w
Headlines
Home » ತೋಟದ ಬೋರ್‌ವೆಲ್ ಮೋಟಾರ್ ಕಳ್ಳತನ ಪ್ರಕರಣ: ಮೂವರು ಆರೋಪಿಗಳು ಬಂಧನ

ತೋಟದ ಬೋರ್‌ವೆಲ್ ಮೋಟಾರ್ ಕಳ್ಳತನ ಪ್ರಕರಣ: ಮೂವರು ಆರೋಪಿಗಳು ಬಂಧನ

GridArt 20260428

ತೋಟದ ಬೋರ್‌ವೆಲ್ ಮೋಟಾರ್ ಕಳ್ಳತನ ಪ್ರಕರಣ: ಮೂವರು ಆರೋಪಿಗಳು ಬಂಧನ

Three accused have been arrested by Hosanagara police for stealing borewell and submersible motors from a farm in Masagalli village. The theft was reported on April 26, and swift police action led to their arrest.

ಹೊಸನಗರ: ತೋಟದಲ್ಲಿ ಅಳವಡಿಸಿದ್ದ ಬೋರ್‌ವೆಲ್ ಮೋಟಾರ್‌ಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಹೊಸನಗರ ಪೊಲೀಸರು ಶೀಘ್ರವೇ ಬಯಲಿಗೆಳೆದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಲೂಕಿನ ಕಸಬಾ ಹೋಬಳಿಯ ಅರಳಿಕೊಪ್ಪ ಗ್ರಾಮದ ಸುಮನ್, ಸಂತೋಷ್ ಮತ್ತು ನಾರಾಯಣ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಅಂಬೇಡ್ಕರ್ ಕಾಲೋನಿ ಹಾಗೂ ಭೂವಿ ಕಾಲೋನಿ ನಿವಾಸಿಗಳಾಗಿದ್ದಾರೆ.

ತಾಲೂಕಿನ ಕಸಬಾ ಹೋಬಳಿಯ ಮಸಗಲ್ಲಿ ಗ್ರಾಮದ ಸರ್ವೆ ನಂ.16ರಲ್ಲಿ ಇರುವ ತೋಟದ ಬಾವಿಗೆ ಅಳವಡಿಸಲಾಗಿದ್ದ 2 ಹೆಚ್‌ಪಿ ಬೋರ್‌ವೆಲ್ ಮೋಟಾರ್ ಹಾಗೂ ಕೆರೆಗೆ ಅಳವಡಿಸಿದ್ದ 3 ಹೆಚ್‌ಪಿ ಸಬ್‌ಮರ್ಸಿಬಲ್ ಮೋಟಾರ್ ಕಳ್ಳತನವಾಗಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೊಸನಗರ ಪೊಲೀಸರು ತ್ವರಿತ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸನಗರ ಪೊಲೀಸ್ ವೃತ್ತ ನಿರೀಕ್ಷಕ ಗೌಡಪ್ಪಗೌಡ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಮಾಯಪ್ಪ ಗೋಕಾವಿ ಮತ್ತು ಸಂದೀಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.