w
Headlines
Home » ರಿಪ್ಪನ್ ಪೇಟೆ : ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ : ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ :  ಶಿರಸಿ ಹಾಗೂ ಸಾಗರದ ಕಾರ್ಯಕ್ರಮ ಮುಗಿಸಿಕೊಂಡು ತೀರ್ಥಹಳ್ಳಿ ಗೆ ತೆರಳುವ ಮಾರ್ಗ ಮಧ್ಯದಲ್ಲಿ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ  ಇಂದು ಸಂಜೆ ರಾಜ್ಯ ಗೃಹ ಸಚಿವರಾದ  ಆರಗ ಜ್ಞಾನೇಂದ್ರ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದರು.

ಗೃಹ ಸಚಿವರ ದಿಢೀರ್ ಆಗಮನವಾದಾಗ ನೂರಾರು ಸಂಖ್ಯೆಯಲ್ಲಿ  ಜಮಾವಣೆಗೊಂಡ ಕಾರ್ಯಕರ್ತರನ್ನು ನೋಡಿದ ಗೃಹ ಸಚಿವರು ವಿನಾಯಕ ವೃತ್ತದಲ್ಲಿ  ಕಾರ್ ನಿಲ್ಲಿಸಿ ತಕ್ಷಣ ಕಾರ್ ನಿಂದ ಇಳಿದು ಕಾರ್ಯಕರ್ತರೊಂದಿಗೆ ಸಂಭಾಷಣೆ ನಡೆಸಿದರು.

ಈ ಸಂದರ್ಭದಲ್ಲಿ ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಮುಖಂಡರಾದ ಸುರೇಶ್ ಸಿಂಗ್, ಸುಧೀಂದ್ರ ಪೂಜಾರಿ, ಸುಂದರೇಶ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗೃಹ ಸಚಿವರ ಆಗಮನದ ಹಿನ್ನಲೆಯಲ್ಲಿ ವಿನಾಯಕ ವೃತ್ತದಲ್ಲಿ ಪಿಎಸ್ ಐ ಶಿವಾನಂದ ಕೋಳಿ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಾಲ್ಕು ರಸ್ತೆಗಳಲ್ಲಿ ವಾಹನಗಳನ್ನು ಭದ್ರತೆ ದೃಷ್ಟಿಯಿಂದ ತಡೆ ಹಿಡಿಯಲಾಗಿತ್ತು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.