Headlines

ಪೋಷಕರು ಭೇದ ಭಾವ ಮಾಡುತಿದ್ದಾರೆ ಎಂದು ತುಂಗ ನದಿಗೆ ಹಾರಲು ಯತ್ನಿಸಿದ ಬಾಲಕ –  ಇಆರ್‌ಎಸ್ ಪೊಲೀಸರಿಂದ ರಕ್ಷಣೆ

ಪೋಷಕರು ಭೇದ ಭಾವ ಮಾಡುತಿದ್ದಾರೆ ಎಂದು ತುಂಗ ನದಿಗೆ ಹಾರಲು ಯತ್ನಿಸಿದ ಬಾಲಕ –  ಇಆರ್‌ಎಸ್ ಪೊಲೀಸರಿಂದ ರಕ್ಷಣೆ

A 16-year-old boy in Shivamogga attempted to jump into the Tunga River due to family issues but was rescued in time by ERSS police personnel during night patrol.

ಶಿವಮೊಗ್ಗ: ತಂದೆ-ತಾಯಿಗಳು ತಮ್ಮ ಮೇಲೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಮನೋಭಾವದಿಂದ 16 ವರ್ಷದ ಬಾಲಕನೊಬ್ಬ ತುಂಗ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಮಯೋಚಿತ ಕ್ರಮ ಕೈಗೊಂಡ ಇಆರ್‌ಎಸ್ (ERSS) ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಬಾಲಕನ ಜೀವ ಉಳಿದಿದೆ.

ನಗರದ ಊರಗಡೂರಿನ ನಿವಾಸಿಯಾದ ಬಾಲಕನು ಕುಟುಂಬದಲ್ಲಿ ತಂದೆ-ತಾಯಿಗಳು ಅಣ್ಣ-ತಮ್ಮಂದಿರ ನಡುವೆ ಬೇಧಭಾವ ತೋರಿಸುತ್ತಿದ್ದಾರೆಂದು ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದನು ಎಂದು ತಿಳಿದುಬಂದಿದೆ.

ಮಾರ್ಚ್ 27ರಂದು ರಾತ್ರಿ ಗಸ್ತಿನಲ್ಲಿ ತೊಡಗಿದ್ದ ERSS ವಾಹನದ ಸಿಬ್ಬಂದಿಗೆ ಸಾರ್ವಜನಿಕರಿಂದ ಮಾಹಿತಿ ಲಭಿಸಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ERV ರೆಸ್ಪಾಂಡರ್ ಶಬ್ಬಿರ್ ಬೇಗ್ (ಸಿ.ಹೆಚ್.ಸಿ, ತುಂಗಾನಗರ ಪೊಲೀಸ್ ಠಾಣೆ) ಹಾಗೂ ಚಾಲಕ ಮಂಜುನಾಥ್ (ಎ.ಹೆಚ್.ಸಿ, ಡಿಎಆರ್, ಶಿವಮೊಗ್ಗ) ಅವರು ಸಾರ್ವಜನಿಕರ ಸಹಕಾರದೊಂದಿಗೆ ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದರು.

ನಂತರ ಬಾಲಕನಿಗೆ ಸಮಾಧಾನ ಹೇಳಿ, ಇಂತಹ ತುರ್ತು ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಮನವೊಲಿಸಿದರು. ಬಳಿಕ ಪೋಷಕರನ್ನು ಕರೆಸಿ, ಬಾಲಕನನ್ನು ಅವರ ಜವಾಬ್ದಾರಿಯಲ್ಲಿ ಮನೆಗೆ ಕಳುಹಿಸಲಾಯಿತು.

ಈ ಘಟನೆಗೆ ಸಂಬಂಧಿಸಿದಂತೆ ಇಆರ್‌ಎಸ್ ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

About The Author