w
Headlines
Home » ಶಿವಮೊಗ್ಗದಲ್ಲಿ – ಬಸ್ ನಿಲ್ದಾಣದಿಂದ ಆ್ಯಕ್ಟಿವಾ, ಬೈಪಾಸ್ ರಸ್ತೆಯಿಂದ ಬೊಲೆರೋ ಪಿಕಪ್ ಕಳವು

ಶಿವಮೊಗ್ಗದಲ್ಲಿ – ಬಸ್ ನಿಲ್ದಾಣದಿಂದ ಆ್ಯಕ್ಟಿವಾ, ಬೈಪಾಸ್ ರಸ್ತೆಯಿಂದ ಬೊಲೆರೋ ಪಿಕಪ್ ಕಳವು

GridArt 20260520

ಶಿವಮೊಗ್ಗದಲ್ಲಿ – ಬಸ್ ನಿಲ್ದಾಣದಿಂದ ಆ್ಯಕ್ಟಿವಾ, ಬೈಪಾಸ್ ರಸ್ತೆಯಿಂದ ಬೊಲೆರೋ ಪಿಕಪ್ ಕಳವು

Two separate vehicle theft cases have been reported in Shivamogga, including the theft of a Honda Activa from the private bus stand and a Bolero pickup vehicle from Urugaduru Bypass Road. Police have registered cases and launched an investigation.

ಶಿವಮೊಗ್ಗ : ನಗರದಲ್ಲಿ ವಾಹನ ಕಳ್ಳರ ಹಾವಳಿ ಮುಂದುವರಿದಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸ್ಕೂಟಿ ಹಾಗೂ ಬೊಲೆರೋ ಪಿಕಪ್ ವಾಹನ ಕಳ್ಳತನವಾಗಿರುವ ಘಟನೆಗಳು ವರದಿಯಾಗಿವೆ. ಈ ಸಂಬಂಧ ದೊಡ್ಡಪೇಟೆ ಹಾಗೂ ತುಂಗಾನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಮೊದಲ ಪ್ರಕರಣದಲ್ಲಿ, ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಯುವಕನೊಬ್ಬ ತನ್ನ ಹೊಂಡಾ ಆ್ಯಕ್ಟಿವಾ ಸ್ಕೂಟಿಯಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಪಾರ್ಸಲ್ ಹಾಕಲು ತೆರಳಿದ್ದ. ಸಂಜೆ 5:30ರ ಸುಮಾರಿಗೆ ಸ್ಕೂಟಿಯನ್ನು ನಿಲ್ದಾಣದ ಬಳಿ ನಿಲ್ಲಿಸಿ ಪಾರ್ಸಲ್ ಹಾಕಲು ಹೋಗಿದ್ದ ಆತ, ಸುಮಾರು ಹತ್ತು ನಿಮಿಷಗಳ ಬಳಿಕ ವಾಪಸ್ ಬಂದಾಗ ಸ್ಕೂಟಿ ನಾಪತ್ತೆಯಾಗಿರುವುದು ಕಂಡುಬಂದಿದೆ. ಸುತ್ತಮುತ್ತ ಹುಡುಕಾಟ ನಡೆಸಿದರೂ ವಾಹನದ ಸುಳಿವು ಸಿಗದ ಹಿನ್ನೆಲೆಯಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ನಗರದ ಊರುಗಡೂರು ಬೈಪಾಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಬಿಳಿ ಬಣ್ಣದ ಬೊಲೆರೋ ಪಿಕ್‌ಅಪ್ ಗೂಡ್ಸ್ ವಾಹನವನ್ನು ಕಳ್ಳರು ಕದ್ದೊಯ್ದಿದ್ದಾರೆ. ಸೂಳೇಬೈಲಿನ ವ್ಯಕ್ತಿಯೊಬ್ಬರು ಸುಮಾರು 4.93 ಲಕ್ಷ ರೂಪಾಯಿ ವೆಚ್ಚದಲ್ಲಿ ವಾಹನವನ್ನು ಖರೀದಿಸಿದ್ದು, ಸ್ಟಿಕ್ಕರ್ ಅಳವಡಿಸಲು ಅಂಗಡಿಯೊಂದರ ಬಳಿ ಬಿಡಲಾಗಿತ್ತು. ರಾತ್ರಿ ಅಂಗಡಿ ಮುಚ್ಚುವ ವೇಳೆಯವರೆಗೆ ವಾಹನ ಅಲ್ಲೇ ಇತ್ತು. ಆದರೆ, ಮುಂಜಾನೆ ಅಂಗಡಿ ಮಾಲೀಕರು ಪರಿಶೀಲಿಸಿದಾಗ ವಾಹನ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಎಲ್ಲೆಡೆ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗದ ಹಿನ್ನೆಲೆ, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದಲ್ಲಿ ಸರಣಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ವಾಹನ ಮಾಲೀಕರಲ್ಲಿ ಆತಂಕ ಮೂಡಿಸಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.