Headlines

ಕಲ್ಯಾಣಮಂಟಪದಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಕಲ್ಯಾಣಮಂಟಪದಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಕಲ್ಯಾಣಮಂಟಪದಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

Gold ornaments worth Rs 5 lakh stolen from Kalyana Mantapa

Gold ornaments worth Rs 5 lakh stolen from Kalyana Mantapa

ಕಲ್ಯಾಣ ಮಂಟಪದ ಕೊಠಡಿಯಲ್ಲಿ ಇಟ್ಟಿದ್ದ ಬ್ಯಾಗ್‌ನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಶಿವಮೊಗ್ಗ ನಗರದ ಮದಾರಿಪಾಳ್ಯದ ಹೆವೆನ್‌ ಪ್ಯಾಲೆಸ್‌ ಕಲ್ಯಾಣ ಮಂಟಪದಲ್ಲಿ ಸಂಭವಿಸಿದೆ.

ಅರಸೀಕೆರೆಯ ಮೆಹಬೂಬ ಪಾಷಾ ಅವರ ಕುಟುಂಬ, ಸಂಬಂಧಿಯ ಮದುವೆಗೆ ಬಂದಿದ್ದರು. ಕಲ್ಯಾಣ ಮಂಟಪದ ಕೊಠಡಿಯಲ್ಲಿ ಬ್ಯಾಗ್‌ಗಳನ್ನು ಇರಿಸಿ, ಸಭಾಂಗಣಕ್ಕೆ ತೆರಳಿದ್ದರು. ರಾತ್ರಿ ಕೊಠಡಿಗೆ ಹಿಂತಿರುಗಿದಾಗ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.

ಬಂಗಾರದ ಮಾಂಗಲ್ಯ ಸರ, ಚಿನ್ನದ ಸರ ಮತ್ತು ಪೆಂಡೆಂಟ್‌, ಉಂಗುರಗಳು, ಮಕ್ಕಳ ಉಂಗುರಗಳು, ಕಿವಿ ಓಲೆಗಳು ಸೇರಿ ಒಟ್ಟು 71 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.

4.97 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *