RIPPONPETE | 9ನೇ ಮೈಲಿಕಲ್ ಬಳಿ ಬೈಕ್ ಅಪಘಾತ – ಸವಾರನಿಗೆ ಗಾಯ

RIPPONPETE | 9ನೇ ಮೈಲಿಕಲ್ ಬಳಿ ಬೈಕ್ ಅಪಘಾತ – ಸವಾರನಿಗೆ ಗಾಯ

RIPPONPETE | 9ನೇ ಮೈಲಿಕಲ್ ಬಳಿ ಬೈಕ್ ಅಪಘಾತ – ಸವಾರನಿಗೆ ಗಾಯ
ರಿಪ್ಪನ್ ಪೇಟೆ : ಇಲ್ಲಿನ ಅರಸಾಳು ಸಮೀಪದ ಒಂಬತ್ತನೇ ಮೈಲಿಕಲ್ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತವಾಗಿ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಕುಂಸಿ ನಿವಾಸಿ ಗೋವಿಂದ್ (41) ಎಂಬಾತನಿಗೆ ಗಂಭೀರ ಗಾಯಗಳಾಗಿವೆ.
ಕಾರ್ಯನಿಮಿತ್ತ ರಿಪ್ಪನ್ ಪೇಟೆಗೆ ಬಂದಿದ್ದ ಗೋವಿಂದ್ ವಾಪಾಸು ಹೀರೋ ಹೊಂಡಾ ಸ್ಪೆಂಡರ್ (KA14 HC 1461) ಬೈಕ್ ನಲ್ಲಿ ತೆರಳುತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ. ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ಗಾಯಾಳುವನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ರಿಪ್ಪನ್ ಪೇಟೆ ಆಸ್ಪತ್ರೆಗೆ ಕರೆತಂದಿದ್ದಾರೆ.
ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಯನೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.