POSTMANNEWS

ನೈಜ ಸುದ್ದಿ ನೇರ ಬಿತ್ತರ..

ಯಕ್ಷಗಾನದಿಂದ ಆತ್ಮವಿಶ್ವಾಸ, ಧೈರ್ಯ,ಕನ್ನಡ ಭಾಷೆಯ ಮೇಲಿನ ಹಿಡಿತ ಬಲವಾಗುತ್ತದೆ : ಹೊಸನಗರ ಪತಕರ್ತರ ಸಂಘದ ಅಧ್ಯಕ್ಷ  H S ನಾಗರಾಜ್

IMG 20260730 WA0037

ಯಕ್ಷಗಾನದಿಂದ ಆತ್ಮವಿಶ್ವಾಸ, ಧೈರ್ಯ,ಕನ್ನಡ ಭಾಷೆಯ ಮೇಲಿನ ಹಿಡಿತ ಬಲವಾಗುತ್ತದೆ : ಹೊಸನಗರ ಪತಕರ್ತರ ಸಂಘದ ಅಧ್ಯಕ್ಷ  H S ನಾಗರಾಜ್

Discover how Yakshagana learning helps students build confidence, discipline, leadership, Kannada language skills, cultural awareness, memory, and overall personality development while preserving Karnataka’s rich folk heritage.

​ಹೊಸನಗರ:ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ನಿಂತರೂ, ಪಟ್ಲ ಫೌಂಡೇಶನ್ ಅಡಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ಯಕ್ಷಗಾನ ತರಬೇತಿಯು ಎಂದಿಗೂ ನಿಲ್ಲುವುದಿಲ್ಲ ಎಂದು ಹೊಸನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಎಸ್. ನಾಗರಾಜ್‌ ಸ್ಪಷ್ಟಪಡಿಸಿದರು.

​ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಯಕ್ಷಗಾನ ಕಲೆ ಹುಟ್ಟಿನಿಂದ ಬರುವುದಿಲ್ಲ, ಬದಲಾಗಿ ಅಭ್ಯಾಸದಿಂದ ಬೆಳೆಯುವ ಕಲೆಯಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಪ್ರಾಚೀನ ಕಲೆಯನ್ನು ಉಳಿಸಿ ಬೆಳೆಸಲು ಸಾವಿರಾರು ಕಲಾವಿದರ ಶ್ರಮವಿದೆ. ಪ್ರತಿಯೊಬ್ಬರೂ ಯಕ್ಷಗಾನವನ್ನು ಕಲಿತು, ಅದನ್ನು ಪೋಷಿಸಿ ನಾಡಿನ ಸೊಬಗನ್ನು ಹೆಚ್ಚಿಸಬೇಕು” ಎಂದು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಲೆನಾಡು ವಾಯ್ಸ್ ಪತ್ರಿಕೆ ಸಂಪಾದಕ ನಗರ ರಾಘವೇಂದ್ರ, “ಯಕ್ಷಗಾನ ಕಲೆಯನ್ನು ಉಳಿಸುವ ಸದುದ್ದೇಶದಿಂದ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್‌ ನೇತೃತ್ವದಲ್ಲಿ ರಾಜ್ಯಾದ್ಯಂತ ಕೋಟ್ಯಂತರ ರೂ. ಖರ್ಚು ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.

​ಮತ್ತೋರ್ವ ಅತಿಥಿ ಸುಧೀಂದ್ರ ಪಂಡಿತ್ ಮಾತನಾಡಿ, “ಶ್ರೀಮಂತ ಇತಿಹಾಸ ಹೊಂದಿರುವ ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ದೊಡ್ಡ ಜವಾಬ್ದಾರಿ ಇಂದಿನ ಯುವಜನತೆ ಹಾಗೂ ವಿದ್ಯಾರ್ಥಿಗಳ ಮೇಲಿದೆ” ಎಂದು ಅಭಿಪ್ರಾಯಪಟ್ಟರು.

​ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ, ರಾಮಕೃಷ್ಣ ವಿದ್ಯಾ ಶಾಲೆಯ ಮುಖ್ಯೋಪಾಧ್ಯಯ ರಾಜೇಶ್, ಗೌತಮ್ ಕುಮಾರಸ್ವಾಮಿ, ಪತ್ರಕರ್ತ ಎಂ.ಕೆ. ವೆಂಕಟೇಶ್‌ಮೂರ್ತಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.