w
Headlines
Home » ಯುವತಿಯ ಮನೆಯ ಕಾಂಪೌಂಡ್‌ನಲ್ಲಿ ವಿಷಪೂರಿತ ಹಾವು ಬಿಟ್ಟು ಪರಾರಿಯಾದ ದುಷ್ಕರ್ಮಿಗಳು; ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಯುವತಿಯ ಮನೆಯ ಕಾಂಪೌಂಡ್‌ನಲ್ಲಿ ವಿಷಪೂರಿತ ಹಾವು ಬಿಟ್ಟು ಪರಾರಿಯಾದ ದುಷ್ಕರ್ಮಿಗಳು; ಸಿಸಿಟಿವಿಯಲ್ಲಿ ಕೃತ್ಯ ಸೆರೆ

GridArt 20260616

ಯುವತಿಯ ಮನೆಯ ಕಾಂಪೌಂಡ್‌ನಲ್ಲಿ ವಿಷಪೂರಿತ ಹಾವು ಬಿಟ್ಟು ಪರಾರಿಯಾದ ದುಷ್ಕರ್ಮಿಗಳು; ಸಿಸಿಟಿವಿಯಲ್ಲಿ ಕೃತ್ಯ ಸೆರೆ

Two unidentified men allegedly entered a house compound in Bhadravathi and released a venomous snake before fleeing the spot. The shocking incident was captured on CCTV, and police have launched an investigation.

ಭದ್ರಾವತಿ: ಮನೆಯೊಳಗೆ ಒಬ್ಬಳೇ ಇದ್ದ ಯುವತಿಗೆ ಭಯ ಹುಟ್ಟಿಸುವ ಉದ್ದೇಶದಿಂದ ಅಪರಿಚಿತ ದುಷ್ಕರ್ಮಿಗಳು ವಿಷಪೂರಿತ ಹಾವನ್ನು ಮನೆಯ ಕಾಂಪೌಂಡ್‌ಗೆ ಬಿಟ್ಟು ಪರಾರಿಯಾದ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಭದ್ರಾವತಿಯ ಪಿತಾರಿ ನಂಜಪ್ಪ ರಸ್ತೆಯಲ್ಲಿ ನಡೆದಿದೆ.

ಘಟನೆ ನಡೆದ ವೇಳೆ ಯುವತಿಯ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದು, ಯುವತಿ ಮನೆಯಲ್ಲಿ ಒಬ್ಬಳೇ ಇದ್ದಳು. ಇದೇ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಮನೆಯ ಸಮೀಪಕ್ಕೆ ಆಗಮಿಸಿ, ಏಕಾಏಕಿ ಕಾಂಪೌಂಡ್ ಒಳಗೆ ಪ್ರವೇಶಿಸಿದ್ದಾರೆ.

ಮನೆಯೊಳಗಿಂದಲೇ ಈ ಬೆಳವಣಿಗೆಯನ್ನು ಗಮನಿಸುತ್ತಿದ್ದ ಯುವತಿ, ಅವರ ವರ್ತನೆಯಿಂದ ಆತಂಕಗೊಂಡಿದ್ದಾಳೆ. ಬಳಿಕ ಆರೋಪಿಗಳು ತಮ್ಮ ಬಳಿ ಇದ್ದ ಚೀಲವನ್ನು ತೆರೆದು ಅದರಲ್ಲಿದ್ದ ವಿಷಪೂರಿತ ಹಾವನ್ನು ಮನೆಯ ಕಾಂಪೌಂಡ್ ಒಳಗೆ ಬಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನು ಕಂಡ ಯುವತಿ ಭಯದಿಂದ ಜೋರಾಗಿ ಕಿರುಚಿಕೊಂಡಿದ್ದು, ಆಕೆಯ ಕಿರುಚಾಟ ಕೇಳುತ್ತಿದ್ದಂತೆ ದುಷ್ಕರ್ಮಿಗಳು ತಕ್ಷಣವೇ ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಸಂಪೂರ್ಣ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳು ಪೊಲೀಸರಿಗೆ ಮಹತ್ವದ ಸುಳಿವು ನೀಡುವ ಸಾಧ್ಯತೆ ಇದೆ.

ಈ ಸಂಬಂಧ ಸಂತ್ರಸ್ತ ಮಹಿಳೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.