postmannews

RIPPONPETE | ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತ

RIPPONPETE | ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತ ರಿಪ್ಪನ್‌ಪೇಟೆ : 17 ವರ್ಷದ ವಯೋಮಿತಿಯೊಳಗಿನ ಕಬ್ಬಡಿ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಪಟ್ಟಣಕ್ಕೆ ಆಗಮಿಸಿದ ಶಾರದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಅಕ್ಟೋಬರ್ 18 ಮತ್ತು 19 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಾ ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯೊಳಗಿನ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ…

Read More

Ripponpete |ಕಬ್ಬಡಿ ಪಂದ್ಯಾವಳಿ – ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರು

Ripponpete |ಕಬ್ಬಡಿ ಪಂದ್ಯಾವಳಿ – ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರು ರಿಪ್ಪನ್‌ಪೇಟೆ : ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ಐದು ವಿದ್ಯಾರ್ಥಿನಿಯರು ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅ 18 ಮತ್ತು 19 ರಂದು  ಜಿಲ್ಲೆಯ ಚಿಕ್ಕಮಗಳೂರು ಜಿಲ್ಲೆಯ ಕಡೂರು  ತಾಲೂಕಿನ ಡಾ ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯೊಳಗಿನ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು…

Read More

ಮನೆ ಹಿತ್ತಲ್ಲಿನಲ್ಲಿ ಹೂತಿಟ್ಟಿದ್ದ ಕೆ.ಜಿ ಗಟ್ಟಲೆ ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು

ಮನೆ ಹಿತ್ತಲ್ಲಿನಲ್ಲಿ ಹೂತಿಟ್ಟಿದ್ದ ಕೆ.ಜಿ ಗಟ್ಟಲೆ ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು ತೀರ್ಥಹಳ್ಳಿ : ಹಲವಾರು ಅಪರಾಧಗಳಲ್ಲಿ ಭಾಗಿಯಾಗಿ ಬೆಂಗಳೂರಿನಲ್ಲಿ ಚಿನ್ನವನ್ನು ಕದ್ದು ತೀರ್ಥಹಳ್ಳಿಯ ತನ್ನ ಮನೆಯ ಹಿಂದೆ ಹೂತಿಟ್ಟಿದ್ದ ಆರೋಪಿಯನ್ನು ಮಾಗಡಿ ಪೊಲೀಸರು ತೀರ್ಥಹಳ್ಳಿಗೆ ಕರೆ ತಂದು ಕೆಜಿ ಗಟ್ಟಲೆ ಚಿನ್ನವನ್ನು ವಶಪಡಿಸಿಕೊಂಡಿರುವ ಘಟನೆ  ನಡೆದಿದೆ. ಹಮೀದ್ ಹಂಜ ಎಂಬ ಆರೋಪಿ ಬೆಂಗಳೂರಿನ ಮಾಗಡಿಯಲ್ಲಿ ಕಳ್ಳತನ ಮಾಡಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ತಮ್ಮ ಮನೆಯ ಹಿತ್ತಲಿನಲ್ಲಿ ತಂದು ಹೂತಿಟ್ಟಿದ್ದ. ಬೆಂಗಳೂರಿನಿಂದ ತೀರ್ಥಹಳ್ಳಿಗೆ ಆರೋಪಿಯನ್ನು ಕರೆ ತಂದಿದ್ದ ಮಾಗಡಿ…

Read More

ಶಿವಮೊಗ್ಗದಲ್ಲಿ ಭಾರಿ ಮಳೆ – ರಸ್ತೆಗಳು ಜಲಾವೃತ , ಮನೆಗಳಿಗೆ ನುಗ್ಗಿದ ನೀರು

ಶಿವಮೊಗ್ಗದಲ್ಲಿ ಭಾರಿ ಮಳೆ – ರಸ್ತೆಗಳು ಜಲಾವೃತ , ಮನೆಗಳಿಗೆ ನುಗ್ಗಿದ ನೀರು ಶಿವಮೊಗ್ಗ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೂ ಮಳೆ ಆರ್ಭಟಿಸಿದೆ. ಬೆಳಿಗ್ಗೆಯೂ ಅರ್ಧ ಗಂಟೆ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಬಿರುಸುಗೊಂಡಿದೆ. ಕುಂಭದ್ರೋಣ ಮಳೆಗೆ ರಾತ್ರಿಯಿಡೀ ಶಿವಮೊಗ್ಗ ನಗರ ಅಕ್ಷರಶಃ ನಲುಗಿದೆ.ನಗರದ ರಸ್ತೆಗಳು ಹಳ್ಳಗಳಾಗಿ ಬದಲಾಗಿವೆ. ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿಯೆಲ್ಲ ನಿದ್ರೆಗೆಟ್ಟರು. ಮನೆಯಿಂದ ನೀರು ಹೊರ ಹಾಕುವಲ್ಲಿ ಹೈರಾಣಾದರು. ಮಳೆಯ ಆರ್ಭಟ ಮುಂಜಾನೆವರೆಗೂ ಒಂದೇ…

Read More

HOSANAGARA | ಪಟ್ಟಣ ಸೇರಿದಂತೆ ವಿವಿಧೆಡೆ ನಾಳೆ (20-10-2024) ವಿದ್ಯುತ್ ವ್ಯತ್ಯಯ

HOSANAGARA | ಪಟ್ಟಣ ಸೇರಿದಂತೆ ವಿವಿಧೆಡೆ ನಾಳೆ (20-10-2024) ವಿದ್ಯುತ್ ವ್ಯತ್ಯಯ ಹೊಸನಗರ ಪಟ್ಟಣದ ಉಪವಿಭಾಗದಲ್ಲಿ ಅಕ್ಟೋಬರ್ 20ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಮತ್ತು 33 ಕೆ.ವಿ ಸಾಗರ-ಹೊಸನಗರ ಮಾರ್ಗ ನಿರ್ವಹಣೆ ಹಾಗೂ ಉಪವಿದ್ಯುತ್‌ ವಿತರಣಾ ಕೇಂದ್ರ ನಿರ್ವಹಣೆ ಪ್ರಯುಕ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಸಾಗರ-ಹೊಸನಗರ ವಿದ್ಯುತ್ ಮಾರ್ಗದ ಜೇನಿ, ಮಾರುತೀಪುರ, ರಾಮಚಂದ್ರಾಪುರ ಮಠ, ಮೇಲಿನ ಬೆಸಿಗೆ, ಸೋನಲೆ ಗ್ರಾಮ ಪಂಚಾಯಿತಿ…

Read More

ಅಂಧ ವ್ಯಕ್ತಿಗೆ ಕೆಲಸ ಕೊಡಿಸುವುದಾಗಿ ಪತ್ರಕರ್ತನಿಂದ ವಂಚನೆ ಆರೋಪ

ಕೆಲಸ ಕೊಡಿಸುವುದಾಗಿ ಹೇಳಿ ಪತ್ರಕರ್ತನೊಬ್ಬ ಅಂಧರೊಬ್ಬರಿಗೆ 2 ಲಕ್ಷದ 30 ಸಾವಿರ ರೂ. ವಂಚಿಸಿರುವುದು ಆರೋಪ ಕೇಳಿ ಬಂದಿದೆ. ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಧ ಬಸವರಾಜ್ ತನ್ನ ಮಗ ಗಗನ್ ದೀಪ್‌ಗೆ ನಗರಸಭೆಯಲ್ಲಿ  ಕೆಲಸ ಖಾಲಿಯಿದೆ. ಇಲ್ಲವೆಂದರೆ ಪತ್ರಕರ್ತರ ಕಚೇರಿಯೊಂದರಲ್ಲಿ ಕೆಲಸ ಆಗಲಿದೆ ಎಂದು ತಿಳಿಸಿದ್ದರು. ಡಾಟಾ ಆಪರೇಟರ್ ಕೆಲಸಕ್ಕೆ 7-8 ಲಕ್ಷ ರೂ. ಬೇಡಿಕೆ ಇದೆ ಎಂದಿದ್ದರು. ಬೇಡ ಎಂದಾಗ ನಿಮ್ಮ ಹತ್ತಿರ ಎಷ್ಟು ಇದ್ದರೂ ಕೊಡಿ ಎಂದು ಹೇಳಿ  2 ಲಕ್ಷ…

Read More

ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ -ಬೈಕ್ ಸವಾರನಿಗೆ  ಗಂಭೀರ ಗಾಯ

ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ -ಬೈಕ್ ಸವಾರನಿಗೆ  ಗಂಭೀರ ಗಾಯ ತೀರ್ಥಹಳ್ಳಿ : ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ಅರೆಕಲ್ ಬಳಿ ಅ.19ರ ಶನಿವಾರ ನಡೆದಿದೆ. ತಾಲೂಕಿನ ಮೇಗರವಳ್ಳಿ ಸಮೀಪದ ಅರೆಕಲ್ ಬಳಿ ಈ ಅವಘಡ ಸಂಭವಿಸಿದ್ದು ಹಾಲಾಡಿ ಶಿವರಾಮ್ (45) ಗಂಭೀರ ಗಾಯಗೊಂಡ ವ್ಯಕ್ತಿ. ಬೈಕ್ ನಲ್ಲಿ ಬರುತ್ತಿದ್ದ ಶಿವರಾಮ್ ಅವರಿಗೆ ಲಾರಿ ಗುದ್ದಿದೆ. ಈ ಪರಿಣಾಮ ಅವರಿಗೆ ಗಂಭೀರ ಗಾಯವಾಗಿದ್ದು ಅವರನ್ನು…

Read More

ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ರವೀಂದ್ರ ಕೆರೆಹಳ್ಳಿ ಆಯ್ಕೆ

ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ರವೀಂದ್ರ ಕೆರೆಹಳ್ಳಿ ಆಯ್ಕೆ ನ.28 ,29 ಮತ್ತು 30 ರಂದು ಅದ್ದೂರಿ ಸಿದ್ದತೆ | ಕೆಸರುಗದ್ದೆ ಓಟದ ಸ್ಪರ್ಧೆ , ಬಿಜೂ ಸ್ಮರಣಾರ್ಥ ವಾಲಿಬಾಲ್ ಪಂದ್ಯಾವಳಿ , ಪಟ್ಲ ಸತೀಶ್ ನೇತ್ರತ್ವದಲ್ಲಿ ಯಕ್ಷಗಾನ ರಿಪ್ಪನ್‌ಪೇಟೆ : 31 ವರ್ಷದ ಕಲಾ ಕೌಸ್ತುಭ ಕನ್ನಡ ಸಂಘಕ್ಕೆ ಹಾಗೂ 69ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಿತಿಗೆ ಆಧ್ಯಕ್ಷರಾಗಿ ರವೀಂದ್ರ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಪಿ. ಸುಧೀರ್ ಆಯ್ಕೆಯಾಗಿದ್ದಾರೆ. ಕಳೆದ ಸಾಲಿನ ಅಧ್ಯಕ್ಷರಾದ ಲೀಲಾ…

Read More

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸರ್ವರ್ ದೋಷ – ಗ್ರಾಹಕರ ಆಕ್ರೋಶ

ರಿಪ್ಪನ್‌ಪೇಟೆ : ಹೊಸನಗರ ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳ ಮುಂದೆ ಜನಸ್ತೋಮ ಪಡಿತರಕ್ಕಾಗಿ ನಿಂತು ಹೈರಾಣಾಗಿದೆ.ಶುಕ್ರವಾರದಿಂದ ಪಡಿತರ ವಿತರಣೆ ಮಾಡುತ್ತಿದ್ದರೂ, ಎಲ್ಲಾ ಗ್ರಾಹಕರಿಗೆ ಪಡಿತರ ತಲುಪಿಸಲು ಸಾಧ್ಯವಾಗಿಲ್ಲ… ಇದರಿಂದಾಗಿ ಸಾರ್ವಜನಿಕರು ಸಂಬಂಧಿಸಿದವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಇದಕ್ಕೆಲ್ಲ ಕಾರಣವಾಗಿದ್ದು ಗ್ರಾಹಕರ ಬೆರಳಚ್ಚು (ಬಯೋಮೆಟ್ರಿಕ್) ಪಡೆಯುವ ಸರ್ವರ್ ಗಳ ದೋಷ , ಇದರಿಂದಾಗಿ ಜನರ ನರಳಾಟ…. ಸರ್ವರ್ ವೈಫಲ್ಯದಿಂದಾಗಿ ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ… ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ಪುರುಷೋತ್ತಮ್ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಪಡಿತರಕ್ಕಾಗಿ ದೂರದ ಹಳ್ಳಿಗಳಿಂದ…

Read More

ಪ್ರವಾಸಿಗರ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ – ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಪ್ರವಾಸಿಗರ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ – ವಿದ್ಯಾರ್ಥಿ ಸ್ಥಳದಲ್ಲೇ ಸಾವು ಗೋವಾ ಪ್ರವಾಸಿಗರ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಸರ್ಕಲ್ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ಬೆಜ್ಜವಳ್ಳಿ ಸಮೀಪದ ತನಿಕಲ್ ಗ್ರಾಮದ ಕೌಟುಮನೆ ನಿವಾಸಿ ಪ್ರಥಮ್ (16) ಮೃತ ದುರ್ಧೈವಿ. ಈತ ಡಿಪ್ಲೊಮೊ ಸ್ಟೂಡೆಂಟ್ ಆಗಿದ್ದು ಕಾಲೇಜಿಗೆ ತೆರಳುವ ವೇಳೆ ಏಕಾಏಕಿ ತೀರ್ಥಹಳ್ಳಿ – ಶಿವಮೊಗ್ಗ ಮುಖ್ಯ ರಸ್ತೆಗೆ ಬಂದಿದ್ದಾನೆ….

Read More