ಹಂದಿ ಅಣ್ಣಿ ಕೊಲೆ ಪ್ರಕರಣ – ಕಾಡಾ ಕಾರ್ತಿಕ್ ಸೇರಿದಂತೆ ಏಳು ಆರೋಪಿಗಳು ಖುಲಾಸೆ | ಸಾಕ್ಷ್ಯಾಧಾರ ಕೊರತೆಯಿಂದ ಕೇಸ್ ಕ್ಲೋಸ್
ಶಿವಮೊಗ್ಗ :ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೊಲೆ ಪ್ರಕರಣವನ್ನ ಖುಲಾಸೆಗೊಳಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆಯಲ್ಲಿ 7 ಜನ ಆರೋಪಿಗಳ ವಿರುದ್ಧದ ಕೊಲೆ ಆರೋಪ ಮುಕ್ತ ಗೊಂಡಿದೆ.
ಕಾಡಾ ಕಾರ್ತಿಕ್, ನಿತಿನ್ ಯಾನೆ ಭಜರಂಗಿ, ಮದನ್ ರಾಜ್, ಯಾನೆ ಮದನ್ ರಾಯ್, ಚಂದನ್ ಯಾನೆ ಚಾರ್ಲಿ, ಫಾರುಕ್ ಯಾನೆ ಯಾನೆ ಉಮ್ಮರ್, ಮಧುಸೂಧನ್, ಅಲಿಯಾಸ್ ಅಲಿಯಾಸ್ ಕರಿಯಾ, ಮಧು ಮತ್ತು ಆಂಜನೇಯ ಎಂಬುವರು ಹಂದಿ ಅಣ್ಣಿಯ ಕೊಲೆ ಆರೋಪಿಗಳಾಗಿದ್ದಾರೆ. ಮಧು ಈ ಪ್ರಕರಣ ನಡೆಯುವಾಗಲೆ ಕೊಲೆಯಾಗಿದ್ದನು. 2024ರಲ್ಲಿ ಹೊನ್ನಾಳಿ ತಾಲೂಕಿನಲ್ಲಿ ಕೊಲೆ ಮಾಡಲಾಗಿತ್ತು. ಉಳಿದ ಏಳು ಜನರ ವಿರುದ್ಧ ಕೊಲೆ ಆರೋಪದ ತೂಗುಗತ್ತಿಯಿಂದ ತಪ್ಪಿಸಿಕೊಂಡಿದ್ದಾರೆ. ಕೊಲೆಗೆ ಸಾಕ್ಷಿ ಇಲ್ಲದ ಕಾರಣ ಪ್ರಕರಣ ಖುಲಾಸೆಯಾಗಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗದಲ್ಲಿ 2024 ಜುಲೈ 14 ರಂದು ಹೊನ್ನಪ್ಪ ಯಾನೆ ಹಂದಿ ಅಣ್ಣಿಯ ಕೊಲೆಯಾಗುತ್ತಿದ್ದಂತೆ ಕಾಡ ಕಾರ್ತಿಕ್ ಮತ್ತು ಆತನ ಗ್ಯಾಂಗ್ ಚಿಕ್ಕಮಗಳೂರಿನಲ್ಲಿ ಪೊಲೀಸರ ಬಳಿ ಸರೆಂಡರ್ ಆಗಿದ್ದರು. ಅವರನ್ನ ಶಿವಮೊಗ್ಗಕ್ಕೆ ತಂದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಕೋರ್ಟ್ ಕಲಾಪದ ನಡುವೆ 2024 ರಲ್ಲಿ ಮಧು ಎಂಬಾತನನ್ನ ಕೊಲೆ ಮಾಡಲಾಗಿತ್ತು. ಇದಾದ ನಂತರ ಮಾ.17 ರಂದು ಕೊಲೆ ಆರೋಪಿಗಳ ಮೇಲೆ ದಾಳಿ ನಡೆಸಲು ಯತ್ನಿಸಿ ಮೂವರು ಬಂಧಿತರಾಗಿದ್ದರು. ವಿನೋಬ ನಗರದ ಮಲ್ಲೇಶ್, ಕಾಶೀಪುರದ ರಾಕೇಶ್, ಮೇದಾರಕೇರಿಯ ಗುರುಮೂರ್ತಿ, ಹಾಗೂ ವಿನಯ್ ಎಂ ಎಂಬಾತನನ್ನ ಬಂಧಿಸಿ ಜಯನಗರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು.
ಚಂದನ್, ಫಾರೂಕ್, ಮದನ್ ರಾಜ್, ಮಧುಸೂದನ್ ಮತ್ತು ಮದು ಎಂಬ ಐವರು ಹಾಜರಾಗಬೇಕಿತ್ತು. ನಂಬರ್ ಪ್ಲೇಟ್ ಇಲ್ಲದ ಡಿಯೋ ಗಾಡಿ ತಂದು ಕೋರ್ಟ್ ನಲ್ಲಿ ನುಗ್ಗಿಸಿ ಐವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಅಡ್ಡಗಟ್ಟಿದ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಮಾರಕಾಸ್ತ್ರಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ. ಗುರುಮೂರ್ತಿ ಬಳಿ 9.6 ಫೊಲ್ಡಿಂಗ್ ಚಾಕು ಪತ್ತೆಯಾಗಿತ್ತು.
ಇದಾದ ನಂತರ ಮೇ.2 ರಂದು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

- ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್