ಶಂಕಿತ ಮಂಗನ ಖಾಯಿಲೆಗೆ(KFD) ಎಂಟು ವರ್ಷದ ಬಾಲಕ ಬಲಿ

ಶಂಕಿತ ಮಂಗನ ಖಾಯಿಲೆಗೆ(KFD) ಎಂಟು ವರ್ಷದ ಬಾಲಕ ಬಲಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದತ್ತರಾಜಪುರ ಗ್ರಾಮದ ರಚಿತ್ (08) ಎಂಬ ಬಾಲಕ ಕೆಎಫ್ ಡಿ ಗೆ ಬಲಿಯಾಗಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಕಳೆದ 15 ದಿನಗಳ ಹಿಂದೆ ರಚಿತ್ ಮತ್ತು ಆತನ ಸಹೋದರಿಗೆ ಜ್ವರ ಕಾಣಿಸಿಕೊಂಡಿತ್ತು. ಇಬ್ಬರನ್ನೂ. ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಬ್ಬರಿಗೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಹೋದರಿಗೆ ಮೊದಲು ಕೆಎಫ್ ಡಿ ಪಾಸಿಟಿವ್ ಬಂದಿದೆ. ಆದರೆ ರಜತ್ ಗೆ ನಾರ್ಮಲ್ ಎಂದು ಬಂದಿತ್ತು. ನಂತರ ಪಾಸಿಟಿವ್ ಬಂದಿದೆ. ಎಂದು ಕುಟುಂಬ ತಿಳಿಸಿದೆ
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚೇತರಿಸಿಕೊಂಡ ಸಹೋದರಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ರಚಿತ್ ಚಿಕಿತ್ಸೆ ಫಲಿಸದೆ ತಡರಾತ್ರಿ 8:30ರ ವೇಳೆಗೆ ಆಸ್ಪತ್ರೆಯಲ್ಲಿ ಸಾವನ್ನಪಿದ್ದಾರೆ. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಚಿದೆ.ಇಬ್ಬರೂ ಶಾಲೆಗೆ ಹೋಗಿ ಬರುತ್ತಿದ್ದರೆ ಬಿಟ್ಟರೆ ಕಾಡಿಗೆ ಹೋಗಿರುವ ಬಗ್ಗೆ ಹಿಸ್ಟರಿಯಿಲ್ಲ ಎನ್ನುತ್ತದೆ ಕುಟುಂಬ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಹೆಚ್ ಒ ರಜತ್ ಸಾವು ಕೆಎಫ್ ಡಿಯಿಂದ ಎಂಬುದಕ್ಕೆ ಪುಣೆಯಿಂದ ವರದಿ ಇನ್ನಷ್ಟೇ ಬರಬೇಕಿದೆ ಅಲ್ಲಿಯವರೆಗೂ ಇದು ಕೆಎಫ್ ಡಿ ಶಂಕಿತ ಎಂದು ಪ್ರತಿಕ್ರಿಯಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಕೊನೇರಿಪುರ ಗ್ರಾಮದ 54 ವರ್ಷದ ಮಹಿಳೆ ಕೆಎಫ್‌ಡಿ ಸೋಂಕಿನಿಂದ ಕಳೆದ ಫೆಬ್ರವರಿ ತಿಂಗಳಲ್ಲಿ ಸಾವನ್ನಪ್ಪಿದ್ದರು.