Headlines

ಮುಚ್ಚುವ ಶಾಲೆಯನ್ನು ಪೋಷಕರ ಸಹಕಾರದಲ್ಲಿ ಉಳಿಸಿದ ಕೀರ್ತಿ ಶಿಕ್ಷಕರಿಗೆ ಸಲ್ಲಬೇಕು – ಎಚ್ ಆರ್ ಕೃಷಮೂರ್ತಿ

ಮುಚ್ಚುವ ಶಾಲೆಯನ್ನು ಪೋಷಕರ ಸಹಕಾರದಲ್ಲಿ ಉಳಿಸಿದ ಕೀರ್ತಿ ಶಿಕ್ಷಕರಿಗೆ ಸಲ್ಲಬೇಕು – ಎಚ್ ಆರ್ ಕೃಷಮೂರ್ತಿ

ಹೊನ್ನಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷೀಕೋತ್ಸವ ಕಾರ್ಯಕ್ರಮ

ರಿಪ್ಪನ್‌ಪೇಟೆ; ಹೊನ್ನೆಬೈಲು ಸರ್ಕಾರಿ ಶಾಲೆಯ ಮಕ್ಕಳಿಲ್ಲದೆ ಮುಚ್ಚುವ ಹಂತದಲ್ಲಿದ್ದು ನಮ್ಮ ಶಿಕ್ಷಕರು ಊರಿನಲ್ಲಿ ಸಮೀಕ್ಷೆ ನಡೆಸುವ ಮೂಲಕ ಪೋಷಕರ ಮನವೂಲಿಸಿ ಮಕ್ಕಳು ದಾಖಲಿಸಿ ಶಾಲೆಯ ಪ್ರಗತಿಗೆ ಹಗಲಿರುಳು ಶ್ರಮಿಸಿ ಶಾಲೆಯ ಪ್ರಗತಿಗೆ ಕಾರಣರಾಗಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಶಿಕ್ಷಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದರು.

ರಿಪ್ಪನ್‌ಪೇಟೆ ಸಮೀಪದ ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನೆಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತ್ತು ಅಂಗನವಾಡಿಯ ಚಿಣ್ಣರ ಸಾಂಸ್ಕೃತಿಕ ಸಹಿ ಸಿಂಚನ ಶಾಲಾ ವಾರ್ಷೀಕೋತ್ಸವ ಕಾರ್ಯಕ್ರಮದಲ್ಲಿ “ನಲಿಕಲಿ ಕೊಠಡಿ ಉದ್ಘಾಟಿಸಿ ಮಾತನಾಡಿ ಭೌತಿಕ ಹಾಗೂ ಬೌದ್ದಿಕ ವಾತಾವರಣಕ್ಕೆ ಶಿಕ್ಷಕರು ಕ್ರಿಯಾಶೀಲತೆ ಕಾರಣ.ಮಕ್ಕಳ ಕಲಿಕೆಯು ಉತ್ತಮವಾಗಿಸಲು ಶಿಕ್ಷಕರ ಪರಿಶ್ರಮವೇ ಸಾಕ್ಷಿಯಾಗಿದೆ ಎಂದು ಹೇಳಿ  ಅಕ್ಷರ ಅಲಂಕಾರಗಳಿAದ ಬಣ್ಣ ಬಣ್ಣದ ವರ್ಣರಂಜಿತ ಗೋಡೆ ಬರಹದಿಂದ ಕೂಡಿದ ಕೊಠಡಿಯಲ್ಲಿನ ಚಿತ್ರಪಟಗಳು ಮಕ್ಕಳಿಗೆ ಕುಳಿತು ಕೊಳ್ಳಲು ಅಸನದ ವ್ಯವಸ್ಥೆಗಳ ನಲಿಕಲಿ ಕೊಠಡಿಯನ್ನು ಕುರಿತು ಶಿಕ್ಷಕರ ಕ್ರಿಯಾಶೀಲತೆ ಕಾರ್ಯದಕ್ಷತೆಯನ್ನು ಪ್ರಶಂಸಿ ಈ ಎಲ್ಲ ಶಾಲಾ ಚಟುವಟಿಕೆಗೆ ನವೋತ್ಸಾಹಿ ಹಳೆ ವಿದ್ಯಾರ್ಥಿಗಳ ಮತ್ತು ಅಕ್ಕಪಕ್ಕ ಗ್ರಾಮಗಳ ಗ್ರಾಮಸ್ಥರ ಸಹಕಾರದಿಂದ ಶಿಕ್ಷಕವರ್ಗ ಪೋಷಕರೊಂದಿಗಿನ ಒಡನಾಟವೇ  ಈ ಶಾಲೆ ಆಭಿವೃದ್ದಿ ಹೊಂದಲು ಕಾರಣವಾಗಿದೆ ಎಂದರು.

ಶಾಲಾ ವಾರ್ಷೀಕೋತ್ಸವ ಮತ್ತು ಚಿಣ್ಣರ ಸಾಂಸ್ಕೃತಿಕ ಸಹಿ ಸಿಂಚನ ಕಾರ್ಯಕ್ರಮವನ್ನು ಹುಂಚ ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಸುಮಂಗಳ ದೇವರಾಜ್ ಉದ್ಘಾಟಿಸಿದರು.

ಎಸ್.ಡಿ.ಎಂ.ಸಿ.ಆದ್ಯಕ್ಷ ಸುಧಾಕರ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಪ್ರಾಚಾರ್ಯ ಶಾಂತಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಇಸಿಓ ಕರಿಬಸಪ್ಪ, ಶಿವಪ್ಪ, ಎಸ್.ಡಿ.ಎಂ.ಸಿ.ಸಮಿತಿ ಪದಾಧಿಕಾರಿಗಳು  ಮಾಜಿ ಸೈನಿಕರು ಮತ್ತು ರೈತರು ಶಾಲಾ ಮಕ್ಕಳ ಪೋಷಕವರ್ಗ ಹಳೆ ವಿದ್ಯಾರ್ಥಿ ಸಮೂಹ ಹಾಜರಿದ್ದರು.

ಶಾಲೆಯ ವಾರ್ಷೀಕೋತ್ಸªದ ಯಶಸ್ವಿಗೆ ತನು ಮನ ಧನವನ್ನು ನೀಡುವ ಮೂಲಕ  ಸಹಕರಿಸಿದ ಅಕ್ಕಪಕ್ಕದ ಮತ್ತು ಹೊನ್ನೆಬೈಲು ಗ್ರಾಮಗಳ ಗ್ರಾಮಸ್ಥರು ಪೋಷಕವರ್ಗ  ಶಾಲಾ ಶಿಕ್ಷಕ ವೃಂದ  ಆಭಿನಂದಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು,ಸಿ.ಆರ್.ಪಿ. ದೀಪ ಪ್ರಾಸ್ತಾವಿಕವಾಗಿ ಮಾತನಾಡಿದರು,ಸಹ ಶಿಕ್ಷಕ ಕುಮಾರಸ್ವಾಮಿ ನಿರೂಪಿಸಿದರು.ಅಂಗನವಾಡಿ ಶಿಕ್ಷಕಿ ಮಾನಸ ವಂದಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಮತ್ತು ಅಂಗನವಾಡಿ ಮಕ್ಕಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *