Headlines

ಕಾರ್ಗಿಲ್ ವಿಜಯ ದಿವಸ ಆಚರಣೆ: ಹುತಾತ್ಮ ಯೋಧರಿಗೆ ಗೌರವ

ಕಾರ್ಗಿಲ್ ವಿಜಯ ದಿವಸ ಆಚರಣೆ: ಹುತಾತ್ಮ ಯೋಧರಿಗೆ ಗೌರವ

ರಿಪ್ಪನ್ ಪೇಟೆ : ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪಟ್ಟಣದ ಹಿಂದೂ ಸಂಘಟನೆಗಳ ವತಿಯಿಂದ ವಿನಾಯಕ ವೃತ್ತದಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡ ದೇವರಾಜ್ ಕೆರೆಹಳ್ಳಿ ಕಾರ್ಗಿಲ್ ವಿಜಯೋತ್ಸವವು ಇಡೀ ಭಾರತೀಯರಿಗೆ ಹೆಮ್ಮೆಯ ದಿನವೂ ಹೌದು. ಅದರ ಜೊತೆಗೆ ವೀರಯೋಧರನ್ನು ಕಳೆದುಕೊಂಡ ನೋವೂ ಇದೆ. ಈ ಯುದ್ಧದಲ್ಲಿ ಸೌರಭ್ ಕಾಲಿಯಾ, ವಿಕ್ರಮ್ ಭಾತ್ರ, ಜಸ್ವಿಂದರ್ ಸಿಂಗ್, ಮನೋಜ್ ಕುಮಾರ್ ಪಾಂಡೆಯರಂತಹ 527 ವೀರಕಲಿಗಳನ್ನು ಕಳೆದುಕೊಂಡಿದ್ದೇವೆ. ಈ ದಿನ ಅಂತಹ ಎಲ್ಲಾ ವೀರ ಯೋಧರ ಧೈರ್ಯವನ್ನು, ಅವರ ಕುಟುಂಬಗಳ ತ್ಯಾಗವನ್ನು ಪ್ರತಿಯೊಬ್ಬರೂ ನೆನಪು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರಸೇನಾ ಅಧ್ಯಕ್ಷ ಸುಧೀರ್ ಪಿ , ಕಾರ್ಯದರ್ಶಿ ಮುರುಳಿ ಕೆರೆಹಳ್ಳಿ ,ಆರ್ ಎಸ್ ಎಸ್ ತಾಲೂಕ್  ಸಹ ಕಾರ್ಯನಿರ್ವಾಹಕ ಕಾರ್ತಿಕ್ ,ಪ್ರಮುಖರಾದ ಮೆಣಸೆ ಆನಂದ್ , ಸುಂದರೇಶ್ ಕೆರೆಹಳ್ಳಿ , ಪದ್ಮಾ ಸುರೇಶ್ , ನಾಗರತ್ನ ದೇವರಾಜ್ , ರಾಘವೇಂದ್ರ, ಸಂಜಯ್. ಮಂಜುನಾಥ್ , ಲೋಹಿತ್ , ಗಣೇಶ್ ,ಉದಯ್ , ಶಶಿಧರ್ ,ಫ್ಯಾನ್ಸಿ ರಮೇಶ್ ,  ಮಹಮ್ಮದ್ ಹುಸೇನ್,  ರೇಖಾ ರವಿ, ನಾಗರತ್ನ ದೇವರಾಜ್. ಹಾಗು ಇನ್ನೂ ಹಲವಾರು ದೇಶಪ್ರೇಮಿಗಳು ಭಾಗಿಯಾಗಿ ಪುಷ್ಪ ನಮನವನ್ನು ಸಲ್ಲಿಸಿದರು.