w
Headlines
Home » ನಾಡಬಂದೂಕು ರಹಸ್ಯ ಕಾರ್ಖಾನೆ ಮೇಲೆ ಪೊಲೀಸ್ ದಾಳಿ: 7 ಬಂದೂಕು ಜಪ್ತಿ, 67 ವರ್ಷದ ಆರೋಪಿಯ ಬಂಧನ

ನಾಡಬಂದೂಕು ರಹಸ್ಯ ಕಾರ್ಖಾನೆ ಮೇಲೆ ಪೊಲೀಸ್ ದಾಳಿ: 7 ಬಂದೂಕು ಜಪ್ತಿ, 67 ವರ್ಷದ ಆರೋಪಿಯ ಬಂಧನ

GridArt 20260205

A secret illegal gun unit operating from an old house was busted in Shivamogga as police seized 7 country-made firearms and arrested the accused.Police in Shivamogga busted an illegal country-made gun manufacturing unit, seizing 7 firearms and arresting a 67-year-old accused.

ನಾಡಬಂದೂಕು ರಹಸ್ಯ ಕಾರ್ಖಾನೆ ಮೇಲೆ ಪೊಲೀಸ್ ದಾಳಿ: 7 ಬಂದೂಕು ಜಪ್ತಿ, 67 ವರ್ಷದ ಆರೋಪಿಯ ಬಂಧನ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡಬಂದೂಕು ತಯಾರಿಸಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಪ್ರಕರಣವನ್ನು ಶಿಕಾರಿಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಗುಪ್ತ ಮಾಹಿತಿಯ ಮೇರೆಗೆ ನಡೆಸಿದ ದಾಳಿಯಲ್ಲಿ ಸಿಂಗಲ್ ಬ್ಯಾರಲ್‌ನ 7 ನಾಡಬಂದೂಕುಗಳು ಹಾಗೂ ಬಂದೂಕು ತಯಾರಿಕೆಗೆ ಬಳಸುತ್ತಿದ್ದ ಉಪಕರಣಗಳು ಮತ್ತು ಇತರೆ ಸಂಬಂಧಿತ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಭದ್ರಾಪುರ ಗ್ರಾಮದ 3ನೇ ಕ್ರಾಸ್ ನಿವಾಸಿ, ಕಾರ್ಪೆಂಟರ್ ವೃತ್ತಿಯ ಲಕ್ಷ್ಮಣಪ್ಪ ಬಿನ್ ಮಲ್ಲಪ್ಪ (67) ಎಂಬ ವ್ಯಕ್ತಿಯನ್ನು ಪ್ರಮುಖ ಆರೋಪಿ ಎಂದು ಗುರುತಿಸಿ ಬಂಧಿಸಲಾಗಿದೆ. ಆರೋಪಿ ತನ್ನ ಹಳೆಯ ಮನೆಯನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿ, ನಾಡಬಂದೂಕುಗಳನ್ನು ತಯಾರಿಸಿ ವಿವಿಧ ವ್ಯಕ್ತಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬಂದೂಕುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ, ಶಿಕಾರಿಪುರ ಪಟ್ಟಣ ಪೊಲೀಸರು ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿದರು. ದಾಳಿಯ ವೇಳೆ ಮನೆಯಲ್ಲಿ ಬಚ್ಚಿಟ್ಟಿದ್ದ ನಾಡಬಂದೂಕುಗಳು ಪತ್ತೆಯಾಗಿದ್ದು, ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ತಯಾರಿಸಿ ಇಟ್ಟುಕೊಂಡಿರುವುದು ದೃಢಪಟ್ಟಿದೆ.

ಈ ಸಂಬಂಧ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 22/2026 ದಾಖಲಿಸಲಾಗಿದ್ದು, ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ 2019ರ ಕಲಂ 25(1)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಯು ಇತರರಿಗೆ ಬಂದೂಕುಗಳನ್ನು ಪೂರೈಸಿದ ಬಗ್ಗೆ ಹಾಗೂ ಈ ಅಕ್ರಮ ಜಾಲದಲ್ಲಿ ಇನ್ನಿತರರು ಭಾಗಿಯಾಗಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದಾಳಿಯ ಕಾರ್ಯಾಚರಣೆಯಲ್ಲಿ ಡಿಎಸ್ಪಿ ಕೇಶವ ಕೆ.ಇ., ಸಿಪಿಐ ಸಂತೋಷ್ ಎಂ. ಪಾಟೀಲ್, ಎಸ್‌ಐ ಶರತ್ ಹೆಚ್.ಪಿ. ಸೇರಿದಂತೆ ಸಿಬ್ಬಂದಿಗಳಾದ ಕೊಟ್ರೇಶಪ್ಪ, ಪ್ರದೀಪ್ ಕೆ., ನಾಗರಾಜ, ರವಿ ನಾಯ್ಕ ಮತ್ತು ರವಿಕುಮಾರ್ ಭಾಗವಹಿಸಿದ್ದರು.

ಈ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಅವರು ಪ್ರಶಂಸಿಸಿ, ಸಾರ್ವಜನಿಕ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.