Headlines

ರಿಪ್ಪನ್‌ಪೇಟೆ: ಹೃದಯಾಘಾತದಿಂದ ಯುವಕ ನಿಧನ

ರಿಪ್ಪನ್‌ಪೇಟೆ: ಹೃದಯಾಘಾತದಿಂದ ವ್ಯಕ್ತಿ ನಿಧನ

Ripponpet tire merchant Naseeruddin (Maulana), 46, passed away due to a heart attack after being admitted to a Shivamogga hospital. Get the complete news details here.

​ರಿಪ್ಪನ್‌ಪೇಟೆ: ಪಟ್ಟಣದ ಮದೀನಾ ಕಾಲೋನಿಯ ನಿವಾಸಿ ಹಾಗೂ ಚಿರಪರಿಚಿತ ಟಯರ್ ವ್ಯಾಪಾರಿ ನಾಸೀರುದ್ದೀನ್ (ಮೌಲಾನಾ) (46) ಅವರು ಹೃದಯಾಘಾತದಿಂದ ಬುಧವಾರ ಸಂಜೆ ನಿಧನರಾಗಿದ್ದಾರೆ.

​ಎರಡು ದಿನಗಳ ಹಿಂದೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

​ಪಟ್ಟಣದ ಹೊಸನಗರ ರಸ್ತೆಯಲ್ಲಿ ಟಯರ್ ಅಂಗಡಿ ನಡೆಸುತ್ತಿದ್ದ ನಾಸೀರುದ್ದೀನ್ ಅವರು, ತಮ್ಮ ಸರಳತೆ ಹಾಗೂ ಸ್ನೇಹಮಯಿ ಸ್ವಭಾವದಿಂದ ಪಟ್ಟಣದಾದ್ಯಂತ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರವು ನಾಳೆ (ಗುರುವಾರ) ಬೆಳಿಗ್ಗೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಖಬರ್‌ಸ್ಥಾನ್‌ನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

About The Author