w
Headlines
Home » ಯುವ ವಿಜ್ಞಾನಿ ಸ್ಪರ್ಧೆ, ಮಿಶಾ ಹೆಗ್ಡೆ ಕಂದಾವರ ಪ್ರಥಮ

ಯುವ ವಿಜ್ಞಾನಿ ಸ್ಪರ್ಧೆ, ಮಿಶಾ ಹೆಗ್ಡೆ ಕಂದಾವರ ಪ್ರಥಮ

GridArt 20250613

ಯುವ ವಿಜ್ಞಾನಿ ಸ್ಪರ್ಧೆ, ಮಿಶಾ ಹೆಗ್ಡೆ ಕಂದಾವರ ಪ್ರಥಮ

ಶಿವಮೊಗ್ಗ, ಜೂ.೧೩ : ಜರ್ಮನಿಯ ಯುವ ವಿಜ್ಞಾನಿ ಸ್ಪರ್ಧೆಯ ಜೀವಶಾಸ್ತ್ರ ವಿಭಾಗದಲ್ಲಿ ಹೆಬ್ರಿ ಬಳಿಯ ಮುದ್ರಾಡಿ ಮಂಜುನಾಥ್ ಪ್ರಸಾದ್ ಹೆಗ್ಡೆ ಮತ್ತು ಮೀಲೀ ದಂಪತಿಯ ಪುತ್ರಿ ಮಿಶಾ ಹೆಗ್ಡೆ ಕಂದಾವರ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಿಶಾ ಹೆಗ್ಡೆ ಕಂದಾವರ ಸಂಶೋಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಹಲವು ಪ್ರಸಿದ್ಧ ಸಂಶೋಧನಾ ಸಂಸ್ಥೆಗಳ ಬೆಂಬಲದಿಂದ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಕೃಷಿಯಲ್ಲಿ ಸಸ್ಯಗಳಿಗೆ ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಗಳ ಗೊಬ್ಬರದ ಮಣ್ಣಿನಿಂದ ಪ್ರತ್ಯೇಕಿಸಿ ಹೊಸ ವೈರಸನ್ನು ಪರಿಸರ ಸ್ನೇಹಿ ರೀತಿಯಲ್ಲಿ ಬಳಸಿ ಬೆಳೆಗಳನ್ನು ಹೇಗೆ ರಕ್ಷಿಸಬಹುದು ಎಂಬುದರ ಸಂಶೋಧನೆ ಈ ಮಾನ್ಯತೆ ಸಿಕ್ಕಿದ್ದು ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಯೂರೋಪಿಯನ್ ಕಂಟೆಸ್ಟ್ ಫಾರ್ ಯಂಗ್ ಸೈಂಟಿಸ್ಟ್ ಸ್ಪರ್ಧೆ ಗೂ ಮಿಶಾ ಹೆಗ್ಡೆ ಕಂದಾವರ ಆಯ್ಕೆ ಯಾಗಿದ್ದಾರೆ.

ಮಿಶಾ ಹೆಗ್ಡೆ ಕಂದಾವರ ಶಿವಮೊಗ್ಗದ ಡಿ.ಕೆ.ಎಸ್. ಹೆಗ್ಡೆ ಮತ್ತು ಮಮತಾ ಹೆಗ್ಡೆ ರವರ ಮೊಮ್ಮಗಳಾಗಿದ್ದಾಳೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.