POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಬಂಕಾಪುರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಸೋಮಣ್ಣ ಕುರಿ ನೇಮಕ – ಶಾಸಕರಿಂದ ಅಭಿನಂದನೆ

IMG 20250602 WA0004

ಬಂಕಾಪುರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಸೋಮಣ್ಣ ಕುರಿ ನೇಮಕ – ಶಾಸಕರಿಂದ ಅಭಿನಂದನೆ

ಬಂಕಾಪುರ  : ಹಾವೇರಿ ಜಿಲ್ಲೆಯ ಶಿಗ್ಗಾವಿ ಸವಣೂರ ಶಾಸಕ ಅವರ  ಯಾಸಿರ್ ಖಾನ್ ಪಠಾಣ್ ಅವರ ಸೂಚನೆ ಮೇರೆಗೆ ಕಾಂಗ್ರೆಸ್ ಪಕ್ಷದ ಬಂಕಾಪುರ ಶಹರ ಘಟಕದ ಅಧ್ಯಕ್ಷರಾಗಿ ಪುರಸಭೆ ನಾಮ ನಿರ್ದೇಶನ ಸದಸ್ಯ ಸೋಮಣ್ಣಾ ಕುರಿ ಅವರನ್ನು ನೇಮಕ ಮಾಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಕುಮಾರ್ ನೀರಲಗಿ ಭಾನುವಾರ ಆದೇಶ ಹೋರಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೊಡೆಸಿಕೊಳ್ಳಬೇಕು ಮತ್ತು ಬರುವ ಪಡೆದು, ಪಕ್ಷದ ಸಂಘಟನೆಯಲ್ಲಿ ಸಂಘ,ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

ನೂತನ ಅಧ್ಯಕ್ಷ ಸೋಮಣ್ಣ ಕುರಿ ಅವರನ್ನು ಶಿಗ್ಗಾವಿಯಲ್ಲಿ ಸನ್ಮಾನಿಸಿದ  ಯಾಸಿರಖಾನ್ ಪಠಾಣ್ ಪಕ್ಷದ ತತ್ವ, ಸಿದ್ಧಾಂತದಡಿ ಸಂಘಟನೆಯ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಪಕ್ಷದ ಮುಖಂಡರು ಅಧ್ಯಕ್ಷರನ್ನು ಸನ್ಮಾನಿಸಿದರು .

ಮುಖಂಡರಾದ ಎಸ್. ಎಪ್ ಮಣಕಟ್ಟಿ, ಸುಧೀರ್ ಲಮಾಣಿ, ಮಾಲತೇಶ್ ಸಾಲಿ, ಯಲ್ಲಪ್ಪ ನರಗುಂದ ಮುಂತಾದ ಉಪಸ್ಥಿತರಿದ್ದರು.

ವರದಿ  :  ನಿಂಗರಾಜ್ ಕುಡಲ್ ಹಾವೇರಿ ಜಿಲ್ಲೆ ಬಂಕಾಪುರ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.