w
Headlines
Home » ಪೂಜಾಗೌಡ ಎಂಬ ಹೆಸರಿನಲ್ಲಿ ಜಾಲ – ಶಿವಮೊಗ್ಗದ ವ್ಯಕ್ತಿಗೆ ₹53 ಲಕ್ಷ ಆನ್‌ಲೈನ್ ವಂಚನೆ

ಪೂಜಾಗೌಡ ಎಂಬ ಹೆಸರಿನಲ್ಲಿ ಜಾಲ – ಶಿವಮೊಗ್ಗದ ವ್ಯಕ್ತಿಗೆ ₹53 ಲಕ್ಷ ಆನ್‌ಲೈನ್ ವಂಚನೆ

GridArt 20260205

An online fraudster posing as a social media contact cheated a Shivamogga salesman of ₹53 lakh by luring him with fake online store profits.

ಪೂಜಾಗೌಡ ಎಂಬ ಹೆಸರಿನಲ್ಲಿ ಜಾಲ – ಶಿವಮೊಗ್ಗದ ವ್ಯಕ್ತಿಗೆ ₹53 ಲಕ್ಷ ಆನ್‌ಲೈನ್ ವಂಚನೆ

ಶಿವಮೊಗ್ಗ: ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ಹೆಚ್ಚಿನ ಲಾಭದ ಆಮಿಷವೊಡ್ಡಿದ ಆನ್‌ಲೈನ್ ವಂಚಕರು, ನಗರದ ಸೇಲ್ಸ್‌ಮನ್ ಒಬ್ಬರಿಂದ ಸುಮಾರು ₹52,93,646 ಹಣ ಪಡೆದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಪೂಜಾ ಗೌಡ ಎಂಬ ಹೆಸರಿನಲ್ಲಿ ಸಂಪರ್ಕಿಸಿದ ಆರೋಪಿಗಳು, ವೆಬ್ ಲಿಂಕ್ ಕಳುಹಿಸಿ ಅದನ್ನು ತೆರೆಯುವಂತೆ ಮಾಡಿ ಆನ್‌ಲೈನ್ ಸ್ಟೋರ್ ತೆರೆಯಿಸಿದ್ದರು. ವಸ್ತುಗಳನ್ನು ಆರ್ಡರ್ ಮಾಡಿ ಪಿಕಪ್ ಮಾಡುವ ಕೆಲಸ ನೀಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿದರು. ಈ ನಂಬಿಕೆಯ ಮೇರೆಗೆ ಸೇಲ್ಸ್‌ಮನ್ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಹೂಡಿದ ಹಣಕ್ಕೆ ಲಾಭ ಬಂದಂತೆ ತೋರಿಸಿ ವಿಶ್ವಾಸ ಗಳಿಸಿದ್ದರು.

ನಂತರ ಹಣ ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ತಾಂತ್ರಿಕ ಕಾರಣಗಳನ್ನು ಹೇಳಿ ತಡೆಹಿಡಿದ ಆರೋಪಿಗಳು, ತೆರಿಗೆ ಹಾಗೂ ಪೆನಾಲ್ಟಿ ಹೆಸರಿನಲ್ಲಿ ಮತ್ತಷ್ಟು ಹಣ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪವಿದೆ.

ಹಣ ವಾಪಸ್ ಬರಲಿದೆ ಎಂದು ನಿರೀಕ್ಷಿಸಿದ್ದ ಸೇಲ್ಸ್‌ಮನ್‌ಗೆ ದೀರ್ಘ ಕಾಲ ಹಣ ಸಿಗದ ಕಾರಣ ತಾನು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.

ಈ ಕುರಿತು ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.