POSTMAN NEWS

ನೈಜ ಸುದ್ದಿ ನೇರ ಬಿತ್ತರ..

50 ರೂ. ಕೇರಳ ಲಾಟರಿ ಆಸೆಗೆ 2 ಲಕ್ಷ ರೂ. ಕಳೆದುಕೊಂಡ ಯುವತಿ; ತೀರ್ಥಹಳ್ಳಿಯಲ್ಲಿ ಸೈಬರ್ ವಂಚನೆ

GridArt 20260622

50 ರೂ. ಕೇರಳ ಲಾಟರಿ ಆಸೆಗೆ 2 ಲಕ್ಷ ರೂ. ಕಳೆದುಕೊಂಡ ಯುವತಿ; ತೀರ್ಥಹಳ್ಳಿಯಲ್ಲಿ ಸೈಬರ್ ವಂಚನೆ

A young woman from Thirthahalli lost nearly ₹2 lakh in a Kerala lottery cyber fraud. Scammers lured her with a ₹50 lottery ticket offer and later collected money in the name of taxes and charges. A case has been registered at Shivamogga Cyber Crime Police Station.

ತೀರ್ಥಹಳ್ಳಿ, ಜೂನ್ 22: ಕೇರಳ ಲಾಟರಿ ಹೆಸರಿನಲ್ಲಿ ಸೈಬರ್ ವಂಚಕರು ಯುವತಿಯೋರ್ವಳನ್ನು ನಂಬಿಸಿ ಸುಮಾರು 2 ಲಕ್ಷ ರೂಪಾಯಿ ವಂಚಿಸಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು, ಈ ಸಂಬಂಧ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಯ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ವಂಚಕರು, ತಾವು ಕೇರಳ ಲಾಟರಿ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ಪ್ರಸ್ತುತ ಕೇರಳ ಲಾಟರಿ ಕುರಿತು ಜನರಲ್ಲಿ ಹೆಚ್ಚಿದ ಆಸಕ್ತಿ ಮತ್ತು ಚರ್ಚೆಯನ್ನು ದುರುಪಯೋಗಪಡಿಸಿಕೊಂಡ ಅವರು, ಕೇವಲ 50 ರೂಪಾಯಿಗೆ ಲಾಟರಿ ಟಿಕೆಟ್ ಖರೀದಿಸುವಂತೆ ಯುವತಿಗೆ ಆಮಿಷ ಒಡ್ಡಿದ್ದಾರೆ.

ವಂಚಕರ ಮಾತು ನಂಬಿದ ಯುವತಿ ಎರಡು ಲಾಟರಿ ಟಿಕೆಟ್‌ಗಳಿಗಾಗಿ 100 ರೂಪಾಯಿಯನ್ನು ಅವರ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಯುವತಿಗೆ ಕರೆ ಮಾಡಿ, ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ತಿಳಿಸಿ ವಾಟ್ಸಾಪ್ ಮೂಲಕ ನಕಲಿ ಲಾಟರಿ ಟಿಕೆಟ್ ಚಿತ್ರವನ್ನು ಕಳುಹಿಸಿದ್ದಾರೆ.

ಅನಂತರ ಬಹುಮಾನದ ಹಣವನ್ನು ಖಾತೆಗೆ ಜಮೆ ಮಾಡಲು ಟಿಡಿಎಸ್, ತೆರಿಗೆ ಹಾಗೂ ಇತರೆ ಶುಲ್ಕಗಳನ್ನು ಪಾವತಿಸಬೇಕೆಂದು ಹೇಳಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ. ವಂಚಕರ ಮಾತುಗಳನ್ನು ನಂಬಿದ ಯುವತಿ ಒಟ್ಟು 1,99,710 ರೂಪಾಯಿಯನ್ನು ಹಲವು ಕಂತುಗಳಲ್ಲಿ ವರ್ಗಾಯಿಸಿದ್ದಾರೆ.

ದೊಡ್ಡ ಮೊತ್ತದ ಹಣ ಪಡೆದ ತಕ್ಷಣವೇ ವಂಚಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದು, ನಂತರ ತಾನು ಮೋಸ ಹೋಗಿರುವುದು ಯುವತಿಗೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಲಾಟರಿ, ಬಹುಮಾನ ಅಥವಾ ಆಕರ್ಷಕ ಆಫರ್‌ಗಳ ಹೆಸರಿನಲ್ಲಿ ಬರುವ ಕರೆಗಳು ಮತ್ತು ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.