POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಬಂಕಾಪುರದಲ್ಲಿ ಮಹಾರಾಣಾ ಪ್ರತಾಪ್ ಸಿಂಹ ಜಯಂತ್ಯೋತ್ಸವ

IMG 20250602 WA0005

ಬಂಕಾಪುರದಲ್ಲಿ ಮಹಾರಾಣಾ ಪ್ರತಾಪ್ ಸಿಂಹ ಜಯಂತ್ಯೋತ್ಸವ

ಬಂಕಾಪುರ : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಕನೋಜಗಲ್ಲಿಯ ಈಶ್ವರ್ ದೇವಸ್ಥಾನದಲ್ಲಿ ನಡೆದ ಮಹಾರಾಣಾ ಪ್ರತಾಪ್ ಸಿಂಹ ಅವರ ಜಯಂತೋತ್ಸವಕ್ಕೆ ಪುರಸಭೆ ಸದಸ್ಯ ರಾಜೇಂದ್ರ ಟೋಪಣ್ಣವರ್ ಚಾಲನೆ ನೀಡಿದರು.

ಭಾರತೀಯ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಆಡಳಿತಗಾರರಲ್ಲಿ ಮಹಾರಾಣಾ ಪ್ರತಾಪ್ ಸಿಂಹ ಅವರು ಒಬ್ಬರಾಗಿದ್ದರು. ಎಂದು ಪುರಸಭೆ ಸದಸ್ಯ ರಾಜೇಂದ್ರ ಟೋಪಣ್ಣವರು ಹೇಳಿದರು. ಪ್ರತಾಪ್ ಸಿಂಹ ಅವರು ಅಪ್ರತಿಮ ದೇಶಭಕ್ತರಾಗಿ ಮೊಘಲ್ ಸಾಮ್ರಾಜ್ಯದ ಅಕ್ಬರ್ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ರಜಪೂತ್ ವಂಶದ ಕೆಚ್ಚೆದೆಯ ಕುಡಿಯಾಗಿದ್ದರು. ಅವರ ಧೈರ್ಯ, ತ್ಯಾಗ,ದೇಶಭಕ್ತಿ ಭಾರತೀಯ  ಯುವ ಸಮೂಹಕ್ಕೆ ಸ್ಫೂರ್ತಿದಾಯಕವಾಗಿದ್ದು. ಅವರ ಮಾತೃಭೂಮಿ ಮೇಲಿರುವ ನಿಷ್ಠೆಗೆ, ಹಳದಿ ಘಾಟ್ ಕದನವೇ ಸಾಕ್ಷಿಯಾಗಿ ನಿಂತಿದೆ. ಅವರ ಭಾವಚಿತ್ರ ನೋಡಿದರೆ ಯುವಕರ ಮೈಮನ ಇಂದಿಗೂ ರೋಮಾಂಚನವಾಗುತ್ತದೆ ಎಂದು ಹೇಳಿದರು.

ಹರೀಶ ಸಿಂಗ್ ಭವಾನಿ ಸಭೆಯ ಅಧ್ಯಕ್ಷತೆ ವಹಿಸಿದರು, ಮಾಜಿ ಪುರಸಭೆ ಸದಸ್ಯ ಮಾಲತೇಶ್ ಬಾಬುಸಿಂಗನವರ್, ರತನ್ ಟೋಪಣ್ಣವರ್, ನಾರಾಯಣಸಿಂಗ್ ಬಾಬುಸಿಂಗನವರ್, ನಾರಾಯಣ ಸಿಂಗ್ ದೊಡ್ಡಮನಿ, ರಾಘುಸಿಂಗ್ ಬಾಬುಸಿಂಗನವರ್, ಧರ್ಮಸಿಂಗ್ ಡಂಬಳ್, ಭರತಸಿಂಗ್ ಚೌವ್ಹಿ, ಅರ್ಜುನ್ ಸಿದ್ದಪ್ಪನವರ್, ದುರ್ಗಾ ಸಿಂಗ್ ಕಲಘಟಗಿ, ನೇತಾಜಿ ಜಾದವ್, ನಾಗರಾಜ್ ಶಿವಪ್ಪನವರ್, ಪವನ್ ಸಿಂಗ್ ತೆರಸನ್ನವರ್ ಮುಂತಾದ ಉಪಸ್ಥಿತರಿದ್ದರು.  

ವರದಿ   :  ನಿಂಗರಾಜ ಕುಡಲ್ ಹಾವೇರಿ ಜಿಲ್ಲೆ ಬಂಕಾಪುರ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.