ಈ ಹಿಂದಿನ ವರ್ಷಗಳಲ್ಲಿ 700 ರೂ ಇದ್ದ ಪರೀಕ್ಷಾ ಶುಲ್ಕವನ್ನು 2020 ರೂ ಗೆ ಏರಿಸಿರುವುದು ಖಂಡನಾರ್ಹ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳು ಇಷ್ಟೊಂದು ಅಧಿಕ ಪರೀಕ್ಷಾ ಶುಲ್ಕವನ್ನು ಪಾವತಿಸಲು ಸಮರ್ಥರಿರುವುದಿಲ್ಲ ಹಾಗೆಯೇ ಪರೀಕ್ಷಾ ಶುಲ್ಕವೂ ಪದವಿ ಪ್ರವೇಶ ಶುಲ್ಕ ಕ್ಕಿಂತಲೂ ಅಧಿಕ ವಾಗಿರುವುದರಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಕಷ್ಟವಾಗುತ್ತಿದೆ ಆದ್ದರಿಂದ ಈಗ ನಿಗದಿಪಡಿಸಿರುವ ಪರೀಕ್ಷಾ ಶುಲ್ಕವನ್ನು ವಾಪಸ್ಸು ಪಡೆದು ಈ ಹಿಂದೆ ಇದ್ದ ಪರೀಕ್ಷಾ ಶುಲ್ಕವನ್ನು ಮುಂದುವರೆಸುವಂತೆ ಪ್ರಥಮ ಪದವಿ ವಿದ್ಯಾರ್ಥಿಗಳು ಒತ್ತಾಯಿಸಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಏಕಾಏಕಿ ಮೂರು ಪಟ್ಟು ಹೆಚ್ಚಿಸಿರುವುದು ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಹೊರೆಯಾಗಿದ್ದು,ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪರಿಣಾಮ ಬೀಳುವ ಸಾಧ್ಯತೆಗಳಿವೆ. ಕೂಡಲೇ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಪರೀಕ್ಷಾ ಶುಲ್ಕವನ್ನು ಈ ಹಿಂದೆ ಇದ್ದಷ್ಟೇ ನಿಗದಿ ಮಾಡಬೇಕಾಗಿದೆ.