ಕಲಾಹೋಮ ಕುಂಭಾಭಿಷೇಕ ಸಾಮೂಹಿಕ ಸತ್ಯನಾರಾಯಣ ಪೂಜೆ
ರಿಪ್ಪನ್‌ಪೇಟೆ;-ಇಲ್ಲಿನ ವಿನಾಯಕ ನಗರದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ 26 ನೇ ವರ್ಷದ ವಾರ್ಷೀಕೋತ್ಸವದ ಅಂಗವಾಗಿ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಸಂಭ್ರಮ ಸಡಗರದೊಂದಿಗೆ ನೇರವೇರಿದವು.
ಶನಿವಾರ ಬೆಳಗ್ಗೆ 10 ಗಂಟೆಗೆ ದೇವಿಯ ಸನ್ನಿಧಿಯಲ್ಲಿ ಕಲಾಹೋಮ ಕುಂಭಾಭಿಷೇಕ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನ ಸೇವಾ ಸಮಿತಿಯವರು ಮತ್ತು ಗ್ರಾಮಸ್ಥರು ಹಾಜರಿದ್ದರು.