w
Headlines
Home » RIPPONPETE | ಬಾರ್ ಮುಂಭಾಗದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ – ಸಂಚಾರಕ್ಕೆ ಅಡೆತಡೆ

RIPPONPETE | ಬಾರ್ ಮುಂಭಾಗದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ – ಸಂಚಾರಕ್ಕೆ ಅಡೆತಡೆ

GridArt 20250526

RIPPONPETE | ಬಾರ್ ಮುಂಭಾಗದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ – ಸಂಚಾರಕ್ಕೆ ಅಡೆತಡೆ

ರಿಪ್ಪನ್ ಪೇಟೆ : ಪಟ್ಟಣದ ಸಮಗ್ರ ಅಭಿವೃದ್ದಿಯ ಚಿಂತನೆಯಲ್ಲಿ ಜನಪ್ರತಿನಿಧಿಗಳು ಕೋಟ್ಯಾಂತರ ರೂ ಅನುದಾನವನ್ನು ತಂದು ರಸ್ತೆಗಳನ್ನು ಅಗಲೀಕರಣಗೊಳಿಸುವ ಮೂಲಕ ಪಟ್ಟಣದ ವಾಹನ ಪಾರ್ಕಿಂಗ್ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ. ಆದರೆ ತೀರ್ಥಹಳ್ಳಿ ರಸ್ತೆಯಲ್ಲಿರುವ ಖಾಸಗಿ ಬಾರ್ ಮುಂಭಾಗದಲ್ಲಿ ಮದ್ಯ ಪ್ರಿಯರು ಬೇಕಾಬಿಟ್ಟಿ ವಾಹನ ನಿಲ್ಲಿಸುವ ಮೂಲಕ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದಾರೆ.

ಹೌದು ತೀರ್ಥಹಳ್ಳಿ ರಸ್ತೆಯ ಖಾಸಗಿ ಬಾರ್ ಮುಂಭಾಗದಲ್ಲಿ ಮದ್ಯ ಪ್ರಿಯರು ತಮ್ಮ ಬೈಕ್ ಗಳನ್ನು ಬೇಕಾಬಿಟ್ಟಿಯಾಗಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ವಾಹನ್ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದ್ದಾರೆ , ಇನ್ನೂ ಕೆಲ ಕಾರ್ ಗಳಲ್ಲಿ ಬರುವ ಮದ್ಯ ಪ್ರಿಯರು ಮಧ್ಯ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಹಿಂದೆ ಬರುವ ವಾಹನಗಳಿ ದಾರಿಯಿಲ್ಲದಂತೆ ಮಾಡುತ್ತಾರೆ ಇನ್ನೂ ಈ ಬಗ್ಗೆ ಅವರ ಬಳಿ ಪ್ರಶ್ನಿಸಲು ಹೋದರೆ ಸಾರ್ವಜನಿಕರ ಮೈ ಮೇಲೆ ಬರುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಇನ್ನೂ ಈ ಖಾಸಗಿ ಬಾರ್ ನ ಮಾಲೀಕರು ತಮ್ಮಲ್ಲಿಗೆ ಬರುವ ಮದ್ಯಪ್ರಿಯರಿಗೆ ಈ ಬಗ್ಗೆ ಅರಿವು ಮೂಡಿಸುವ ಬದಲು ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ನಟಿಸುತ್ತಾರೆ. ಟ್ರಾಫಿಕ್ ಸಮಸ್ಯೆ ಬಗ್ಗೆ ಅವರಿಗೇನು ಅಲ್ವಾ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಅವರೇ ಹೇಳಿರುವಂತೆ ಸುಂದರವಾಗಿರುವ ರಿಪ್ಪನ್ ಪೇಟೆಯಂತಹ ಊರನ್ನು  ನೋಡಿ ಇಲ್ಲಿನ ಜನರಿಗೆ ಅನುಕೂಲವಾಗಲೆಂದು ಈ ಊರಲ್ಲೊಂದು ಸುರಪಾನ ಸಂಸ್ಥೆ ನಡೆಸಲು ಬಂದವರಲ್ಲವೇ…!!! ಅವರಿಗೆ ಸ್ವಲ್ಪವಾದರೂ ನಮ್ಮೂರಿನ ಬಗ್ಗೆ ಕಾಳಜಿ ಇದ್ದಲ್ಲಿ ಈ ಸಮಸ್ಯೆಯನ್ನು ನಾವಿಲ್ಲಿ ಪ್ರಸ್ತಾಪಿಸುವ ಪ್ರಮೇಯವೇ ಬರುತ್ತಿರಲಿಲ್ಲವೇನೋ…!!

ಕ್ರಮಕ್ಕೆ ಮುಂದಾಗಲಿ ಪೊಲೀಸ್ ಇಲಾಖೆ

ಕಳೆದ ಮೂರು ವರ್ಷಗಳ ಹಿಂದೆ ರಿಪ್ಪನ್ ಪೇಟೆ ಪೊಲೀಸರು ಪಟ್ಟಣದ ನಾಲ್ಕು ರಸ್ತೆಗಳಲ್ಲಿ ದಿನ ಬಿಟ್ಟು ದಿನ ಒಂದು ಕಡೆ ಪಾರ್ಕಿಂಗ್ ವ್ಯವಸ್ಥೆ ತರುವ ಮೂಲಕ ಪಟ್ಟಣದ ಟ್ರಾಫಿಕ್ ಸಮಸ್ಯೆಯನ್ನು ತಹಬದಿಗೆ ತಂದಿದ್ದರು ಆದರೆ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಆ ವ್ಯವಸ್ಥೆ ನಿಲ್ಲಿಸಲಾಗಿತ್ತು.. ಈಗ ರಸ್ತೆ ಅಗಲೀಕರಣ ಕಾಮಗಾರಿ ಮುಕ್ತಾಯವಾಗಿದ್ದು ಮತ್ತೆ ಅದೇ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಸಮಸ್ಯೆ ಮುಕ್ತಿ ದೊರಕಿಸಕೊಡಬೇಕಾಗಿ ಪೋಸ್ಟ್ ಮ್ಯಾನ್ ನ್ಯೂಸ್ ವತಿಯಿಂದ ಕಳಕಳಿಯ ಮನವಿ ಹಾಗೇಯೆ ತೀರ್ಥಹಳ್ಳಿ ರಸ್ತೆಯ ಖಾಸಗಿ ಬಾರ್ ಮುಂಭಾಗ ಬೇಕಾಬಿಟ್ಟಿ ವಾಹನ ನಿಲ್ಲಿಸುವ ಮದ್ಯಪ್ರಿಯರಿಗೆ ಹಾಗೂ ಸಂಬಂಧಪಟ್ಟವರ ಮೇಲೆ ಭಾರಿ ಪ್ರಮಾಣದ ದಂಡ ವಿಧಿಸಬೇಕಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.