w
Headlines
Home » ದನ ಕಳ್ಳತನ ಯತ್ನ : ಇಬ್ಬರು ಆರೋಪಿಗಳ ಬಂಧನ, 4 ಲಕ್ಷ ಮೌಲ್ಯದ ಕಾರು ವಶ

ದನ ಕಳ್ಳತನ ಯತ್ನ : ಇಬ್ಬರು ಆರೋಪಿಗಳ ಬಂಧನ, 4 ಲಕ್ಷ ಮೌಲ್ಯದ ಕಾರು ವಶ

GridArt 20260615

ದನ ಕಳ್ಳತನ ಯತ್ನ : ಇಬ್ಬರು ಆರೋಪಿಗಳ ಬಂಧನ, 4 ಲಕ್ಷ ಮೌಲ್ಯದ ಕಾರು ವಶ

Two men were arrested by Thirthahalli Police for attempting cattle theft in Gadikal village. Police seized an Ertiga car worth ₹4 lakh and registered a case under CR No. 175/2026.

ತೀರ್ಥಹಳ್ಳಿ: ತಾಲೂಕಿನ ಗಡಿಕಲ್ ಗ್ರಾಮದಲ್ಲಿ ದನ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು ₹4 ಲಕ್ಷ ಮೌಲ್ಯದ ಎರ್ಟಿಗಾ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಶಿವಮೊಗ್ಗ ನಗರದ ಟಿಪ್ಪುನಗರ ನಿವಾಸಿ ರೋಷನ್ ಬೇಗ್ ಬಿನ್ ಪೈರೋಜ್ ಬೇಗ್ (31) ಹಾಗೂ ಅಣ್ಣಾನಗರ ನಿವಾಸಿ ಇಮ್ರಾನ್ ಬಿನ್ ಅತೀಕ್ ಅಹಮದ್ (39) ಎಂದು ಗುರುತಿಸಲಾಗಿದೆ.

ಕಳೆದ ವಾರ ಮಧ್ಯರಾತ್ರಿ ಗಡಿಕಲ್ ಗ್ರಾಮದಲ್ಲಿ ದನ ಕಳ್ಳತನಕ್ಕೆ ಯತ್ನಿಸಿದ ಕುರಿತು ಮಾಹಿತಿ ಪಡೆದ ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿ ಆರ್ ನಂ. 175/2026 ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದ ತನಿಖೆ ಹಾಗೂ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಡಿಎಸ್‌ಪಿ ಅರವಿಂದ್ ಕಲಗುಜ್ಜಿ ಮಾರ್ಗದರ್ಶನದಲ್ಲಿ ಠಾಣಾ ಇನ್‌ಸ್ಪೆಕ್ಟರ್ ಇಮ್ರಾನ್ ಬೇಗ್, ಪಿಎಸ್‌ಐ ಸುಷ್ಮಾ ಆರ್., ಪಿಎಸ್‌ಐ ಯುವರಾಜ್ ಹಾಗೂ ಸಿಬ್ಬಂದಿಗಳಾದ ಲಿಂಗೇಗೌಡ, ಕುಮಾರ, ಪ್ರಸನ್ನ, ದೀಪಕ್, ಪ್ರದೀಪ್ ಕೆ.ಪಿ., ಮಂಜುನಾಥ್ ಹಂಪಿಹೊಳಿ ಮತ್ತು ಪ್ರಮೋದ್ ಜೆ. ಅವರ ತಂಡ ಪ್ರಮುಖ ಪಾತ್ರ ವಹಿಸಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.