POSTMANNEWS

ನೈಜ ಸುದ್ದಿ ನೇರ ಬಿತ್ತರ..

ಸರಕು ಅಡಿಕೆಗೆ ದಾಖಲೆ ಬೆಲೆ; ಕ್ವಿಂಟಲ್‌ಗೆ ₹98,896

ಸರಕು ಅಡಿಕೆಗೆ ದಾಖಲೆ ಬೆಲೆ; ಕ್ವಿಂಟಲ್‌ಗೆ ₹98,896

ಶಿವಮೊಗ್ಗ : ಈ ವರ್ಷ ಸರಕು ಅಡಿಕೆ ಬೆಲೆಯು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಇಲ್ಲಿನ ಎಪಿಎಂಸಿಯಲ್ಲಿ ಮಂಗಳವಾರ ಸರಕು (ಹಸ) ಅಡಿಕೆ ದರ ಕ್ವಿಂಟಲ್‌ಗೆ ₹98,896, ಬೆಟ್ಟೆ ಕ್ವಿಂಟಲ್‌ಗೆ ₹58,709 ಹಾಗೂ ರಾಶಿ ಅಡಿಕೆ ಕ್ವಿಂಟಲ್‌ಗೆ ₹57,059ಕ್ಕೆ ಮಾರಾಟವಾಗಿದೆ.

ಎಪಿಎಂಸಿಗೆ 9 ಕ್ವಿಂಟಲ್‌ ಸರಕು ಅಡಿಕೆ, 488 ಕ್ವಿಂಟಲ್ ರಾಶಿ ಅಡಿಕೆ ಹಾಗೂ 231 ಕ್ವಿಂಟಲ್ ಗೊರಬಲು ಹಾಗೂ 26 ಕ್ವಿಂಟಲ್ ಬೆಟ್ಟೆ ಅಡಿಕೆ ಆವಕವಾಗಿತ್ತು.

ಜನವರಿಯಲ್ಲಿ ಕೊಯ್ಲು ಮುಗಿದಿದ್ದು, ಕಳೆದ ವರ್ಷದ ಅಡಿಕೆ ಬಹುತೇಕ ಮಾರಾಟವಾಗಿದೆ. ಬೆಳೆಗಾರರು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಅಡಿಕೆಯನ್ನು ಈಗ ಮಾರುಕಟ್ಟೆಗೆ ತರುತ್ತಿದ್ದಾರೆ. ಬೇಡಿಕೆಯಷ್ಟು ಪೂರೈಕೆ ಆಗದ ಕಾರಣ ಬೆಲೆ ಏರಿಕೆ ಆಗಿದೆ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *