w
Headlines
Home » ರಿಪ್ಪನ್‌ಪೇಟೆ ಸರ್ಕಾರಿ ಪ್ರೌಡಶಾಲೆಗೆ 71% ಫಲಿತಾಂಶ

ರಿಪ್ಪನ್‌ಪೇಟೆ ಸರ್ಕಾರಿ ಪ್ರೌಡಶಾಲೆಗೆ 71% ಫಲಿತಾಂಶ

GridArt 20250502 184433510.jpg

ರಿಪ್ಪನ್‌ಪೇಟೆ ಸರ್ಕಾರಿ ಪ್ರೌಡಶಾಲೆಗೆ 71% ಫಲಿತಾಂಶ

ರಿಪ್ಪನ್‌ಪೇಟೆ : ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಗೆ ಶೇ. 71% ರಷ್ಟು ಫಲಿತಾಂಶ ಬಂದಿದೆ.

ಶಾಲೆಯ ವಿದ್ಯಾರ್ಥಿನಿ ಚೈತನ್ಯಾ ಎಂ ಆರ್ 625ಕ್ಕೆ 610 ಅಂಕವನ್ನು ಪಡೆದಿರುತ್ತಾಳೆ.ಸುಹಾಸ್ ಕೆ 625ಕ್ಕೆ 609 ಮತ್ತು ಪ್ರೀತಮ್ ಸಿಂಗ್ 625 ಕ್ಕೆ 590 ಅಂಕ ಪಡೆದಿರುತ್ತಾನೆ

207 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 146 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ.

——————————————————-

ಶ್ರೀಬಸವೇಶ್ವರ ಆಂಗ್ಲಮಾಧ್ಯಮ ಶಾಲೆ ಶೇ. 92 ಫಲಿತಾಂಶ

ರಿಪ್ಪನ್‌ಪೇಟೆ :  ಇಲ್ಲಿನ ಶ್ರೀಬಸವೇಶ್ವರ ಅಂಗ್ಲಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ. 92 ರಷ್ಟು ಫಲಿತಾಂಶಗಳಿಸಿದೆ ಎಂದು ಮುಖ್ಯೋಪಾಧ್ಯಾಯ ಚಂದ್ರಪ್ಪ ತಿಳಿಸಿದರು.

ಬಸವೇಶ್ವರ ಶಾಲೆಯ ವಿದ್ಯಾರ್ಥಿನಿ ಪ್ರಕೃತಿ 625 ಕ್ಕೆ554  ಅಂಕ ಗಳಿಸಿದ್ದಾಳೆ.

ಒಟ್ಟು 36 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 33 ವಿದ್ಯಾರ್ಥಿಗಳು ಉತ್ತಿರ್ಣಾರಾಗಿದ್ದಾರೆ. ಅತ್ಯುನ್ನತ ಶ್ರೇಣಿ 06, ಪ್ರಥಮ ಸ್ಥಾನದಲ್ಲಿ 18, ದ್ವಿತೀಯ ಸ್ಥಾನ 9 ಮತ್ತು ತೃತೀಯ ಸ್ಥಾನದಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

—————————————————-

ಬೆಳ್ಳೂರು ಸರ್ಕಾರಿ ಪ್ರೌಢಶಾಲೆ 89% ರಷ್ಟು ಫಲಿತಾಂಶ

ರಿಪ್ಪನ್‌ಪೇಟೆ : ಇಲ್ಲಿನ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 89 ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾಗಿದ್ದ 37 ವಿದ್ಯಾರ್ಥಿಗಳಳ್ಲಿ 33 ವಿದ್ಯಾರ್ಥಿಗಳು   ಉತ್ತೀರ್ಣರಾಗಿದ್ದಾರೆ.

SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಅಭಿನಂದನೆಗಳು…….

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.