ರಿಪ್ಪನ್ ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ – ವಿವಿಧೆಡೆ ಭಾರಿ ಅನಾಹುತ

ರಿಪ್ಪನ್ ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ – ವಿವಿಧೆಡೆ ಭಾರಿ ಅನಾಹುತ ರಿಪ್ಪನ್ ಪೇಟೆ : ದಿನದಿಂದ ದಿನಕ್ಕೆ ಏರುತ್ತಿದ್ದ ತಾಪಮಾನದಿಂದ ಕಂಗೆಟ್ಟಿದ್ದ ಹೊಸನಗರ ತಾಲೂಕಿನ ಜನತೆಗೆ ಇಂದು ಮಧ್ಯಾಹ್ನ ಸುರಿದ ದಿಢೀರ್ ಮಳೆ ಭಾರೀ ಸಮಾಧಾನ ತಂದಿದೆ. ವಾತಾವರಣ ತಂಪಾಗಿದೆ. ಬೀಸಿದ ಗಾಳಿಗೆ ಸುಮಾರು ವಿದ್ಯುತ್ ಕಂಬಳು ಮುರಿದು ಬಿದ್ದಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ. ಅಲ್ಲಲ್ಲಿ ಮರಗಳು ಮುರಿದು ಬಿದ್ದಿದೆ.ಇನ್ನೂ ಮನೆ ಮೇಲೆ ಮರಗಳು ಬಿದ್ದಿವೆ. ಮಧ್ಯಾಹ್ನ ಸುಮಾರು 1.00 ಗಂಟೆಯಿಂದ 1-45…

Read More

ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಬ್ಯಾಂಕ್ ಜನಾರ್ಧನ್ ನಿಧನ

ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಬ್ಯಾಂಕ್ ಜನಾರ್ಧನ್ ನಿಧನ ಕನ್ನಡದ ಹಿರಿಯ ಹಾಸ್ಯ ನಟ ಬ್ಯಾಂಕ್‌ ಜನಾರ್ಧನ್‌ (76) ಅವರು ನಿಧನರಾಗಿದ್ದಾರೆ. ಎ.13 ರ ರವಿವಾರ ಮಧ್ಯರಾತ್ರಿ ಸುಮಾರು 2.30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. 1965 ರಲ್ಲಿ ಅಂದು ಜಯಲಕ್ಷ್ಮಿ ಬ್ಯಾಂಕ್ ನಲ್ಲಿ 50 ರೂಪಾಯಿಗೆ ಕೆಲಸಕ್ಕೆ ಸೇರಿದ್ದರು. ರಾತ್ರಿ ವೇಳೆ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್ ನಲ್ಲಿ ಅಸಿಸ್ಟೆಂಟ್…

Read More

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸನ್ಮಾನ ಸಮಾರಂಭ | ಭಾರತ ದೇಶದಲ್ಲಿ ಮಹಿಳೆಗೆ ಅಗ್ರಸ್ಥಾನ ; ಶಾಸಕ ಬೇಳೂರು ಗೋಪಾಲಕೃಷ್ಣ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸನ್ಮಾನ ಸಮಾರಂಭ | ಭಾರತ ದೇಶದಲ್ಲಿ ಮಹಿಳೆಗೆ ಅಗ್ರಸ್ಥಾನ ; ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್ ಪೇಟೆ : ಮಹಿಳೆ ಅಬಲೆಯಲ್ಲ ಭಾರತ ದೇಶದಲ್ಲಿ ಮಹಿಳೆಗೆ ಗೌರವ ಸ್ಥಾನ ನೀಡಲಾಗಿದೆ. ರಾಜ್ಯದಲ್ಲಿ ಈಡಿಗ ಸಮಾಜ ನಾಲ್ಕನೇ ಸ್ಥಾನದಲ್ಲಿದೆ. ಸಮಾಜದ ಸಂಘಟನೆಯ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಶಾಸಕ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಟ್ಟಣದ ರಾಮಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮಪಾಲನಾ ಸಂಘ…

Read More

ಚಾಕೊಲೇಟ್  ಕೊಡಿಸುವ ನೆಪ ಹೇಳಿ 5 ವರ್ಷದ ಬಾಲಕಿಯ ಅತ್ಯಾ*ಚಾರಕ್ಕೆ ಯತ್ನಿಸಿ ಕೊಲೆ –  ಘಟನೆ ನಡೆದ 6 ಗಂಟೆಯೊಳಗೆ ಪೊಲೀಸರ ಗುಂಡೇಟಿಗೆ ಆರೋಪಿ ಬಲಿ!

ಚಾಕೊಲೇಟ್  ಕೊಡಿಸುವ ನೆಪ ಹೇಳಿ 5 ವರ್ಷದ ಬಾಲಕಿಯ ಅತ್ಯಾ*ಚಾರಕ್ಕೆ ಯತ್ನಿಸಿ ಕೊಲೆ –  ಘಟನೆ ನಡೆದ 6 ಗಂಟೆಯೊಳಗೆ ಪೊಲೀಸರ ಗುಂಡೇಟಿಗೆ ಆರೋಪಿ ಬಲಿ! ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ, ಕೊಲೆ ಮಾಡಿದ್ದ ಬಿಹಾರ ಮೂಲದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಐದು ವರ್ಷದ ಬಾಲಕಿಯ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಿದ್ದರು. ಇನ್ನು ತನಿಖೆಗೆ ಇಳಿದ…

Read More

ಮುಚ್ಚುವ ಶಾಲೆಯನ್ನು ಪೋಷಕರ ಸಹಕಾರದಲ್ಲಿ ಉಳಿಸಿದ ಕೀರ್ತಿ ಶಿಕ್ಷಕರಿಗೆ ಸಲ್ಲಬೇಕು – ಎಚ್ ಆರ್ ಕೃಷಮೂರ್ತಿ

ಮುಚ್ಚುವ ಶಾಲೆಯನ್ನು ಪೋಷಕರ ಸಹಕಾರದಲ್ಲಿ ಉಳಿಸಿದ ಕೀರ್ತಿ ಶಿಕ್ಷಕರಿಗೆ ಸಲ್ಲಬೇಕು – ಎಚ್ ಆರ್ ಕೃಷಮೂರ್ತಿ ಹೊನ್ನಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷೀಕೋತ್ಸವ ಕಾರ್ಯಕ್ರಮ ರಿಪ್ಪನ್‌ಪೇಟೆ; ಹೊನ್ನೆಬೈಲು ಸರ್ಕಾರಿ ಶಾಲೆಯ ಮಕ್ಕಳಿಲ್ಲದೆ ಮುಚ್ಚುವ ಹಂತದಲ್ಲಿದ್ದು ನಮ್ಮ ಶಿಕ್ಷಕರು ಊರಿನಲ್ಲಿ ಸಮೀಕ್ಷೆ ನಡೆಸುವ ಮೂಲಕ ಪೋಷಕರ ಮನವೂಲಿಸಿ ಮಕ್ಕಳು ದಾಖಲಿಸಿ ಶಾಲೆಯ ಪ್ರಗತಿಗೆ ಹಗಲಿರುಳು ಶ್ರಮಿಸಿ ಶಾಲೆಯ ಪ್ರಗತಿಗೆ ಕಾರಣರಾಗಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಶಿಕ್ಷಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದರು. ರಿಪ್ಪನ್‌ಪೇಟೆ ಸಮೀಪದ ಹುಂಚ ಗ್ರಾಮ…

Read More

RIPPONPETE | ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ಕಲಾಹೋಮ ಕುಂಭಾಭಿಷೇಕ ಸಾಮೂಹಿಕ ಸತ್ಯನಾರಾಯಣ ಪೂಜೆ ರಿಪ್ಪನ್‌ಪೇಟೆ;-ಇಲ್ಲಿನ ವಿನಾಯಕ ನಗರದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ 26 ನೇ ವರ್ಷದ ವಾರ್ಷೀಕೋತ್ಸವದ ಅಂಗವಾಗಿ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಸಂಭ್ರಮ ಸಡಗರದೊಂದಿಗೆ ನೇರವೇರಿದವು. ಶನಿವಾರ ಬೆಳಗ್ಗೆ 10 ಗಂಟೆಗೆ ದೇವಿಯ ಸನ್ನಿಧಿಯಲ್ಲಿ ಕಲಾಹೋಮ ಕುಂಭಾಭಿಷೇಕ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು. ಈ ಸಂದರ್ಭದಲ್ಲಿ ದೇವಸ್ಥಾನ ಸೇವಾ ಸಮಿತಿಯವರು ಮತ್ತು ಗ್ರಾಮಸ್ಥರು ಹಾಜರಿದ್ದರು.

Read More

RIPPONPETE | ಏ.13 ರಂದು ರಾಮಮಂದಿರದಲ್ಲಿ ವಿಶ್ವ ಮಹಿಳಾ ದಿನಾಚರಣೆ

RIPPONPETE | ಏ.13 ರಂದು ರಾಮಮಂದಿರದಲ್ಲಿ ವಿಶ್ವ ಮಹಿಳಾ ದಿನಾಚರಣೆ ರಿಪ್ಪನ್ ಪೇಟೆ : ಬ್ರಹ್ಮಶ್ರೀನಾರಾಯಣಗುರು ಧರ್ಮಪಾಲನಾ ಸಂಘ ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲೆ ಮಹಿಳಾ ಘಟಕದವರು ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಏಪ್ರಿಲ್ 13 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ರಿಪ್ಪನ್‌ಪೇಟೆಯ ರಾಮಮಂದಿರದಲ್ಲಿ  ವಿಶ್ವಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಬಿ.ಎಸ್.ಎನ್.ಡಿ.ಪಿ ಘಟಕದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಲೇಖನ ಚಂದ್ರನಾಯ್ಕ್ ತಿಳಿಸಿದರು. ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು…

Read More

ಶರಾವತಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

ಶರಾವತಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು ಸಾಗರ, ಏ.೧೨ : ಶರಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ, ಸಾಗರ ತಾಲೂಕು ತಾಳಗುಪ್ಪ ಸಮೀಪದ ಬೆಳ್ಳೆಣ್ಣೆ ಎಂಬಲ್ಲಿ  ನಡೆದಿದೆ. ತಾಳಗುಪ್ಪದ ರಂಗನಾಥ ಕಾಲೋನಿ ನಿವಾಸಿಯಾದ ಮಾಜಿ ಎಪಿಎಂಸಿ ನಾಮ ನಿರ್ದೇಶಿತ ಸದಸ್ಯರಾದ ಚಂದ್ರಶೇಖರ (೫೮) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಸ್ಥಳಿಯರು ನೀರಿನಿಂದ ಶವ ಹೊರತೆಗೆದಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸೌಜನ್ಯ ಪ್ರಕರಣ – ಯುಟ್ಯೂಬರ್ ಸಮೀರ್ ವಿರುದ್ಧ ಹರ್ಷೇಂದ್ರ ಹೆಗ್ಗಡೆ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ

ಸೌಜನ್ಯ ಪ್ರಕರಣ – ಯುಟ್ಯೂಬರ್ ಸಮೀರ್ ವಿರುದ್ಧ ಹರ್ಷೇಂದ್ರ ಹೆಗ್ಗಡೆ  10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಕೋರ್ಟ್ ಆದೇಶ ಉಲ್ಲಂಘಿಸಿ ಎರಡನೆ ವಿಡಿಯೊ ಬಿಟ್ಟಿರುವ ಆರೋಪ ಹಿನ್ನೆಲೆ ʼದೂತʼ ಹೆಸರಿನ ಯೂಟ್ಯೂಬರ್ ಸಮೀರ್ ಎಂ ಡಿ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರದ ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ಈ ಹಿಂದೆ ಮಾಡಿರುವ ವಿಡಿಯೋ ಪ್ರಕರಣ ಸಂಬಂಧ 10 ಕೋಟಿ…

Read More

ಲಾರಿ, ಬೈಕ್ ನಡುವೆ ಡಿಕ್ಕಿ – ಯುವಕ ಸಾವು

ಲಾರಿ, ಬೈಕ್ ನಡುವೆ ಡಿಕ್ಕಿ – ಯುವಕ ಸಾವು ಭದ್ರಾವತಿ, ಏ. 12: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ ಸವಾರ ಮೃತಪಟ್ಟ ಘಟನೆ ಹೊಳೆಹೊನ್ನೂರು ಸಮೀಪದ ಭದ್ರಾವತಿ ರಸ್ತೆಯ ಸಂತೋಷ್ ರೈಸ್ ಮಿಲ್ ಸಮೀಪ  ರಾತ್ರಿ ನಡೆದಿದೆ. ಮಾರಶೆಟ್ಟಿಹಳ್ಳಿ ಗ್ರಾಮದ ನಿವಾಸಿ ವಿನುತ್ ಘೋರ್ಪಡೆ (23) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮೃತ ಯುವಕ ಭದ್ರಾವತಿ ತಾಲೂಕಿನ ಹಿರಿಯ ರೈತ ಮುಖಂಡ ಯಶವಂತರಾವ್ ಘೋರ್ಪಡೆ ಅವರ ಮೊಮ್ಮಗನಾಗಿದ್ದಾನೆ. ಭದ್ರಾವತಿಯ ಖಾಸಗಿ ನರ್ಸಿಂಗ್ ಆಸ್ಪತ್ರೆಯಲ್ಲಿ…

Read More