಶರ್ಮಣ್ಯಾವತಿ ನರ್ಸರಿ ಹತ್ತಿರ ಶಿವಮೊಗ್ಗದಿಂದ ಕುಂದಾಪುರಕ್ಕೆ ಕಡೆಗೆ ಹೋಗುತಿದ್ದ ದುರ್ಗಾಂಬ ಬಸ್ಸು ಹಾಗೂ ಹೊಸನಗರದಿಂದ ರಿಪ್ಪನ್ ಪೇಟೆಗೆ ಹೊರಟ ಬೊಲೆರೋ ಪಿಕಪ್ ಗಾಡಿ ನಡುವೆ ಮುಖಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೊಲೆರೊ ಪಿಕಪ್ ವಾಹನ ಎರಡು ತುಂಡಾಗಿದೆ. ಬೊಲೆರೊ ಪಿಕಪ್ ನಲ್ಲಿದ್ದ ಮೂವರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿದ್ದು ಹೊಸನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗುತಿದ್ದು…

Read Full News

ಚಿಕ್ಕಜೇನಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ – ಹಳ್ಳಿಯ ಕಡೆ | ಅಕ್ರಮ ಮದ್ಯಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರ ಒತ್ತಾಯ|chikkajeni

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಜೇನಿ ಗ್ರಾಮದಲ್ಲಿ ಶನಿವಾರ ನಡೆದ ”ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಸಾರ್ವಜನಿಕ ಅಹವಾಲುಗಳ ಸ್ವೀಕಾರ  ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಬಾರದೇ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಜೇನಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಹೊಸನಗರ ತಹಶೀಲ್ದಾರ್ ಧರ್ಮಂತ ಗಂಗರಾಮ್ ಕೋರಿ ಉದ್ಘಾಟಿಸಿದರು. ನಂತರ ಸಾರ್ವಜನಿಕ ಅಹವಾಲು ಸ್ವೀಕರಿಸುತಿದ್ದ ಸಂಧರ್ಭದಲ್ಲಿ ಗ್ರಾಮಸ್ಥರು ನಮ್ಮೂರಿನಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ ಅದನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪ್ರಸ್ತಾಪಿಸಿ ಪರಿಹಾರ ಪಡೆಯುವ…

Read Full News

ರಂಜಾನ್ ಉಪವಾಸ ತಿಂಗಳ ಪ್ರಥಮ‌ ಚಂದ್ರ ದರ್ಶನ – ಗುರುವಾರದಿಂದ ಉಪವಾಸ ಆಚರಣೆ|Ramzan

ರಂಜಾನ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆ ನಾಳೆಯಿಂದ ಕೇರಳ ಮತ್ತು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಂಜಾನ್ ಉಪವಾಸ ಆರಂಭವಾಗಲಿದೆ. ಇಂದು ರಂಝಾನ್ ತಿಂಗಳ ಚಂದ್ರ ದರ್ಶನ ವಾಗಿರುವುದರಿಂದ ಮಾರ್ಚ್ 23 (ಗುರುವಾರ) ರಂದು ರಂಝಾನ್ ಉಪವಾಸ ವ್ರತ ಪ್ರಾರಂಭವಾಗುತ್ತದೆ, ಮುಸ್ಲಿಮರ ಪವಿತ್ರ ರಮಝಾನ್‌ ಉಪವಾಸ ತಿಂಗಳ ಪ್ರಥಮ ಚಂದ್ರದರ್ಶನವು ಇಂದು ಕೇರಳದ ಕಲ್ಲಿಕೋಟೆಯ ಕಾಪಾಡ್ ಎಂಬಲ್ಲಿ ಆಗಿದೆ. ಈ ಹಿನ್ನೆಲೆಯಲ್ಲಿ ಗುರುವಾರದಿಂದ ರಂಝಾನ್ ಉಪವಾಸ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪರವಾಗಿ…

Read Full News

ಅಗಲಿದ ಸೈನಿಕನಿಗೆ ವೀರ ನಮನ – ಸಾವಿರಾರು ಜನರಿಂದ ಅಂತಿಮ ದರ್ಶನ : ತವರಿನ ಮಣ್ಣಲ್ಲಿ ಲೀನವಾದ ಯೋಧ ಸಂದೀಪ್|tribute

ರಿಪ್ಪನ್‌ಪೇಟೆ : ಸಕಲ ಸರ್ಕಾರಿ ಗೌರವದೊಂದಿಗೆ ಅಗಲಿದ ಯೋಧ ಸಂದೀಪ್ ರವರ ಅಂತ್ಯಕ್ರಿಯೆ ಪಟ್ಟಣದ ಹಿಂದೂ ರುಧ್ರಭೂಮಿಯಲ್ಲಿ ಜರುಗಿತು. ಸಂದೀಪ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಶಾಸಕ ಹರತಾಳು ಹಾಲಪ್ಪ ,ಸಾಗರ ಉಪವಿಭಾಗಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಧರ್ಮಂತ ಗಂಗಾರಾಮ ಕೋರಿ,ಡಿವೈಸ್ಪಿ ಗಜಾನನ ವಾಮನ ಸುತಾರ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ವಿನಾಯಕ ವೃತ್ತದಲ್ಲಿ ಶಿವಮೊಗ್ಗ ಜಿಲಾ ಪೊಲೀಸ್ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು. ವಿನಾಯಕ…

Read Full News

ರಿಪ್ಪನ್‌ಪೇಟೆ – ಅಗಲಿದ ಯೋಧ ಸಂದೀಪ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಜನಸಾಗರ|Procession – body

ಅಸ್ಸಾಂ ರಾಜ್ಯದ ಮಣಿಪುರದಲ್ಲಿ ಮರಣವನ್ನಪ್ಪಿದ ರಿಪ್ಪನ್‌ಪೇಟೆಯ ಯೋಧ ಸಂದೀಪ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು. ಇಂದು ಮುಂಜಾನೆ 4 ಗಂಟೆಗೆ ಪಾರ್ಥಿವ ಶರೀರ ಶಬರೀಶನಗರದ ಸ್ವಗೃಹಕ್ಕೆ ಆಗಮಿಸಿದ್ದು,ಯೋಧ ಸಂದೀಪ್ ಅವರ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತು.ಅಲ್ಲಿ ಸೇರಿದ್ದ ಜನರ ಕಣ್ಣುಗಳು ಕೂಡ ತೇವಗೊಂಡವು. ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು….

Read Full News

ಡಿಕೆಶಿ ಭೇಟಿಯಾದ ಸಾಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು|ಬೇಳೂರಿಗೆ ಟಿಕೆಟ್ ಘೋಷಿಸುವಂತೆ ಒತ್ತಾಯ|congress

ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ಕಾವು ಹೆಚ್ಚುತಿದ್ದು ಎಲ್ಲಾ ಪಕ್ಷಗಳು 224 ಕ್ಷೇತ್ರದಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳ ಆಯ್ಕೆ ಮಾಡಿ ರಾಜ್ಯದ ಗದ್ದುಗೆ ಏರುವ ಉತ್ಸಾಹದಲ್ಲಿದೆ. ಇಂದು ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ 300 ಕ್ಕೂ ಹೆಚ್ಚು ಮುಖಂಡರು ಮತ್ತು ಕಾರ್ಯಕರ್ತರು ಬೆಂಗಳೂರಿಗೆ ದೌಡಾಯಿಸಿದ್ದು ಸಿದ್ದರಾಮಯ್ಯ ,ಪರಮೇಶ್ವರ್ ಮತ್ತು ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ರವರನ್ನು ಭೇಟಿಯಾಗಿ ಬೇಳೂರು ಗೋಪಾಲಕೃಷ್ಣ ರವರಿಗೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಕೈ ನಾಯಕರು ಕಾಂಗ್ರೆಸ್…

Read Full News

ನಾಳೆ(22-03-2023) ಬೆಳಿಗ್ಗೆ ರಿಪ್ಪನ್‌ಪೇಟೆಗೆ ಮೃತ ಯೋಧ ಸಂದೀಪ್ ಪಾರ್ಥೀವ ಶರೀರ – ವಿನಾಯಕ ವೃತ್ತದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಅಸ್ಸಾಂ ರಾಜ್ಯದ ಮಣಿಪುರದಲ್ಲಿ ಮರಣವನ್ನಪ್ಪಿದ ಯೋಧ ಸಂದೀಪ್ ಪಾರ್ಥೀವ ಶರೀರ ನಾಳೆ ಬೆಳಿಗ್ಗೆ 06 ಗಂಟೆಗೆ ರಿಪ್ಪನ್‌ಪೇಟೆಗೆ ಆಗಮಿಸಲಿದ್ದು ಈಗಾಗಲೇ ವಿಶೇಷ ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂದೀಪ್ ಪಾರ್ಥೀವ ಶರೀರ ತಲುಪಿದೆ. ಜಿಲ್ಲಾಡಳಿತದ ಆಂಬ್ಯುಲೆನ್ಸ್ ಮೂಲಕ ನಾಳೆ ಬೆಳಿಗ್ಗೆ 6 ಗಂಟೆಗೆ ನೇರವಾಗಿ ಶಬರೀಶನಗರದ ಸ್ವಗೃಹಕ್ಕೆ ಪಾರ್ಥೀವ ಶರೀರ ಆಗಮಿಸಲಿದ್ದು ಮನೆಯಲ್ಲಿ ವಿಧಿವಿಧಾ‌ನಗಳನ್ನು ನೆರವೇರಿಸಿ 8.30 ಕ್ಕೆ ಮೆರವಣಿಗೆಯ ಮೂಲಕ ತೆರಳಿ ವಿನಾಯಕ ವೃತ್ತದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ವಿನಾಯಕ…

Read Full News

ಮಾ.25ಕ್ಕೆ ಮತ್ತೊಮ್ಮೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಪ್ರಧಾನಿ‌ ಮೋದಿ!!! ಯಾಕೆ ಗೊತ್ತಾ..?? ಈ ಸುದ್ದಿ ನೋಡಿ

ಶಿವಮೊಗ್ಗ ನಗರದ ವಿಮಾನ ನಿಲ್ದಾಣಕ್ಕೆ ಮತ್ತೊಮ್ಮೆ ಬರಲಿದ್ದಾರೆ ಪ್ರಧಾನಿ ಮೋದಿ. ಇದರಿಂದ ನಗರಕ್ಕೆ ಅವರ ಭೇಟಿ ಸರಿಸುಮಾರು ಒಂದು ತಿಂಗಳ ಅವಧಿಯ ಒಳಗೆ ಎರಡು ಬಾರಿ ಭೇಟಿಯಾಗಲಿದೆ. ಚುನಾವಣಾ ಪ್ರಚಾರಕ್ಕಾಗಿ ಬರುತ್ತಿರುವ ಪ್ರಧಾನಿ ಮೋದಿ ಮಾ.25 ರಂದು ದಾವಣಗೆರೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ಮಾ.25 ರಂದು ಪ್ರಧಾನಿ ಮೋದಿ ದಾವಣಗೆರೆಗೆ ಆಗಮಿಸುತ್ತಿದ್ದು, ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೆಂಗಳೂರಿನಿಂದ ನೇರವಾಗಿ ದಾವಣಗೆರೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಲಿದ್ದಾರೆ. ದಾವಣಗೆರೆಯಲ್ಲಿ ಸಮಾರೋಪ…

Read Full News

ಸಾಗರದಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನ – ಮಾರಕಾಸ್ತ್ರಗಳ ಸಮೇತ ಆರೋಪಿಗಳ ಬಂಧನ|drugs

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಡ್ರಗ್ಸ್‌ ದಂಧೆ ಇದೀಗ ಮಲೆನಾಡಿಗೂ ವ್ಯಾಪಿಸಿದೆ. ಮಂಗಳೂರಿನಿಂದ ಮಾದಕ ದ್ರವ್ಯಗಳನ್ನು ತಂದು ಸಾಗರದಲ್ಲಿ ಮಾರಲು ಮಂದಾಗಿದ್ದ ತಂಡವೊಂದನ್ನು ಸಾಗರ ನಗರ ಠಾಣೆ ಪೊಲೀಸರು ಹತ್ತಿಕ್ಕಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಇದರ ಹಿಂದಿರುವ ಒಂದು ಕೊಲೆ ಯತ್ನದ ಪ್ಲ್ಯಾನ್‌ ಕೂಡಾ ಬಯಲಾಗಿದೆ. ಮಂಗಳೂರಿನಿಂದ ಮಾದಕ ವಸ್ತು ತಂದು ಸಾಗರದಲ್ಲಿ ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಾಗರದ ಅಣಲೆಕೊಪ್ಪ ಬಳಿ ಪೊಲೀಸರು ದಾಳಿ ಸಂಘಟಿಸಿದ್ದರು. ಈ ವೇಳೆ, ಸೃಜನ್ ಶೆಟ್ಟಿ, ತಿಲಕ್…

Read Full News

ಮಣಿಪುರದಲ್ಲಿ ಮಡಿದ ರಿಪ್ಪನ್‌ಪೇಟೆ ಯೋಧನಿಗೆ ಯುವ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ|Tribute

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ಬೆಳಗಿನಜಾವ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದಾಗ ಮರಣವನ್ನಪ್ಪಿದ ರಿಪ್ಪನ್‌ಪೇಟೆಯ ಯೋಧ ಸಂದೀಪ್ ರವರಿಗೆ ಶದ್ಧಾಂಜಲಿ ಅರ್ಪಿಸಲಾಯಿತು. ಅಸ್ಸಾಂನ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ರಿಪ್ಪನ್‌ಪೇಟೆಯ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಿರುವುದು ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಯುವ ಕಾಂಗ್ರೆಸ್ ಸಾಗರ ತಾಲೂಕು ಅಧ್ಯಕ್ಷ ಅಶೋಕ ಬೇಳೂರು ಹೇಳಿದರು. ಈ ಸಂಧರ್ಭದಲ್ಲಿ ರಾಷ್ಟೀಯ ಯುವ ಕಾಂಗ್ರೆಸ್ ನ…

Read Full News

ರಿಪ್ಪನ್ ಪೇಟೆ : ಮೃತ ಯೋಧ ಸಂದೀಪ್ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ – ಕುಟುಂಬಕ್ಕೆ ಸಾಂತ್ವನ|araga

ರಿಪ್ಪನ್ ಪೇಟೆಯ ಮೃತ ಯೋಧನ ಮನೆಗೆ ಗೃಹ ಸಚಿವ  ಆರಗ ಜ್ಞಾನೇಂದ್ರ ಭೇಟಿ – ಕುಟುಂಬಕ್ಕೆ ಸಾಂತ್ವನ  ರಿಪ್ಪನ್ ಪೇಟೆ :ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಯೋಧ ಸಂದೀಪ್ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಇಂದು ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ  ಯೋಧನ ಮನೆಗೆ ಗೃಹಸಚಿವ ಆರಗ  ಜ್ಞಾನೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ…

Read Full News

ಧಾರವಾಡದ ಪತ್ರಕರ್ತ ಮೆಹಬೂಬ್ ಮುನವಳ್ಳಿಯ ಬಂಧನ ಖಂಡನಾರ್ಹ – ಗಾರಾ ಶ್ರೀನಿವಾಸ್|munavalli

ಧಾರವಾಡದ ಪತ್ರಕರ್ತ ಮೆಹಬೂಬ್ ಮುನವಳ್ಳಿಯ ಬಂಧನ ಖಂಡನಾರ್ಹ – ಪತ್ರಕರ್ತ ಗಾರಾ ಶ್ರೀನಿವಾಸ್ ರಿಂದ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ  ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನ, ಹಾಗೂ ಮಾನವ ಹಕ್ಕುಗಳ ಕುರಿತಾಗಿ ಪೊಲೀಸ್ ವಲಯದಿಂದ ತಾತ್ವಿಕ ಸಲಹೆಗಳನ್ನು ಸ್ವೀಕರಿಸುವ ಹೊತ್ತು ಪತ್ರಿಕಾಂಗದ ಮುಂದಡಿ ಇದಿಯಾ..? ಎನ್ನುವ ಪ್ರಶ್ನೆಯೊಂದು ಇತ್ತೀಚಿನ ಒಂದಿಷ್ಟು ಪ್ರಕರಣಗಳಲ್ಲಿ ಕಂಡು ಬಂದಿದೆ. ೧೫-೦೩-೨೦೨೩ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಚೀಲೂರು ಬಳಿಯಿರುವ ಗೋವಿನಕೋವಿ ಬಳಿ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆಯ ಪ್ರತಿಕಾರವಾಗಿ ರೌಡಿ ಶೀಟರ್‌ಗಳಾದ…

Read Full News

ಪುನೀತ್ ನೆನಪಿನೋತ್ಸವ ಎಂಬ ನೆನಪಿನ ಕಾರ್ಯಕ್ರಮ|kuppalli

ಪುನೀತ್ ನೆನಪಿನೋತ್ಸವ ಎಂಬ ನೆನಪಿನ ಕಾರ್ಯಕ್ರಮ! – 30 ಮಂದಿ ನೇತ್ರದಾನ: ಕಲೆ, ಕಲಾವಿದರ ಸಮಾಗಮ – 35 ಮಂದಿಗೂ ಹೆಚ್ಚು ಸಾಧಕರು, ಸೇವಕರಿಗೆ ಸನ್ಮಾನ – ಕುಪ್ಪಳಿ ಸಮೀಪದ ಸಣ್ಣ ಹಳ್ಳಿಯಲ್ಲಿ ಮಾದರಿ ಕೆಲಸ  ವಿಶ್ವ ಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್, ಕಲ್ಲುಕೊಡಿಗೆ ಕುಪ್ಪಳಿ ಹಾಗೂ ಬೆಕ್ಕನೂರು ಸಮಸ್ತ ಗ್ರಾಮಸ್ಥರ ಸಹಯೋಗದಲ್ಲಿ ಮಾ.17ರಂದು ದಿನವಿಡಿ ಪುನೀತ್ ನೆನಪಿನೋತ್ಸವ-2023 ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮ ಹತ್ತಾರು ಸಾಮಾಜಿಕ ಕೆಲಸಗಳ ಮೂಲಕ ಮಾದರಿಯಾಯಿತು. ಸಮುದಾಯ ಭವನ,ಮುಸ್ಸಿನಕೊಪ್ಪ,…

Read Full News

ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಹೊಸನಗರದ ರಾಮಚಂದ್ರಪ್ಪ|eyedonate

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಠದಜಡ್ಡು ಗ್ರಾಮದ ವ್ಯಕ್ತಿಯೊಬ್ಬರು ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಠದಜಡ್ಡು ನಿವಾಸಿ ಈ ರಾಮಚಂದ್ರಪ್ಪನವರು (76) ಅನಾರೋಗ್ಯದ ಕಾರಣ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಮಾಜಿ ಮುಖ್ಯಮಂತ್ರಿ ದಿ|| ಎಸ್ ಬಂಗಾರಪ್ಪನವರಿಗೆ ನಿಕಟವರ್ತಿಯಾಗಿದ್ದ ಇವರು ಅನೇಕ ಸಮಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಮೃತರು ಚಾಲುಕ್ಯ ಬಸವರಾಜ್‌ರವರು ಸೇರಿ ಓರ್ವ ಪುತ್ರ, ಓರ್ವ ಪುತ್ರಿ, ಪತ್ನಿ, ಅಳಿಯ ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ. ಇವರು ನಿಧನದ ನಂತರ ತಮ್ಮ ಕಣ್ಣು ಇನ್ನೊಬ್ಬರಿಗೆ ಬೆಳಕಾಗಬೇಕು…

Read Full News

ಬುಲೆಟ್ ಬೈಕ್‌ ನಲ್ಲಿ ಅವಿತು ಕುಳಿತ ಬುಸ್ ಬುಸ್ ನಾಗಪ್ಪ|snake

ಶಿವಮೊಗ್ಗದ ದುರ್ಗಿಗುಡಿ ಸಮೀಪ ಇರುವ ವೈಭವಲಕ್ಷ್ಮೀ ವೈನ್ ಸ್ಟೋರ್ ಬಳಿಯಲ್ಲಿ ನಾಗರಹಾವೊಂದು ಕಾಣಿಸಿಕೊಂಡಿತ್ತು ಇಲ್ಲಿನ , ದಿ  ಫ್ಯಾಕ್ಟರಿ ಔಟ್​ ಲೆಟ್ ಬಳಿ ನಿಲ್ಲಿಸಲಾಗಿದ್ದ ಬುಲೆಟ್​ವೊಂದರಲ್ಲಿ ನಾಗರ ಹಾವೊಂದು ಸೇರಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬುಲೆಟ್​ನ ಹೆಡ್​ಲೈಟ್​ವೊಳಗೆ ಸೇರಿಕೊಂಡಿದ್ದ ನಾಗರ ಹಾವನ್ನ ನೋಡಿದ ಜನರು ಸ್ನೇಕ್ ಕಿರಣ್ ಗೆ ಫೋನಾಯಿಸಿದ್ದಾರೆ. ತಕ್ಷಣ ಅವರು ಸಹ ಸ್ಥಳಕ್ಕೆ ಬಂದಿದ್ಧಾರೆ. ಹೆಡ್​ಲೈಟ್​ ಬಿಚ್ಚಿ ಹಾವನ್ನ ಹಿಡಿಯಬೇಕು ಎನ್ನುವಷ್ಟರಲ್ಲಿ ಹೆಡ್​ಲೈಟ್ ಮೇಲೆ ಬಂದು, ಹೆಡೆಯೆತ್ತಿದ ನಾಗರಾಜ ಸುತ್ತಮುತ್ತ ನೋಡುತ್ತಾ ಬುಸುಗುಡಲು ಆರಂಭಿಸಿದ್ದ.  ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ…

Read Full News

ರಿಪ್ಪನ್‌ಪೇಟೆ : ಮೃತ ಯೋಧ ಸಂದೀಪ್ ಮನೆಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ, ಸಾಂತ್ವಾನ|sandeep

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಯೋಧ ಅಸ್ಸಾಂನ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ವಿಚಾರ ತಿಳಿಯುತಿದ್ದಂತೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮೃತ ಯೋಧನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಒಬ್ಬ ಯುವ ಯೋಧ ಅಕಾಲಿಕವಾಗಿ ಮೃತಪಟ್ಟಿರುವುದು ರಾಷ್ಟ್ರಕ್ಕಾದ ನಷ್ಟವಾಗಿದೆ. ನಗುಮೊಗದ ಯುವಕ ಸಂದೀಪ್…

Read Full News

ರಿಪ್ಪನ್‌ಪೇಟೆಯ ಯೋಧ ಸಂದೀಪ್ ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದಾಗ ಸಾವು|Rpet

ರಿಪ್ಪನ್‌ಪೇಟೆ : ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಮಣಿಪುರದ ಅಸ್ಸಾಂ ರೈಫಲ್ಸ್ ನಲ್ಲಿ ಕಾರ್ಯ ನಿರ್ವಹಿಸುತಿದ್ದ ಸಂದೀಪ್ ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರಾದ ವಿನೋದಮ್ಮ ರವರ ಪುತ್ರರಾಗಿದ್ದು ಕಳೆದ 2 ವರ್ಷದಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದರು. ನಕ್ಸಲರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಸಂದೀಪ್ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದೆ ಆದರೆ ಬಲ್ಲ ಮೂಲಗಳ ಪ್ರಕಾರ  ಇಂದು ಮುಂಜಾನೆ  ತಾನು ಕರ್ತವ್ಯ ನಿರ್ವಹಿಸುತಿದ್ದ ಪ್ರದೇಶದಲ್ಲಿ…

Read Full News

ರಿಪ್ಪನ್‌ಪೇಟೆಯ ಗಾನ ಕೋಗಿಲೆ ಪ್ರಣತಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುನ್ನತ ಶ್ರೇಣಿ|pranati

ರಿಪ್ಪನ್‌ಪೇಟೆಯ ಗಾನ ಕೋಗಿಲೆ ಪ್ರಣತಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುನ್ನತ ಶ್ರೇಣಿ ರಿಪ್ಪನ್‌ಪೇಟೆ : ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಹಿಂದೂಸ್ತಾನಿ ಸಂಗೀತ ಜೂನಿಯರ್‌ ವಿಭಾಗದ ಪರೀಕ್ಷೆಯಲ್ಲಿ ಪಟ್ಟಣದ ಗಾನ ಕೋಗಿಲೆ ಎಂದೆ ಖ್ಯಾತಿಯಾಗಿರುವ ಯುವ ಪ್ರತಿಭೆ ಪ್ರಣತಿ ಅಣ್ಣಪ್ಪ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಾಲೂಕ್ ,ಜಿಲ್ಲಾ ,ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಹಾಗೂ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಪ್ರಣತಿ ಅಣ್ಣಪ್ಪ…

Read Full News

ಸಹಕಾರಿ ಸಂಸ್ಥೆಗಳಿಂದ ರೈತರ ಬದುಕು ಹಸನಾಗಿದೆ – ಹರತಾಳು ಹಾಲಪ್ಪ|inauguration

ಸಹಕಾರಿ ಸಂಸ್ಥೆಗಳಿಂದ ರೈತರ ಬದುಕು ಹಸನಾಗಿದೆ : ಹಾಲಪ್ಪ ರಿಪ್ಪನ್‌ಪೇಟೆ : ಸಹಕಾರಿ ಸಂಘ ಸಂಸ್ಥೆಗಳಿಂದ ಗ್ರಾಮೀಣ ಭಾಗದ ರೈತ ಕುಟುಂಬದ ಬದುಕು ಹಸನಾಗಿದೆ ಎಂದು ಎಂದು ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.  ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಎರಡು ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಹಾಗೂ ೮೫ ಲಕ್ಷದ ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿರುವ ಬಹುಸೇವಾ ವಾಣಿಜ್ಯ ಗೋದಾಮು ಹಾಗೂ ೪ನೇ ವರ್ಷದ ಜಿಲ್ಲಾ ಮಟ್ಟದ…

Read Full News