ಮಾವ- ಅಳಿಯನ ನಡುವಿನ ಜಗಳ ಕೊ*ಲೆಯಲ್ಲಿ ಅಂತ್ಯ
ಶಿವಮೊಗ್ಗ: ಮಾವ- ಅಳಿಯನ ನಡುವಿನ ಜಗಳ ಅಳಿಯನ ಕೊ*ಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಗುರುವಾರ (ಜೂ.05) ಸಂಜೆ ನಡೆದಿದೆ.
ರವೀಂದ್ರ (26) ಕೊಲೆಯಾದ ದುರ್ದೈವಿ. ಸೊರಬ ತಾಲೂಕಿನ ಆನವಟ್ಟಿ ಬಳಿಯ ಜಡೆ ಗ್ರಾಮದಲ್ಲಿ ಘಟನೆ ನಡೆದಿದೆ.
ಗುರುವಾರ ಸಂಜೆ ಮಾವ ಉಮೇಶ್ ಹಾಗೂ ಅಳಿಯ ರವೀಂದ್ರ ಒಟ್ಟಾಗಿ ಎಂಸ್‌ಐಎಲ್ ಮಳಿಗೆಗೆ ಹೋಗಿದ್ದರು. ಬಳಿಕ ಹೋಟೆಲ್ ಗೆ ಊಟಕ್ಕೆ ತೆರಳಿದ್ದರು. ಊಟ ಮಾಡುವಾಗ ಮಾತಿಗೆ ಮಾತು ಬೆಳೆದು ಮಾವ- ಅಳಿಯನ ನಡುವೆ ಗಲಾಟೆಯಾಗಿದೆ. ಈ ವೇಳೆ ಹೋಟೆಲ್ ನಲ್ಲಿದ್ದ ಕತ್ತರಿ ತೆಗೆದು ಉಮೇಶ್ ಅಳಿಯ ರವೀಂದ್ರಗೆ ಚುಚ್ಚಿದ್ದಾನೆ.
ಸ್ಥಳೀಯರು ತಕ್ಷಣವೇ ರವೀಂದ್ರನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ರವೀಂದ್ರ ಶುಕ್ರವಾರ ಬೆಳಿಗ್ಗೆ ಅಸುನೀಗಿದ್ದಾನೆ.ಕೊಲೆ ಆರೋಪಿ ಉಮೇಶ್ (46) ನನ್ನು ಆನವಟ್ಟಿ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.