ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್ ಕಳ್ಳತನ ಮಾಡುತಿದ್ದ ಕಳ್ಳರ ಬಂಧನ
ಸೊರಬ: : ರೈಸ್‌ಮಿಲ್ ಆವರಣದಲ್ಲಿ ನಿಲ್ಲಿಸಿದ್ದ ೩ ಲಾರಿಗಳ ಡೀಸೆಲ್ ಟ್ಯಾಂಕ್‌ನಲ್ಲಿದ್ದ ಅಂದಾಜು ೪೫ ಸಾವಿರ ರೂ. ಮೌಲ್ಯದ ಸುಮಾರು ೪೫೦ ಲೀಟರ್ ಡಿಸೇಲ್‌ನ್ನು ಕಳ್ಳತನ ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಯುವಕರಿಬ್ಬರನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ.
ಬಂಧಿತರೆಂದರೆ ಶಿವಮೊಗ್ಗದ ಟಿಪ್ಪುನಗರ ಬಲಭಾಗ ೫ ನೇ ಕ್ರಾಸ್ ವಾಸಿ ಸೋನು (೨೬) ಮತ್ತು ಭರ್ಮಪ್ಪನಗರದ ಸೈಯದ್ ಹುಸೇನ್ ಅಲಿಯಾಸ್ ಗಫಾರ್ (೨೫). ಇವರಿಂದ ಅಂದಾಜು ಮೌಲ್ಯ ೯ ಲಕ್ಷ ರೂ. ನ ಟಾಟಾ ಇಂಟ್ರಾ ಗೂಡ್ಸ್ ವಾಹನ, ರೂ ೧೫ ಸಾವಿರ ರೂ. ನಗದು ಮತ್ತು ೩೦ ಲೀಟರ್‌ನ ೫ ಕ್ಯಾನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇ ೨೦ರ ರಾತ್ರಿ ಕಳ್ಳರು ವಿಜಯಲಕ್ಷ್ಮಿ ರೈಸ್ ಮಿಲ್ಲಿನ ಆವರಣದಲ್ಲಿದ್ದ ಲಾರಿಯಿಂದ ಡೀಸೆಲ್ ಕಳುವು ಮಾಡಿದ್ದಾರೆಂದು ಮಾಲೀಕ ಕೋಗುಣಸಿಯ ವಿಕ್ರಮ್ ಭಟ್ ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.