ಮೊಬೈಲ್ ಕಿತ್ತುಕೊಂಡು ಓಡಿದ ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ 112 ಪೊಲೀಸ್
112 police nab two thieves who snatched mobile phones and ran
112 police nab two thieves who snatched mobile phones and ran away
ಮೊಬೈಲ್ ಕಿತ್ತುಕೊಂಡು ಓಡಿದ್ದ ತಾಲೂಕಿನ ಯುವಕರಿಬ್ಬರನ್ನು ನ್ಯಾಮತಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ನ್ಯಾಮತಿ ತಾಲೂಕಿನ ಕಲಬ್ಗಿರಿ ರಂಗನಾಥ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬರ ಮೊಬೈಲ್ ಕಸಿದುಕೊಂಡು ಹೋಗಿದ್ದ ಘಟನೆ ನಡೆದಿತ್ತು. ತಕ್ಷಣವೇ ಅವರು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ 112 ಪೊಲೀಸರಿಗೆ ಕರೆ ಮಾಡಿ ತಮ್ಮ ಮೊಬೈಲ್ ಕಸಿದುಕೊಂಡು ಹೋಗಿರುವ ಬಗ್ಗೆ ದೂರು ಕೊಟ್ಟಿದ್ದರು.
ವಿಷಯ ತಿಳಿದ ಪೊಲೀಸರು ಆರೋಪಿಗಳ ಜಾಡು ಹಿಡಿಯಲು ಆರಂಭಿಸಿದ್ದರು. ಟವರ್ ಲೊಕೆಷನ್ ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳಿಬ್ಬರನ್ನು ಹಿಡಿದಿದ್ದಾರೆ.
ಘಟನೆ ನಡೆದು ಕೆಲವೇ ಹೊತ್ತಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.. ಈ ಇಬ್ಬರು ಆರೋಪಿಗಳು ಶಿವಮೊಗ್ಗದ ಜಕಾತಿಕೊಪ್ಪದವರು ಎನ್ನಲಾಗಿದೆ. ಪೊಲೀಸರು ಆರೋಪಿಗಳಿಬ್ಬರ ಹಿನ್ನೆಲೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.