ಬ್ಯೂಟಿಪಾರ್ಲರ್ ಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಆರೋಪ – ಶ್ವೇತಾ ಆಚಾರ್ಯ ಮೇಲೆ ಎಫ್ಐಆರ್ ದಾಖಲು

ಬ್ಯೂಟಿಪಾರ್ಲರ್ ಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಆರೋಪ – ಎಫ್ಐಆರ್ ದಾಖಲು

ಬ್ಯೂಟಿಪಾರ್ಲರ್ ಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಆರೋಪ – ಎಫ್ಐಆರ್ ದಾಖಲು

ರಿಪ್ಪನ್ ಪೇಟೆ : ಕ್ಷುಲ್ಲಕ ವಿಚಾರಕ್ಕೆ ಬ್ಯೂಟಿ ಪಾರ್ಲರ್ ಗೆ ನುಗ್ಗಿ ಮಾಲೀಕಳ ಮೇಲೆ ಹಲ್ಲೆ ಮಾಡಿ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆಯ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಸಾಗರ ರಸ್ತೆ ನಿವಾಸಿ ಶ್ವೇತಾ ಆಚಾರ್ಯ ವಿರುದ್ಸ ಪ್ರಕರಣ ದಾಖಲಾಗಿದೆ.ತೀರ್ಥಹಳ್ಳಿ ರಸ್ತೆ ನಿವಾಸಿ ಹಾಗೂ ಸಾಗರ ರಸ್ತೆಯ ಶಶಿ ಬ್ಯೂಟಿ ಪಾರ್ಲರ್ ಮಾಲೀಕರಾದ ಶಶಿಕಲಾ ಕೆ ಎನ್ ದೂರುದಾರರಾಗಿದ್ದಾರೆ.

ದೂರಿನಲ್ಲೇನಿದೆ..!!??

ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆ ನಿವಾಸಿ ಶಶಿಕಲಾ ಕೆ ಎನ್  ಸಾಗರ ರಸ್ತೆಯಲಿ ಶಶಿ ಲೇಡಿಸ್ ಬ್ಯೂಟಿ ಪಾರ್ಲರ್ ನಡೆಸಿಕೊಂಡಿರುತ್ತಾರೆ. ಪಾರ್ಲರ್ ಸಹಾಯಕ್ಕಾಗಿ ಪ್ರಿಯಾಂಕ ಮತ್ತು ಸಿಂಧುಜ ಎಂಬುವವರನ್ನು ಕೆಲಸಕ್ಕೆ ಇರಿಸಿಕೊಂಡಿದ್ದು, ದಿನಾಂಕ 15/04/2025 ರಂದು ಸುಮಾರು 11-00 ಗಂಟೆಗೆ ಸಮಯದಲ್ಲಿ ರಿಪ್ಪನ್ ಪೇಟೆ ವಾಸಿಯಾದ ಶ್ವೇತಾ ಜಿ ಎನ್ ಎಂಬುವರು ಬೂಟಿ ಪಾರ್ಲರ್ ಗೆ ನುಗಿ ಯಾವಳೇ ನೀನು ನಾನು ತೆಗೆದುಕೊಂಡಾ ಆರ್ಡರ್ ಅನ್ನು ನೀನು ಹೇಗೆ ಆಟೆಂಡ್ ಮಾಡಿದಿಯಾ ನೀನು 2 ವರ್ಷ ಗಂಡನನ್ನು ಬಿಟ್ಟಿದಿಯಾ ಎರಡು ಎರಡು ಆದಾರ್ ಕಾರ್ಡ್ ಇಟ್ಟುಕೊಂಡಿದಿಯಾ ನಿನ್ನ ಹಣೆ-ಬರಹ ನನಗೆ ಗೊತ್ತು ಮುಖಕೆ, ಮಾಸ್ಕ್ ಹಾಕಿಕೊಂಡು ಓಡಾಡುತ್ತಿಯಾ, ನಿನ್ನ ಮುಖಕೆ ಆಸಿಡ್ ಹಾಕಿಸುತ್ತೆನೆ ಅಂತ ಬಾಯಿಗೆ ಬಂದಂತೆ ಕೂಗಾಡಿದ್ದಾರೆ ಈ ಸಂಧರ್ಭದಲ್ಲಿ ಶಶಿಕಲಾ ರವರು ನೀನು ಅಂಗಡಿಯಿಂದ ಹೊರಗೆ ಹೋಗು ಕಸ್ಟಮರ್ ಇದ್ದಾರೆ ಹಾಗೆಲಾ ವರ್ತಿಸಬೇಡ ಎಂದು ಹೇಳಿದರು, ಕೂಡ ಶ್ವೇತಾ ಜಿ ಎನ್ ರವರು ಜಗಳ ಮಾಡುವುದನ್ನು ಅವರ ಮೊಬೈಲ್ ನಲ್ಲಿ ವೀಡಿಯೊ ಮಾಡಿಕೊಂಡು ನಿನ್ ಮತ್ತು ನಿನ್ನ ಗಂಡ ಮಕ್ಕಳ ಮರ್ಯಾದೆ ತೆಗೆಯುತ್ತೆನೆ ಅಂತ ಬೆದರಿಕೆ ಹಾಕಿದ್ದಾರೆ.

ಈ ಸಂಧರ್ಭದಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ನಿರ್ವಹಿಸುವ ಪ್ರಿಯಾಂಕರವರು ಶ್ವೇತಾ ಇವರು ಗಲಾಟೆ ಮಾಡುವುದನ್ನು ವಿಡಿಯೋ ಮಾಡುತ್ತಿದ್ದು ಅವರಿಗೂ ಸಹ ಏನೇ ಏಡಿಯೋ ಮಾಡುತ್ತಿಯಾ ನಿನ್ನ ಪೋಟೋ ಜೂಮ್ ಮಾಡಿ ಪೇಸ್-ಬುಕ್ ಅಲ್ಲಿ ಹಾಕುತ್ತೆನೆ ನಿನ್ನ, ಲೈಪ್ ಹಾಳು ಮಾಡುತ್ತೆನೆ ನನ್ನ ತಂಟೆಗೆ ಬಂದರೆ ಬಿಡುವುದಿಲ್ಲಾ ಎಂದು ಎಂದು ಹೇಳಿ ಶಶಿಕಲಾ ರವರನ್ನು ಜೋರಾಗಿ ತಳ್ಳಿ ದರಿಂದ ಶಶಿಕಲಾ ಶೋಕೆಸ್‌ ಹತ್ತಿರ ಹೋಗಿ ಬಿದ್ದಿದ್ದರಿಂದ ಎಡಭುಜಕೆ ಒಳಪೆಟ್ಟಾಯಿತು. ಬ್ಯೂಟಿ ಪಾರ್ಲರ್ ಒಳಗಿದ್ದ ಕಪಾಟು ಹಾಳಾಗಿದ್ದು ಶ್ವೇತಾ ಅಂಗಡಿಯೊಳಗಿದ್ದ ಸೀರೆಯನ್ನು ಕಿತ್ತು ಹಾಕಿ ಪಾನ್ನಿ ಐಟಂಗಳನ್ನು ಚೆಲ್ಲಾಪಿಲಿ ಮಾಡಿ ಹೋಗಿರುತ್ತಾರೆ. ಶಶಿಕಲಾ ರವರಿಗೆ ಭುಜದ ನೋವು ಜಾಸ್ತಿಯಾದರಿಂದ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಪಾರ್ಲರ್ ನಲ್ಲಿ, ಐಟಂಗಳನ್ನು ಹಾಳು ಮಾಡಿ, ಅವಾಚ್ಯವಾಗಿ ಬೈದು, ಹಲ್ಲೆ, ಮಾಡಿದ ಶ್ವೇತಾರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಶಶಿಕಲಾ ರವರು ದೂರು ಸಲ್ಲಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ BNS 331, 352 , 115(2) 351(2) ,324(4) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *